01 November 2021 KANNADA Murli Today | Brahma Kumaris
Read and Listen today’s Gyan Murli in Kannada
31 October 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ನಿಮ್ಮ ಚಲನೆಯು ಬಹಳ-ಬಹಳ ಮಧುರ ರಾಯಲ್ ಆಗಿರಲಿ, ಕ್ರೋಧದ ಭೂತವು ಇರಬಾರದು”
ಪ್ರಶ್ನೆ:: -
21 ಜನ್ಮಗಳ ಪ್ರಾಲಬ್ಧವನ್ನು ಪಡೆಯಲು ಮಕ್ಕಳು ಯಾವ ಮಾತಿನ ಮೇಲೆ ಅವಶ್ಯವಾಗಿ ಗಮನವನ್ನು ಇಡಬೇಕಾಗಿದೆ?
ಉತ್ತರ:-
ಈ ಪ್ರಪಂಚದಲ್ಲಿರುತ್ತಾ ಎಲ್ಲವನ್ನೂ ಮಾಡುತ್ತಾ ಬುದ್ಧಿಯೋಗವು ಒಬ್ಬ ಸತ್ಯ ಪ್ರಿಯತಮನ ಜೊತೆಯಿರಲಿ. ತಂದೆಯ ಗೌರವ ಕಳೆಯುವಂತಹ ಯಾವುದೇ ಕೆಟ್ಟ ಹವ್ಯಾಸವಿರಬಾರದು. ಮನೆಯಲ್ಲಿದ್ದರೂ ಸಹ ಇಷ್ಟ್ಟು ಪ್ರೀತಿಯಿಂದ ಇರಿ ಇವರಲ್ಲಿ ಬಹಳ ದೈವೀ ಗುಣವಿದೆ ಎಂದು ಅನ್ಯರು ಹೇಳುವಂತಿರಲಿ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ…
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಗೀತೆಯನ್ನು ಕೇಳಿದಿರಿ, ಇದರ ಅರ್ಥವನ್ನು ಅವಶ್ಯವಾಗಿ ಮಕ್ಕಳು ತಿಳಿದುಕೊಂಡು ಬಿಟ್ಟಿರಿ. ತಂದೆಯು ಬಂದು ಹೊಸ ಹೊಸ ಮಾತುಗಳನ್ನು ತಿಳಿಸುತ್ತಾರೆ. ಹೊಸ ಪ್ರಪಂಚದ ಹೊಸ ಯುಗಕ್ಕಾಗಿ ಈ ಮಾತುಗಳನ್ನು ಮಕ್ಕಳು 5000 ವರ್ಷಗಳ ಮೊದಲೂ ಕೇಳಿದ್ದಿರಿ, ಈಗ ಪುನಃ ಕೇಳುತ್ತಿದ್ದೀರಿ. ಬಾಕಿ ಮಧ್ಯದಲ್ಲಿ ಕೇವಲ ಭಕ್ತಿಮಾರ್ಗದ ಮಾತುಗಳನ್ನೇ ಕೇಳಿದಿರಿ. ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ, ಅಲ್ಲಿ ಜ್ಞಾನಮಾರ್ಗದ ಪ್ರಾಲಬ್ಧವಿರುತ್ತದೆ. ಈಗ ನೀವು ಮಕ್ಕಳು ಹೊಸ ಪ್ರಪಂಚಕ್ಕಾಗಿ ಸತ್ಯ ಸಂಪಾದನೆ ಮಾಡಿಕೊಳ್ಳುತ್ತಿದ್ದೀರಿ. ಜ್ಞಾನಕ್ಕೆ ಆದಾಯದ ಮೂಲವೆಂದು ಹೇಳಲಾಗುತ್ತದೆ. ವಿದ್ಯೆಯ ಮೂಲಕವೇ ಬ್ಯಾರಿಸ್ಟರ್, ಇಂಜಿನಿಯರ್ ಇತ್ಯಾದಿ ಆಗುತ್ತಾರೆ, ಸಂಪಾದನೆಯೂ ಆಗುತ್ತದೆ. ನೀವು ಈ ವಿದ್ಯೆಯಿಂದ ರಾಜಾಧಿರಾಜರಾಗುತ್ತೀರಿ. ಇದು ಎಷ್ಟು ದೊಡ್ಡ ಸಂಪಾದನೆಯಾಗಿದೆ! ಈಗ ನೀವು ಮಕ್ಕಳಿಗೆ ಈ ನಿಶ್ಚಯವಿದೆ, ಒಂದುವೇಳೆ ಸ್ವಲ್ಪ ಸಂಶಯವಿದ್ದರೂ ಸಹ ಮುಂದೆ ನಡೆಯುತ್ತಾ-ನಡೆಯುತ್ತಾ ನಿಶ್ಚಯವಾಗುತ್ತಾ ಹೋಗುವುದು, ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ತಂದೆಯ ಮಕ್ಕಳಾದರು ಎಂದರೆ ಆಸ್ತಿಗೆ ಮಾಲೀಕನಾದರು. ಯಾವ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆಯೋ ಅವರೇ ನಮ್ಮನ್ನು ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. ಇದಂತೂ ಮಕ್ಕಳಿಗೆ ನಿಶ್ಚಯವಿರಬೇಕು. ಇದನ್ನೂ ತಿಳಿದುಕೊಂಡಿದ್ದೀರಿ – ಇಬ್ಬರು ತಂದೆಯರಿದ್ದಾರೆ, ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆ. ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಲೌಕಿಕ ತಂದೆಗೆ ಎಂದೂ ಪರಮಪಿತನೆಂದು ಹೇಳುವುದಿಲ್ಲ. ಎಲ್ಲರ ಸುಖದಾತ, ಶಾಂತಿದಾತ, ಅವರೊಬ್ಬರೇ ಪಾರಲೌಕಿಕ ತಂದೆಯಾಗಿದ್ದಾರೆ. ಸತ್ಯಯುಗದಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ. ಉಳಿದ ಆತ್ಮರು ಶಾಂತಿಧಾಮದಲ್ಲಿ ಇರುತ್ತಾರೆ. ಸತ್ಯಯುಗದಲ್ಲಿ ನಿಮಗೆ ಸುಖ, ಶಾಂತಿ, ಹಣ-ಅಂತಸ್ತು, ನಿರೋಗಿಕಾಯ ಎಲ್ಲವೂ ಇತ್ತು. ಆದ್ದರಿಂದ ಅಂತಹ ಪ್ರಿಯಾತಿ ಪ್ರಿಯ ತಂದೆಯನ್ನು ಎಲ್ಲರೂ ಕರೆಯುತ್ತಾರೆ. ಸಾಧು-ಸಂತರೂ ಸಹ ಸಾಧನೆ ಮಾಡುತ್ತಾರೆ ಆದರೆ ಯಾವುದರ ಸಾಧನೆ ಮಾಡುತ್ತಾರೆಂದು ತಿಳಿದುಕೊಂಡಿಲ್ಲ. ಅವರು ಬ್ರಹ್ಮತತ್ವದ ಸಾಧನೆ ಮಾಡುತ್ತಾರೆ. ನಾವು ಬ್ರಹ್ಮತತ್ವದಲ್ಲಿ ಲೀನವಾಗಿ ಬಿಡಬೇಕೆಂದು ಹೇಳುತ್ತಾರೆ, ಆದರೆ ಲೀನವಾಗಲು ಸಾಧ್ಯವಿಲ್ಲ. ಬ್ರಹ್ಮತತ್ವವನ್ನು ನೆನಪು ಮಾಡುವುದರಿಂದ ಪಾಪವು ಕಳೆಯುತ್ತದೆಯೇ? ತಂದೆಯು ತಿಳಿಸುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿರಿ. ಸರ್ವಶಕ್ತಿವಂತನು ನಾನಾಗಿದ್ದೇನೆಯೋ ಅಥವಾ ಇರುವಂತಹ ಸ್ಥಾನವಾದ ಬ್ರಹ್ಮತತ್ವವೋ? ಬ್ರಹ್ಮಮಹಾತತ್ವದಲ್ಲಿ ಎಲ್ಲಾ ಆತ್ಮರು ನಿವಾಸ ಮಾಡುತ್ತಾರೆ, ಆ ಬ್ರಹ್ಮತತ್ವವನ್ನೇ ಅವರು ಭಗವಂತನೆಂದು ತಿಳಿದುಕೊಂಡಿದ್ದಾರೆ. ಹೇಗೆ ಭಾರತವಾಸಿಗಳು ಹಿಂದೂಸ್ಥಾನದಲ್ಲಿರುವ ಕಾರಣ ತಮ್ಮ ಧರ್ಮವನ್ನು ಹಿಂದೂ ಎಂದು ತಿಳಿದುಕೊಂಡಿದ್ದಾರೆಯೋ ಹಾಗೆಯೇ ಬ್ರಹ್ಮತತ್ವ ಇರುವ ಸ್ಥಾನವನ್ನೇ ಪರಮಾತ್ಮನೆಂದು ತಿಳಿದುಕೊಂಡಿದ್ದಾರೆ. ಅದು ಬ್ರಹ್ಮಾಂಡವಾಗಿದೆ. ಅಲ್ಲಿ ಆತ್ಮರು ಜ್ಯೋತಿರ್ಬಿಂದು ಅಂಡಾಕಾರದಲ್ಲಿರುತ್ತಾರೆ, ಆದ್ದರಿಂದ ಅದಕ್ಕೆ ಬ್ರಹ್ಮಾಂಡವೆಂದು ಹೇಳುತ್ತಾರೆ. ಇದು ಮನುಷ್ಯ ಸೃಷ್ಟಿಯಾಗಿದೆ, ಬ್ರಹ್ಮಾಂಡವೇ ಬೇರೆ ಮನುಷ್ಯ ಸೃಷ್ಟಿಯೇ ಬೇರೆಯಾಗಿದೆ. ಆತ್ಮವೆಂದರೇನು, ಇದು ಯಾರಿಗೂ ತಿಳಿದಿಲ್ಲ. ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ ಮತ್ತೆ ಹೇಳುತ್ತಾರೆ – ಆತ್ಮವು ಅಂಗುಷ್ಟಾಕಾರವಾಗಿದೆ ಎಂದು. ಆದರೆ ತಂದೆಯು ತಿಳಿಸುತ್ತಾರೆ – ಆತ್ಮವು ಬಹಳ ಸೂಕ್ಷ್ಮ ಬಿಂದುವಾಗಿದೆ, ಅದನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ, ಇದನ್ನು ಸೆರೆ ಹಿಡಿಯಲು ಅಥವಾ ನೋಡಲು ಬಹಳ ಪ್ರಯತ್ನ ಪಡುತ್ತಾರೆ ಆದರೆ ಯಾರಿಗೂ ಅರ್ಥವಾಗುವುದಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಅಂದಮೇಲೆ ಈಗ ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುವುದರಲ್ಲಿ ತಂದೆಗೆ ಸಹಯೋಗಿಗಳಾಗಬೇಕಾಗಿದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಶಿವ ಜಯಂತಿಯನ್ನೂ ಭಾರತದಲ್ಲಿಯೇ ಆಚರಿಸುತ್ತಾರೆ, ಹೇಗೆ ಕ್ರೈಸ್ಟ್ ಇದ್ದು ಹೋದರು. ಕ್ರಿಶ್ಚಿಯನ್ನರು ಕ್ರಿಸ್ಮಸ್ನ್ನು ಆಚರಿಸುತ್ತಲೇ ಇರುತ್ತಾರೆ. ಕ್ರೈಸ್ಟ್ ಯಾವಾಗ ಬಂದರು ಎಂಬುದನ್ನೂ ತಿಳಿದುಕೊಂಡಿರುತ್ತಾರೆ ಆದರೆ ಭಾರತವಾಸಿಗಳಿಗೆ ಮಾತ್ರ ತಂದೆಯು ಯಾವಾಗ ಬಂದಿದ್ದರು ಎಂಬುದು ಗೊತ್ತಿಲ್ಲ. ಕೃಷ್ಣನು ಯಾವಾಗ ಬಂದಿದ್ದನೆಂದು ಯಾರ ಬಗ್ಗೆಯೂ ಅವರಿಗೆ ತಿಳಿದಿಲ್ಲ. ಮಹಿಮೆಯೆಲ್ಲವೂ ಕೃಷ್ಣನಿಗೆ ಹಾಡುತ್ತಾರೆ, ಉಯ್ಯಾಲೆಯಲ್ಲಿ ತೂಗುತ್ತಾರೆ, ಪ್ರೀತಿ ಮಾಡುತ್ತಾರೆ ಆದರೆ ಕೃಷ್ಣನ ಜನ್ಮವು ಯಾವಾಗ ಆಯಿತೆಂದು ತಿಳಿದಿಲ್ಲ. ದ್ವಾಪರದಲ್ಲಿ ಗೀತೆಯನ್ನು ತಿಳಿಸಿದನೆಂದು ಹೇಳುತ್ತಾರೆ ಆದರೆ ಕೃಷ್ಣನು ದ್ವಾಪರದಲ್ಲಿ ಬರುವುದೇ ಇಲ್ಲ. ಲೀಲೆಯು ಒಬ್ಬ ತಂದೆಯದಾಗಿದೆ ಆದ್ದರಿಂದ ನಿಮ್ಮ ಗತಿಮತವು ನಿಮಗೇ ಗೊತ್ತು ಎಂದು ತಂದೆಗೆ ಹೇಳುತ್ತಾರೆ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ, ಮೊದಲೇ ತಾಯಿಗೆ ಈಗ ಯೋಗಬಲದಿಂದ ಮಗು ಜನಿಸಲಿದೆ ಎಂದು ಸಾಕ್ಷಾತ್ಕಾರವಾಗುತ್ತದೆ, ಅಲ್ಲಿ ಶರೀರವನ್ನೂ ಸಹ ಅದೇರೀತಿ ಬಿಡುತ್ತಾರೆ. ಸರ್ಪದಂತೆ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ವಾಸ್ತವದಲ್ಲಿ ಈ ಉದಾಹರಣೆ ಕೊಡಲು ಸಾಧ್ಯವಿಲ್ಲ. ನೀವು ವಿಕಾರಿ ಮನುಷ್ಯರಿಗೆ ಜ್ಞಾನದ ಭೂ ಭೂ ಮಾಡಿ ತಮೋಪ್ರಧಾನದಿಂದ ಸತೋಪ್ರಧಾನರನ್ನಾಗಿ ಮಾಡಿ ಬಿಡುತ್ತೀರಿ. ಇದು ನಿಮ್ಮ ಕರ್ತವ್ಯವಾಗಿದೆ, ಜ್ಞಾನದ ಭೂ ಭೂ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಿ ಬಿಡುತ್ತೀರಿ. ಆಮೆಯ ಉದಾಹರಣೆಯೂ ಸಹ ಈ ಸಮಯದ್ದಾಗಿದೆ, ಕರ್ಮ ಮಾಡಿದ ನಂತರ ಎಷ್ಟು ಸಮಯ ಸಿಗುವುದೋ ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ, ನಮ್ಮದು ಇದು ಅಂತಿಮ ಜನ್ಮವಾಗಿದೆ, ಈಗ ನಾಟಕವು ಮುಕ್ತಾಯವಾಗಲಿದೆ. ಹಳೆಯ ಶರೀರವಾಗಿದೆ, ಇದರ ಕರ್ಮಭೋಗವನ್ನೂ ಮುಗಿಸಬೇಕಾಗಿದೆ. ಯಾವಾಗ ಸತೋಪ್ರಧಾನರಾಗಿ ಬಿಡುತ್ತೀರೋ ಆಗ ಕರ್ಮಾತೀತ ಸ್ಥಿತಿಯಾಗುವುದು. ನಂತರ ನಾವು ಈ ಶರೀರದಲ್ಲಿರಲು ಸಾಧ್ಯವಿಲ್ಲ. ಕರ್ಮಾತೀತ ಸ್ಥಿತಿಯಾಯಿತೆಂದರೆ ಶರೀರವನ್ನು ಬಿಟ್ಟು ಬಿಡುತ್ತೇವೆ, ನಂತರ ಯುದ್ಧವು ಆರಂಭವಾಗುತ್ತದೆ. ಸೊಳ್ಳೆಗಳ ರೀತಿ ಎಲ್ಲಾ ಶರೀರಗಳು ಸಮಾಪ್ತಿಯಾಗಿ ಆತ್ಮರು ಹೊರಟು ಹೋಗುವರು. ಪವಿತ್ರರಾಗದೇ ಯಾರೂ ಹೋಗಲು ಸಾಧ್ಯವಿಲ್ಲ. ಇದು ರಾವಣನು ಸ್ಥಾಪನೆ ಮಾಡಿರುವ ದುಃಖಧಾಮವಾಗಿದೆ ಮತ್ತು ಸತ್ಯಯುಗವು ರಾಮನು ಸ್ಥಾಪನೆ ಮಾಡಿರುವ ಶಿವಾಲಯವಾಗಿದೆ. ವಾಸ್ತವದಲ್ಲಿ ಪರಮಾತ್ಮನ ಹೆಸರು ಶಿವನೆಂದಾಗಿದೆ, ರಾಮನೆಂದಲ್ಲ. ಸತ್ಯಯುಗ ಶಿವಾಲಯದಲ್ಲಿ ಎಲ್ಲರೂ ದೇವತೆಗಳಿರುತ್ತಾರೆ ಮತ್ತೆ ಭಕ್ತಿಮಾರ್ಗದಲ್ಲಿ ಶಿವನ ಪ್ರತಿಮೆಗಾಗಿ ಮಂದಿರ, ಶಿವಾಲಯ, ಇತ್ಯಾದಿಗಳನ್ನು ಕಟ್ಟಿಸುತ್ತಾರೆ. ಈಗ ಇದು ಶಿವ ತಂದೆಯ ಸಿಂಹಾಸನವಾಗಿದೆ. ಆತ್ಮವು ಈ ಸಿಂಹಾಸನದ ಮೇಲೆ ವಿರಾಜಮಾನವಾಗಿದೆ. ತಂದೆಯು ಇವರ (ಬ್ರಹ್ಮಾ) ಆತ್ಮದ ಪಕ್ಕದಲ್ಲಿಯೇ ಬಂದು ವಿರಾಜಮಾನವಾಗುತ್ತಾರೆ, ಓದಿಸುತ್ತಾರೆ. ಸದಾ ಇರುವುದಿಲ್ಲ. ನೆನಪು ಮಾಡಿದಾಗ ಬರುವರು, ತಂದೆಯು ತಿಳಿಸುತ್ತಾರೆ – ನಾನು ನಿಮ್ಮ ಬೇಹದ್ದಿನ ತಂದೆಯಾಗಿದ್ದೇನೆ, ಆಸ್ತಿಯು ನನ್ನಿಂದಲೇ ನಿಮಗೆ ಸಿಗಬೇಕಾಗಿದೆ. ಬ್ರಹ್ಮನು ಬೇಹದ್ದಿನ ತಂದೆಯಲ್ಲ ಆದ್ದರಿಂದ ನೀವು ನನ್ನನ್ನು ನೆನಪು ಮಾಡಿ. ಮಧುರ ಮಕ್ಕಳಿಗೆ ತಿಳಿದಿದೆ- ತಂದೆಯು ಜ್ಞಾನಸಾಗರನಾಗಿದ್ದಾರೆ, ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ನೀವು ಮಕ್ಕಳೂ ಸಹ ಪ್ರೀತಿಯ ಸಾಗರರಾಗಬೇಕಾಗಿದೆ. ಸ್ತ್ರೀ-ಪುರುಷರು ಒಬ್ಬರು ಇನ್ನೊಬ್ಬರಿಗೆ ಸತ್ಯಪ್ರೀತಿಯನ್ನು ಕೊಡುವುದಿಲ್ಲ, ಅವರಂತೂ ಕಾಮ ವಿಕಾರವನ್ನೇ ಪ್ರೀತಿಯೆಂದು ತಿಳಿಯುತ್ತಾರೆ. ಆದರೆ ತಂದೆಯು ಹೇಳಿದ್ದಾರೆ- ಕಾಮ ಮಹಾಶತ್ರುವಾಗಿದೆ. ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುವುದಾಗಿದೆ. ದೇವತೆಗಳು ನಿರ್ವಿಕಾರಿಯಾಗಿದ್ದರು ಆದ್ದರಿಂದಲೇ ಕೃಷ್ಣನಂತಹ ಮಗುವಾಗಲಿ ಕೃಷ್ಣ್ಣನಂತಹ ಪತಿ ಸಿಗಲಿ ಎಂದು ಹೇಳುತ್ತಾರೆ. ಕೃಷ್ಣ ಪುರಿಯನ್ನು ನೆನಪು ಮಾಡುತ್ತಾರಲ್ಲವೆ. ಈಗ ತಂದೆಯು ಕೃಷ್ಣ ಪುರಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ನೀವು ಸ್ವಯಂ ಶ್ರೀಕೃಷ್ಣನಂತೆ ಅಥವಾ ಮೋಹನನಂತೆ ಆಗುತ್ತೀರಿ. ಅನ್ಯ ರಾಜಕುಮಾರ-ಕುಮಾರಿಯರೂ ಇರುತ್ತಾರಲ್ಲವೆ ಅಂದಮೇಲೆ ಎಲ್ಲರೂ ಇಲ್ಲಿಯೇ ತಯಾರಾಗುತ್ತಿದ್ದಾರೆ. ಅವರದೂ ಪಟ್ಟಿಯಿರುತ್ತದೆ. 8 ಮಣಿಗಳ ಮಾಲೆಯೂ ಇದೆ, 108 ಮಣಿಗಳೂ ಇದೆ. ಮನುಷ್ಯರು ನವರತ್ನಗಳ ಉಂಗುರವನ್ನು ಧರಿಸುತ್ತಾರೆ. ಈಗ ಈ 8 ರತ್ನಗಳು ಯಾರು? ಮಧ್ಯದಲ್ಲಿ ಯಾರಿದ್ದಾರೆ? ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ – ಮಧುರಾತಿ ಮಧುರ ತಂದೆಯ ಮೂಲಕ ನಾವು ರತ್ನಗಳಾಗುತ್ತಿದ್ದೇವೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಪರಸ್ಪರ ಬಹಳ ಪ್ರೀತಿಯಿಂದ ನಡೆಯಬೇಕಾಗಿದೆ, ಇಲ್ಲದಿದ್ದರೆ ತಂದೆಯ ಹೆಸರನ್ನು ಕೆಡಿಸುತ್ತೀರಿ ಮತ್ತೆ ಸದ್ಗುರುವಿನ ನಿಂದನೆ ಮಾಡಿಸುವವರು ಪದವಿ ಪಡೆಯಲು ಸಾಧ್ಯವಿಲ್ಲ, ಎಲ್ಲರಿಗೆ ಮಂತ್ರವನ್ನು ತಿಳಿಸಿ – ಒಬ್ಬ ತಂದೆಯನ್ನು ನೆನಪು ಮಾಡಿದರೆ ತುಕ್ಕು ಬಿಟ್ಟು ಹೋಗುವುದು. ಮನೆಯಲ್ಲಿಯೂ ಸಹ ಇಷ್ಟು ಪ್ರೀತಿಯಿಂದ ನಡೆದುಕೊಳ್ಳಬೇಕು ನಿಮ್ಮನ್ನು ನೋಡಿ, ಇವರಲ್ಲಿ ಕ್ರೋಧವಿಲ್ಲ, ಬಹಳ ಪ್ರೀತಿ ಬಂದು ಬಿಟ್ಟಿದೆ ಎಂದು ಹೇಳುವಂತಿರಬೇಕು. ಸಿಗರೇಟ್ ಸೇದುವುದು ಕೆಟ್ಟ ಹವ್ಯಾಸವಾಗಿದೆ. ಈಗ ಇಂತಹ ಎಲ್ಲಾ ಹವ್ಯಾಸಗಳನ್ನು ಬಿಟ್ಟು ಬಿಡಬೇಕಾಗಿದೆ. ದೈವೀ ಗುಣಗಳನ್ನು ಇಲ್ಲಿಯೇ ಧಾರಣೆ ಮಾಡಿಕೊಳ್ಳಬೇಕು. ರಾಜಧಾನಿಯು ಸ್ಥಾಪನೆ ಮಾಡುವುದರಲ್ಲಿ ಅನ್ಯ ಧರ್ಮದವರು ರಾಜಧಾನಿಯನ್ನು ಸ್ಥಾಪನೆ ಮಾಡುವುದಿಲ್ಲ. ಅವರು ಅಂತಿಮದಲ್ಲಿ ಪರಮಧಾಮದಿಂದ ಬರುತ್ತಾ ಇರುತ್ತಾರೆ. ನೀವು 21 ಜನ್ಮಗಳ ಪ್ರಾಲಬ್ಧವನ್ನು ರೂಪಿಸಿಕೊಳ್ಳುತ್ತಿದ್ದೀರಿ, ಇದರಲ್ಲಿ ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಆದರೂ ಸಹ ಪುರುಷಾರ್ಥ ಮಾಡಿ ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಂದುವೇಳೆ ಕ್ರೋಧದಿಂದ ಮಾತನಾಡುತ್ತೀರೆಂದರೆ ಇವರಲ್ಲಿ ಭೂತವಿದೆಯೆಂದು ಎಲ್ಲರೂ ಹೇಳತೊಡಗುತ್ತಾರೆ ಅಂದರೆ ಬೇಹದ್ದಿನ ತಂದೆಯ ಗೌರವವನ್ನು ಕಳೆದಿರಿ. ಇಂತಹವರು ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವರು? ಬಹಳ ಮಧುರ ಅನಾಸಕ್ತರಾಗಬೇಕಾಗಿದೆ. ಇಲ್ಲಿರುತ್ತಾ ಎಲ್ಲವನ್ನೂ ಮಾಡುತ್ತಾ ಯೋಗವು ಪ್ರಿಯತಮನ ಜೊತೆಯಿರಲಿ. ತಂದೆಯು ತಿಳಿಸಿದ್ದಾರೆ – ನನ್ನನ್ನು ನೆನಪು ಮಾಡಿದರೆ ಪಾಪಗಳು ಭಸ್ಮವಾಗುತ್ತವೆ, ಇದಕ್ಕೆ ಯೋಗಾಗ್ನಿಯೆಂದು ಹೇಳಲಾಗುತ್ತದೆ, ಇಲ್ಲಿ ಹಠಯೋಗದ ಅವಶ್ಯಕತೆಯಿಲ್ಲ. ತಮ್ಮ ಶರೀರವನ್ನು ಸ್ವಾಸ್ಥ್ಯವಾಗಿ ಇಟ್ಟುಕೊಳ್ಳಬೇಕು. ಇದು ಅತ್ಯಮೂಲ್ಯ ಶರೀರವಾಗಿದೆ, ಶುದ್ಧ ಭೋಜನವನ್ನೇ ಸ್ವೀಕರಿಸಬೇಕಾಗಿದೆ. ದೇವತೆಗಳಿಗೆ ಎಂತಹ ಭೋಗವನ್ನು ಇಡುತ್ತಾರೆ, ಶ್ರೀನಾಥ ದ್ವಾರದಲ್ಲಿ ಹೋಗಿ ನೋಡಿರಿ. ಬಂಗಾಳದಲ್ಲಂತೂ ಕಾಳಿಗೆ ಕುರಿಯ ಮಾಂಸದ ನೈವೇದ್ಯವನ್ನು ಇಡುತ್ತಾರೆ. ವಿವೇಕಾನಂದರು ಮೀನು ಇತ್ಯಾದಿಯೆಲ್ಲವನ್ನೂ ತಿನ್ನುತ್ತಿದ್ದರು, ಪಿತೃಪಕ್ಷದವರಿಗೂ ಸಹ ಮೀನನ್ನು ತಿನ್ನಿಸುತ್ತಾರೆ ಇಲ್ಲದಿದ್ದರೆ ಅವರು ಮುನಿಸಿಕೊಳ್ಳುವರೆಂದು ತಿಳಿಯುತ್ತಾರೆ. ಯಾರು ಈ ಪದ್ಧತಿಯನ್ನು ಮಾಡಿದರೋ ಅದೇ ಪದ್ಧತಿಯು ನಡೆದುಬರುತ್ತಿದೆ. ದೇವಿ-ದೇವತೆಗಳ ರಾಜ್ಯದಲ್ಲಿ ಯಾವುದೇ ಪಾಪವಾಗುವುದಿಲ್ಲ ಅದು ರಾಮರಾಜ್ಯವಾಗಿದೆ. ಅಲ್ಲಿ ಕರ್ಮವು ಅಕರ್ಮವಾಗುತ್ತದೆ, ಇಲ್ಲಿನ ಕರ್ಮವು ವಿಕರ್ಮವಾಗುತ್ತದೆ. ಮನುಷ್ಯರು ಹರಿದ್ವಾರದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ, ಕೃಷ್ಣನಿಗೆ ಹರಿಯೆಂದು ಹೇಳುತ್ತಾರೆ. ಕೃಷ್ಣನು ಸತ್ಯಯುಗದಲ್ಲಿರುತ್ತಾನೆ, ವಾಸ್ತವದಲ್ಲಿ ಹರಿ ಎಂಬ ಹೆಸರು ಶಿವನಿಗಿದೆ. ಹರಿ ಎಂದರೆ ದುಃಖವನ್ನು ಹರಿಸುವವರು ಎಂದರ್ಥ ಆದರೆ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿ ಕೃಷ್ಣನನ್ನು ಹರಿಯೆಂದು ತಿಳಿದುಕೊಂಡಿದ್ದಾರೆ. ವಾಸ್ತವದಲ್ಲಿ ದುಃಖವನ್ನು ಹರಿಸುವವರು ಶಿವ ತಂದೆಯಾಗಿದ್ದಾರೆ. ಸತ್ಯಯುಗಕ್ಕೆ ಹರಿದ್ವಾರವೆಂದು ಹೇಳಲಾಗುತ್ತದೆ. ಭಕ್ತಿಮಾರ್ಗದಲ್ಲಿ ಏನು ಬಂದರೆ ಅದನ್ನು ಹೇಳುತ್ತಿರುತ್ತಾರೆ.
ತಂದೆಯು ತಿಳಿಸುತ್ತಾರೆ – ನಾನು ಸಂಗಮಯುಗದಲ್ಲಿಯೇ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ಬರುತ್ತೇನೆ, ರಾವಣನು ಹಳೆಯ ಶತ್ರುವಾಗಿದ್ದಾನೆ. ರಾವಣನನ್ನು ಪ್ರತೀ ವರ್ಷವೂ ಸುಡುತ್ತಾರೆ, ಎಷ್ಟೊಂದು ಹಣವನ್ನು ಖರ್ಚು ಮಾಡುತ್ತಾರೆ. ಸಮಯವೂ ವ್ಯರ್ಥ, ಹಣವೂ ವ್ಯರ್ಥವಾಗುತ್ತದೆ. ಬಂಗಾಳದಲ್ಲಿ ಎಷ್ಟೊಂದು ದೇವಿಯರನ್ನು ಮಾಡಿಸುತ್ತಾರೆ ಅವರಿಗೆ ತಿನ್ನಿಸಿ, ಕುಡಿಸಿ ಪೂಜೆ ಮಾಡಿ ನಂತರ ತೆಗೆದುಕೊಂಡು ಹೋಗಿ ಮುಳುಗಿಸುತ್ತಾರೆ. ಇದರ ಮೇಲೆ ಒಂದು ಗೀತೆಯೂ ಇದೆ. ಮಕ್ಕಳು ಬಹಳ ಮಧುರರಾಗಬೇಕಾಗಿದೆ, ಎಂದೂ ಸಹ ಕ್ರೋಧದಿಂದ ಮಾತನಾಡಬಾರದು. ತಂದೆಯೊಂದಿಗೆ ಎಂದೂ ಮುನಿಸಿಕೊಳ್ಳಬಾರದು. ಮುನಿಸಿಕೊಂಡು ಒಂದುವೇಳೆ ವಿದ್ಯಾಭ್ಯಾಸವನ್ನು ಬಿಟ್ಟರೆ ತನ್ನ ಕಾಲಿನ ಮೇಲೆ ಕೊಡಲಿ ಹಾಕಿಕೊಂಡಂತೆ. ನೀವಿಲ್ಲಿ ವಿಶ್ವದ ಮಾಲೀಕರಾಗಲು ಬಂದಿದ್ದೀರಿ. ಮಹಾರಾಜ ಶ್ರೀ ನಾರಾಯಣ, ಮಹಾರಾಣಿ ಎಂದು ಶ್ರೀ ಲಕ್ಷ್ಮಿಗೆ ಹೇಳಲಾಗುತ್ತದೆ. ಬಾಕಿ ಶ್ರೀ ಶ್ರೀ ಎಂಬುದು ಶಿವ ತಂದೆಯ ಬಿರುದಾಗಿದೆ. ಶ್ರೀ ಎಂದು ದೇವತೆಗಳಿಗೆ ಹೇಳಲಾಗುತ್ತದೆ. ಶ್ರೀ ಎಂದರೆ ಶ್ರೇಷ್ಠರು.
ನೀವೀಗ ವಿಚಾರ ಮಾಡಿರಿ – ಮಾಯೆಯು ನಮ್ಮ ತಲೆಯನ್ನು ತಿರುಗಿಸಿ ನಮ್ಮನ್ನು ಹೇಗೆ ಮಾಡಿ ಬಿಟ್ಟಿದೆ. ಭಾರತವು ಎಷ್ಟು ಸಾಹುಕಾರನಾಗಿತ್ತು! ನಂತರ ಹೇಗೆ ಕಂಗಾಲಾಯಿತು? ಏನಾಯಿತು? ಏನನ್ನೂ ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ನಾವೇ ದೇವತೆಗಳಾಗಿದ್ದೆವು ನಂತರ ಕ್ಷತ್ರಿಯರಾದೆವು. ಅವರು ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ, ಆದರೆ ಹಮ್ ಸೋ ಸೋ ಹಮ್ನ ಅರ್ಥವು ಎಷ್ಟು ಸಹಜವಾಗಿದೆ! ಮನುಷ್ಯನದು ಒಂದೇ ಜನ್ಮವೆಂದು ಅವರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ – ಮನುಷ್ಯರದು 84 ಜನ್ಮಗಳಿರುತ್ತವೆ, ಆ 84 ಜನ್ಮಗಳಲ್ಲಿ ನಿಮ್ಮದು ಈ ಸಂಗಮದ ಒಂದು ಜನ್ಮವು ದುರ್ಲಭವಾಗಿದೆ. ನೀವೀಗ ಬೇಹದ್ದಿನ ತಂದೆಯಿಂದ ಸ್ವರ್ಗದ ಆಸ್ತಿಯನ್ನು ಪಡೆಯುತ್ತೀರಿ, ನೀವು ಬಹಳ ರಾಯಲ್ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ನಿಮ್ಮಲ್ಲಿ ಎಷ್ಟೊಂದು ರಾಯಲ್ಟಿ ಇರಬೇಕು! ರಾಯಲ್ ಮನುಷ್ಯರು ಎಂದೂ ಜೋರಾಗಿ ಮಾತನಾಡುವುದಿಲ್ಲ. ಪ್ರಪಂಚದಲ್ಲಿ ಮನೆ-ಮನೆಯಲ್ಲಿ ಎಷ್ಟೊಂದು ಹೊಡೆದಾಟವಿದೆ! ಸ್ವರ್ಗದಲ್ಲಿ ಇಂತಹ ಯಾವುದೇ ಮಾತಿಲ್ಲ. ಈ ತಂದೆಯೂ ಸಹ (ಬ್ರಹ್ಮಾ) ವಲ್ಲಭಾಚಾರಿ ಕುಲದವರಾಗಿದ್ದರು ಆದರೂ ಆ ಸತ್ಯಯುಗದ ದೇವತೆಗಳೆಲ್ಲಿ, ಈಗಿನ ಪತಿತ ವೈಷ್ಣವರೆಲ್ಲಿ! ವೈಷ್ಣವರಾಗಿದ್ದರೆ ಅವರು ವಿಕಾರದಲ್ಲಿ ಹೋಗುವುದಿಲ್ಲವೆಂದಲ್ಲ, ರಾವಣ ರಾಜ್ಯದಲ್ಲಿ ಎಲ್ಲರೂ ವಿಕಾರದಿಂದ ಜನ್ಮ ಪಡೆಯುತ್ತಾರೆ. ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ, ನೀವೀಗ ಸಂಪೂರ್ಣ ನಿರ್ವಿಕಾರಿಗಳಾಗುತ್ತಿದ್ದೀರಿ ಮತ್ತು ಯೋಗಬಲದ ಮೂಲಕ ವಿಶ್ವದ ಮಾಲೀಕರಾಗುತ್ತೀರಿ, ನಿಮ್ಮ ಚಲನೆಯು ಬಹಳ ಮಧುರ ರಾಯಲ್ ಆಗಿರಲಿ. ಯಾರೊಂದಿಗೂ ವಾದ ಅಥವಾ ಶಾಸ್ತ್ರವಾದ ಮಾಡಬಾರದು. ಅವರಂತೂ ಯಾವಾಗ ಶಾಸ್ತ್ರವಾದ ಮಾಡಲು ಕುಳಿತುಕೊಳ್ಳುತ್ತಾರೆಯೋ ಆಗ ಒಬ್ಬರು ಇನ್ನೊಬ್ಬರಿಗೆ ಕೋಲಿನಿಂದಲೂ ಹೊಡೆದು ಬಿಡುತ್ತಾರೆ. ಪಾಪ! ಅವರದೇನೂ ದೋಷವಿಲ್ಲ, ಪಾಪ ಅವರು ಈ ಜ್ಞಾನವನ್ನೇ ತಿಳಿದುಕೊಂಡಿಲ್ಲ. ಇದು ಆತ್ಮಿಕ ಜ್ಞಾನವಾಗಿದೆ, ಆತ್ಮಿಕ ತಂದೆಯಿಂದಲೇ ಸಿಗುತ್ತದೆ. ಅವರು ಜ್ಞಾನಸಾಗರನಾಗಿದ್ದಾರೆ, ಅವರ ಶರೀರದ ಹೆಸರಿಲ್ಲ. ಅವರು ಅವ್ಯಕ್ತ ಮೂರ್ತಿಯಾಗಿದ್ದಾರೆ. ತಿಳಿಸುತ್ತಾರೆ, ನನ್ನ ಹೆಸರಾಗಿದೆ ಶಿವ, ನಾನು ಸ್ಥೂಲ ಅಥವಾ ಸೂಕ್ಷ್ಮ ಶರೀರವನ್ನು ತೆಗೆದುಕೊಳ್ಳುವುದಿಲ್ಲ. ಜ್ಞಾನಸಾಗರ ಆನಂದ ಸಾಗರನೆಂದು ನನಗೇ ಹೇಳುತ್ತಾರೆ. ಶಾಸ್ತ್ರಗಳಲ್ಲಿ ಏನೇನನ್ನು ಬರೆದು ಬಿಟ್ಟಿದ್ದಾರೆ. ಹನುಮಂತನು ಪವನ ಪುತ್ರನಾಗಿದ್ದನು ಎಂದು ಹೇಳುತ್ತಾರೆ ಆದರೆ ಗಾಳಿಯಿಂದ ಮಗುವು ಜನಿಸಲು ಹೇಗೆ ಸಾಧ್ಯ! ಪರಮಾತ್ಮನನ್ನೂ ಮೀನು-ಮೊಸಳೆ ಅವತಾರವೆಂದು ಹೇಳುತ್ತಾ ಎಷ್ಟೊಂದು ನಿಂದನೆ ಮಾಡಿದ್ದಾರೆ. ತಂದೆಯು ಬಂದು ದೂರು ಕೊಡುತ್ತಾರೆ – ನೀವು ಆಸುರೀ ಮತದಂತೆ ನನಗೆ ಎಷ್ಟೊಂದು ನಿಂದನೆ ಮಾಡಿದಿರಿ. 24 ಅವತಾರವೆಂದು ಹೇಳಿದರೂ ಸಹ ಹೊಟ್ಟೆ ತುಂಬಲಿಲ್ಲ ಮತ್ತೆ ಕಣಕಣದಲ್ಲಿಯೂ ಕಲ್ಲು-ಮುಳ್ಳಿನಲ್ಲಿಯೂ ಪರಮಾತ್ಮನಿದ್ದಾನೆಂದು ನನ್ನನ್ನು ಎಲ್ಲದರಲ್ಲಿಯೂ ಹಾಕಿದಿರಿ. ಇವೆಲ್ಲಾ ಶಾಸ್ತ್ರಗಳು ದ್ವಾಪರದಿಂದ ರಚಿಸಲ್ಪಟ್ಟಿವೆ. ಮೊಟ್ಟ ಮೊದಲು ಕೇವಲ ಶಿವನ ಪೂಜೆಯಾಗುತ್ತಿತ್ತು. ಗೀತೆಯನ್ನೂ ಸಹ ನಂತರದಲ್ಲಿ ರಚಿಸಿದ್ದಾರೆ. ಈಗ ತಂದೆಯು ತಿಳಿಸುತ್ತಿದ್ದಾರೆ – ಇದೆಲ್ಲವೂ ಅನಾದಿ ಆಟವಾಗಿದೆ, ನಾನೀಗ ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ ಅಂದಮೇಲೆ ತಂದೆಯನ್ನು ಪೂರ್ಣ ಅನುಸರಿಸಬೇಕು. ಲಕ್ಷಣಗಳೂ ಸಹ ಬಹಳ ಚೆನ್ನಾಗಿರಲಿ. ಇದು ಆಶ್ಚರ್ಯವಲ್ಲವೆ. ಕಲಿಯುಗದ ಅಂತ್ಯದಲ್ಲಿ ಏನಿದೆ? ಮತ್ತು ಸತ್ಯಯುಗದಲ್ಲಿ ಏನು ನೋಡುತ್ತೀರಿ! ಕಲಿಯುಗದಲ್ಲಿ ಭಾರತವು ಬಡ ದೇಶವಾಗಿದೆ, ಸತ್ಯಯುಗದಲ್ಲಿ ಭಾರತವು ಸಾಹುಕಾರನಾಗಿರುತ್ತದೆ. ಆ ಸಮಯದಲ್ಲಿ ಮತ್ತ್ಯಾವುದೇ ಖಂಡವಿರುವುದಿಲ್ಲ, ಈ ಗೀತಾಭಾಗವು ಪುನರಾವರ್ತನೆಯಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ನಾವು ರಾಯಲ್ ತಂದೆಯ ಮಕ್ಕಳಾಗಿದ್ದೇವೆ, ಆದ್ದರಿಂದ ತಮ್ಮ ಚಲನೆಯನ್ನು ಬಹಳ ರಾಯಲ್ ಆಗಿಟ್ಟುಕೊಳ್ಳಬೇಕು. ಜೋರಾಗಿ ಮಾತನಾಡಬಾರದು, ಬಹಳ ಮಧುರರಾಗಬೇಕಾಗಿದೆ.
2. ಎಂದೂ ಸಹ ತಂದೆಯೊಂದಿಗೆ ಅಥವಾ ಪರಸ್ಪರ ಮುನಿಸಿಕೊಳ್ಳಬಾರದು. ಮುನಿಸಿಕೊಂಡು ವಿದ್ಯೆಯನ್ನೆಂದೂ ಬಿಡಬಾರದು. ಏನೆಲ್ಲಾ ಕೆಟ್ಟ ಹವ್ಯಾಸಗಳಿದೆಯೋ ಅದನ್ನು ಬಿಡಬೇಕಾಗಿದೆ.
ವರದಾನ:-
ಯಾವ ಮಕ್ಕಳು ಪರಮಾತ್ಮ ಸ್ನೇಹಿಯಾಗಿರುತ್ತಾರೆಯೋ ಅವರು ಸ್ನೇಹಿಯನ್ನು ಸದಾ ಜೊತೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ಯಾವುದೇ ಸಮಸ್ಯೆಯು ಮುಂದೆ ಬರುವುದಿಲ್ಲ. ಯಾರ ಜೊತೆ ಸ್ವಯಂ ಸರ್ವಶಕ್ತಿವಂತ ತಂದೆಯಿರುತ್ತಾರೆಯೋ, ಅವರ ಮುಂದೆ ಸಮಸ್ಯೆಯು ನಿಲ್ಲಲು ಸಾಧ್ಯವಿಲ್ಲ. ಸಮಸ್ಯೆ ಉಂಟಾಗಲಿ, ಮತ್ತೆ ಅಲ್ಲಿಯೇ ಸಮಾಪ್ತಿ ಮಾಡಿ ಬಿಡುತ್ತೀರೆಂದರೆ ವೃದ್ಧಿಯಾಗುವುದಿಲ್ಲ. ಈಗ ಸಮಸ್ಯೆಗಳ ಜನನ ನಿಯಂತ್ರಣ ಮಾಡಿರಿ. ಸದಾ ನೆನಪಿರಲಿ – ಸಂಪೂರ್ಣತೆಯನ್ನು ಸಮೀಪ ತರಬೇಕು ಹಾಗೂ ಸಮಸ್ಯೆಗಳನ್ನು ದೂರಗೊಳಿಸಬೇಕು.
ಸ್ಲೋಗನ್:-
➤ Email me Murli: Receive Daily Murli on your email. Subscribe!