01 May 2022 KANNADA Murli Today | Brahma Kumaris
Read and Listen today’s Gyan Murli in Kannada
30 April 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
ತಪಸ್ಸಿನ ಫೌಂಡೇಷನ್ ಬೇಹದ್ದಿನ ವೈರಾಗ್ಯ
♫ ಕೇಳು ಇಂದಿನ ಮುರ್ಲಿ (audio)➤
ಇಂದು ಬಾಪ್ದಾದಾ ಸರ್ವ ಸ್ನೇಹಿ ಮಕ್ಕಳು ಸ್ನೇಹದ ಪುಷ್ಫಗಳನ್ನು ಅರ್ಪಣೆ ಮಾಡುತ್ತಿರುವುದನ್ನು ನೋಡುತ್ತಿದ್ದಾರೆ. ದೇಶ-ವಿದೇಶದ ಸರ್ವ ಮಕ್ಕಳ ಹೃದಯದಿಂದ ಸ್ನೇಹದ ಪುಷ್ಫ ವೃಷ್ಟಿಯನ್ನು ಬಾಪ್ದಾದಾ ನೋಡುತ್ತಿದ್ದಾರೆ. ಎಲ್ಲಾ ಮಕ್ಕಳ ಮನಸ್ಸಿನ ಒಂದೇ ಸಂಗೀತ ಅಥವಾ ಗೀತೆಯನ್ನು ಕೇಳುತ್ತಿದ್ದಾರೆ, ಒಂದೇ ಗೀತೆಯಾಗಿದೆ – “ನನ್ನ ಬಾಬಾ”. ನಾಲ್ಕಾರು ಕಡೆ ಮಿಲನವನ್ನು ಆಚರಿಸುವ ಶುಭ ಆಸೆಗಳ ದೀಪಗಳು ಬೆಳಗುತ್ತಿವೆ, ಈ ದಿವ್ಯ ದೃಶ್ಯವನ್ನು ಇಡೀ ಕಲ್ಪದಲ್ಲಿ ಬಾಪ್ದಾದಾ ಮತ್ತು ಮಕ್ಕಳ ವಿನಃ ಮತ್ತ್ಯಾರೂ ನೋಡಲು ಸಾಧ್ಯವಿಲ್ಲ. ಈ ಅಮೂಲ್ಯ ಸ್ನೇಹ ಪುಷ್ಫಗಳು ಇಲ್ಲಿನ ಈ ಹಳೆಯ ಪ್ರಪಂಚದ ಕೊಹಿನೂರ್ ವಜ್ರಗಳಿಗಿಂತಲೂ ಅಮೂಲ್ಯವಾಗಿವೆ. ಈ ಹೃದಯದ ಗೀತೆಯನ್ನು ಮಕ್ಕಳ ವಿನಃ ಮತ್ತ್ಯಾರೂ ಹಾಡಲು ಸಾಧ್ಯವಿಲ್ಲ. ಇಂತಹ ದೀಪಾವಳಿಯನ್ನು ಮತ್ತ್ಯಾರೂ ಆಚರಿಸಲು ಸಾಧ್ಯವಿಲ್ಲ. ಬಾಪ್ದಾದಾರವರ ಸನ್ಮುಖದಲ್ಲಿ ಎಲ್ಲಾ ಮಕ್ಕಳು ಇಮರ್ಜ್ ಆಗಿದ್ದಾರೆ. ಈ ಸ್ಥೂಲ ಸ್ಥಾನದಲ್ಲಿ ಎಲ್ಲರೂ ಕುಳಿತುಕೊಳ್ಳಲು ಸಾಧ್ಯವಿಲ್ಲ ಆದರೆ ಬಾಪ್ದಾದಾರವರ ಹೃದಯ ಸಿಂಹಾಸನವು ಅತಿ ವಿಶಾಲವಾಗಿದೆ. ಆದ್ದರಿಂದ ಎಲ್ಲರನ್ನು ಇಮರ್ಜ್ ರೂಪದಲ್ಲಿ ನೋಡುತ್ತಿದ್ದಾರೆ. ಎಲ್ಲರ ನೆನಪು-ಪ್ರೀತಿ ಮತ್ತು ಸ್ನೇಹ ತುಂಬಿದ ಅಧಿಕಾರದ ದೂರುಗಳನ್ನೂ ಕೇಳುತ್ತಿದ್ದಾರೆ ಮತ್ತು ಜೊತೆ ಜೊತೆಗೆ ಪ್ರತಿಯೊಬ್ಬ ಮಗುವಿಗೆ ಮರುಪಾವತಿಯಾಗಿ ಪದುಮದಷ್ಟು ನೆನಪು-ಪ್ರೀತಿಯನ್ನೂ ಕೊಡುತ್ತಿದ್ದಾರೆ. ನಾವೆಲ್ಲರೂ ಸಾಕಾರ ಸ್ವರೂಪದಲ್ಲಿ ಮಿಲನ ಮಾಡಿದೆವು ಎಂದು ಮಕ್ಕಳು ಅಧಿಕಾರದಿಂದ ಹೇಳುತ್ತೀರಿ, ತಂದೆಯೂ ಬಯಸುತ್ತಾರೆ ಮಕ್ಕಳೂ ಬಯಸುತ್ತೀರಿ. ಆದರೂ ಸಹ ಸಮಯ ಪ್ರಮಾಣ ಬ್ರಹ್ಮಾತಂದೆಯು ಅವ್ಯಕ್ತ ಫರಿಶ್ತಾ ರೂಪದಲ್ಲಿ ಸಾಕಾರ ಸ್ವರೂಪಕ್ಕಿಂತ ಅನೇಕ ಪಟ್ಟು ತೀವ್ರ ಗತಿಯಿಂದ ಸೇವೆ ಮಾಡುತ್ತಾ ಮಕ್ಕಳನ್ನು ತಮ್ಮ ಸಮಾನರನ್ನಾಗಿ ಮಾಡುತ್ತಿದ್ದಾರೆ. ಕೇವಲ ಒಂದೆರಡು ವರ್ಷಗಳಲ್ಲ ಆದರೆ ಅನೇಕ ವರ್ಷಗಳು ಅವ್ಯಕ್ತ ಮಿಲನ, ಅವ್ಯಕ್ತ ರೂಪದಲ್ಲಿ ಸೇವೆಯ ಅನುಭವ ಮಾಡಿಸಿದರು ಮತ್ತು ಮಾಡಿಸುತ್ತಲೂ ಇದ್ದಾರೆ. ಅಂದಮೇಲೆ ಬ್ರಹ್ಮಾ ತಂದೆಯು ಅವ್ಯಕ್ತರಾಗಿದ್ದರೂ ಸಹ ವ್ಯಕ್ತದಲ್ಲಿ ಏಕೆ ಪಾತ್ರವನ್ನು ಅಭಿನಯಿಸಿದರು? ಸಮಾನರನ್ನಾಗಿ ಮಾಡುವುದಕ್ಕಾಗಿ. ಬ್ರಹ್ಮಾ ತಂದೆಯು ಅವ್ಯಕ್ತದಿಂದ ವ್ಯಕ್ತದಲ್ಲಿ ಬಂದರು ಅಂದಮೇಲೆ ಅದಕ್ಕೆ ರಿಟರ್ನ್ ಆಗಿ ಮಕ್ಕಳು ಏನು ಮಾಡಬೇಕಾಗಿದೆ? ವ್ಯಕ್ತದಿಂದ ಅವ್ಯಕ್ತರಾಗಬೇಕಾಗಿದೆ. ಸಮಯ ಪ್ರಮಾಣ ಅವ್ಯಕ್ತ ಮಿಲನ, ಅವ್ಯಕ್ತ ರೂಪದಿಂದ ಸೇವೆ ಮಾಡುವುದು ಈಗ ಅತಿ ಅವಶ್ಯಕವಾಗಿದೆ. ಆದ್ದರಿಂದ ಸಮಯ ಪ್ರತಿ ಸಮಯ ಬಾಪ್ದಾದಾ ಅವ್ಯಕ್ತ ಮಿಲನದ ಅನುಭೂತಿಯ ಸೂಚನೆ ನೀಡುತ್ತಾ ಇರುತ್ತಾರೆ ಅದಕ್ಕಾಗಿ ತಪಸ್ಯಾ ವರ್ಷವನ್ನೂ ಆಚರಿಸುತ್ತಿದ್ದೀರಲ್ಲವೆ. ಬಾಪ್ದಾದಾರವರಿಗೆ ಹರ್ಷವೇನೆಂದರೆ ಮೆಜಾರಿಟಿ ಮಕ್ಕಳಿಗೆ ಉಮ್ಮಂಗ-ಉತ್ಸಾಹವು ಚೆನ್ನಾಗಿದೆ ಆದರೆ ಕೆಲವರು ಮಾತ್ರವೇ ಕಾರ್ಯಕ್ರಮದ ಪ್ರಮಾಣ ಮಾಡಲೇಬೇಕೆಂದು ಯೋಚಿಸುತ್ತಾರೆ. ಒಂದಾಗಿದೆ – ಕಾರ್ಯಕ್ರಮದ ಪ್ರಮಾಣ ಮಾಡುವುದು ಮತ್ತು ಇನ್ನೊಂದಾಗಿದೆ – ಹೃದಯದ ಉಮ್ಮಂಗ-ಉತ್ಸಾಹದಿಂದ ಮಾಡುವುದಾಗಿದೆ ಅಂದಾಗ ಪ್ರತಿಯೊಬ್ಬರು ತಮ್ಮೊಂದಿಗೆ ಕೇಳಿಕೊಳ್ಳಿ – ನಾನು ಯಾವುದರಲ್ಲಿ ಇದ್ದೇನೆ?
ಸಮಯದ ಪರಿಸ್ಥಿತಿಗಳ ಪ್ರಮಾಣ, ಸ್ವಯಂನ ಉನ್ನತಿಯ ಪ್ರಮಾಣ, ತೀವ್ರ ಗತಿಯ ಸೇವೆಯ ಪ್ರಮಾಣ, ಬಾಪ್ದಾದಾರವರ ಸ್ನೇಹಕ್ಕೆ ರಿಟರ್ನ್ ಕೊಡುವ ಪ್ರಮಾಣ ತಪಸ್ಸು ಅತೀ ಅವಶ್ಯಕವಾಗಿದೆ. ಪ್ರೀತಿ ಮಾಡುವುದು ಅತಿ ಸಹಜವಾಗಿದೆ ಮತ್ತು ಎಲ್ಲರೂ ಮಾಡುತ್ತೀರಿ, ಇದನ್ನೂ ಸಹ ತಂದೆಯು ತಿಳಿದುಕೊಂಡಿದ್ದಾರೆ ಆದರೆ ರಿಟರ್ನ್ ಸ್ವರೂಪದಲ್ಲಿ ಬಾಪ್ದಾದಾರವರ ಸಮಾನರಾಗಬೇಕಾಗಿದೆ. ಈ ಸಮಯದಲ್ಲಿ ಬಾಪ್ದಾದಾ ಇದನ್ನು ನೋಡಲು ಬಯಸುತ್ತೇವೆ. ಇದರಲ್ಲಿ ಕೆಲವರು ಮಾತ್ರವೇ ಇದ್ದಾರೆ. ಎಲ್ಲರ ಬಯಕೆಯು ಒಂದೇ ಆಗಿದೆ ಆದರೆ ಬಯಸುವವರು ಮತ್ತು ಮಾಡುವವರು – ಇವರಲ್ಲಿ ಸಂಖ್ಯೆಯ ಅಂತರವಿದೆ ಏಕೆಂದರೆ ತಪಸ್ಸಿಗೆ ಸದಾ ಮತ್ತು ಸಹಜ ತಳಹದಿಯೇನೆಂದರೆ ಬೇಹದ್ದಿನ ವೈರಾಗ್ಯ. ಬೇಹದ್ದಿನ ವೈರಾಗ್ಯ ಅರ್ಥಾತ್ ನಾಲ್ಕೂ ಕಡೆಯ ದಡವನ್ನು ಬಿಡುವುದು ಏಕೆಂದರೆ ದಡಗಳನ್ನೇ ಆಶ್ರಯವನ್ನಾಗಿ ಮಾಡಿಕೊಂಡಿದ್ದೀರಿ. ಸಮಯ ಪ್ರಮಾಣ ಪ್ರಿಯರಾದಿರಿ ಮತ್ತು ಸಮಯ ಪ್ರಮಾಣ ಶ್ರೀಮತದನುಸಾರ ನಿಮಿತ್ತರಾಗಿರುವ ಆತ್ಮರ ಸೂಚನೆಯ ಪ್ರಮಾಣ ಸೆಕೆಂಡಿನಲ್ಲಿ ಬುದ್ಧಿಯು ಪ್ರಿಯರಿಂದ ಮತ್ತೆ ಭಿನ್ನವಾಗಿ ಬಿಡಲಿ. ಆದರೆ ಅದು ಸಾಧ್ಯವಾಗುತ್ತಿಲ್ಲ. ಎಷ್ಟು ಬೇಗನೆ ಪ್ರಿಯರಾಗುತ್ತೀರೊ ಅಷ್ಟು ಭಿನ್ನರಾಗುತ್ತಿಲ್ಲ. ಪ್ರಿಯರಾಗುವುದರಲ್ಲಿ ಬುದ್ಧಿವಂತರಾಗಿದ್ದೀರಿ, ಭಿನ್ನರಾಗುವುದರಲ್ಲಿ ಆಲೋಚಿಸುತ್ತೀರಿ, ಧೈರ್ಯ ಬೇಕಾಗಿದೆ. ಭಿನ್ನರಾಗುವುದೇ ತೀರಗಳನ್ನು ಬಿಡುವುದಾಗಿದೆ ಮತ್ತು ತೀರವನ್ನು ಬಿಡುವುದೇ ಬೇಹದ್ದಿನ ವೈರಾಗ್ಯ ವೃತ್ತಿಯಾಗಿದೆ. ತೀರಗಳನ್ನು ಆಶ್ರಯವನ್ನಾಗಿ ಮಾಡಿಕೊಂಡು ಹಿಡಿದುಕೊಳ್ಳುವುದು ಬರುತ್ತದೆ ಆದರೆ ಅದನ್ನು ಬಿಡಬೇಕಾದರೆ ಏನು ಮಾಡುತ್ತೀರಿ? ಬಹಳ ಉದ್ದಗಲವಾದ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುತ್ತೀರಿ. ಸೇವೆಗೆ ಇನ್ಚಾರ್ಜ್ ಆಗುವುದು ಬಹಳ ಚೆನ್ನಾಗಿ ಬರುತ್ತದೆ ಆದರೆ ಇನ್ಚಾರ್ಜ್ನ ಜೊತೆ ಜೊತೆಗೆ ಸ್ವಯಂನ ಹಾಗೂ ಅನ್ಯರ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳುವುದರಲ್ಲಿ ಕಷ್ಟವೆನಿಸುತ್ತದೆ ಆದ್ದರಿಂದ ವರ್ತಮಾನ ಸಮಯದಲ್ಲಿ ತಪಸ್ಸಿನ ಮೂಲಕ ವೈರಾಗ್ಯ ವೃತ್ತಿಯ ಅತಿ ಅವಶ್ಯಕತೆಯಿದೆ.
ತಪಸ್ಸಿನ ಸಫಲತೆಯ ವಿಶೇಷ ಆಧಾರ ಹಾಗೂ ಸಹಜ ಸಾಧನವಾಗಿದೆ – ಒಂದು ಶಬ್ಧದ ಪಾಠವನ್ನು ಪಕ್ಕಾ ಮಾಡಿಕೊಳ್ಳಿರಿ. ಎರಡು ಮೂರನ್ನು ಬರೆಯುವುದು ಕಷ್ಟವಾಗುತ್ತದೆ. ಒಂದನ್ನು ಬರೆಯುವುದು ಬಹಳ ಸಹಜವಾಗಿದೆ – ತಪಸ್ಸು ಅರ್ಥಾತ್ ಒಬ್ಬ ತಂದೆಯವರಾಗುವುದು. ಯಾವುದಕ್ಕೆ ಬಾಪ್ದಾದಾ ಏಕ್ನಾಮಿ ಎಂದು ಹೇಳುತ್ತಾರೆ. ತಪಸ್ಸು ಅರ್ಥಾತ್ ಮನ-ಬುದ್ಧಿಯನ್ನು ಏಕಾಗ್ರ ಮಾಡುವುದು. ತಪಸ್ಸು ಅರ್ಥಾತ್ ಏಕಾಂತ ಪ್ರಿಯರಾಗುವುದು. ತಪಸ್ಸು ಅರ್ಥಾತ್ ಸ್ಥಿತಿಯನ್ನು ಏಕರಸವಾಗಿ ಇಟ್ಟುಕೊಳ್ಳುವುದು. ತಪಸ್ಸು ಅರ್ಥಾತ್ ಸರ್ವ ಪ್ರಾಪ್ತಿಯಾಗಿರುವ ಖಜಾನೆಗಳನ್ನು ವ್ಯರ್ಥದಿಂದ ಉಳಿತಾಯ ಮಾಡುವುದು ಅರ್ಥಾತ್ ಉಳಿತಾಯದಿಂದ ನಡೆಯುವುದು ಅಂದಾಗ ಒಂದರ ಪಾಠವು ಪಕ್ಕಾ ಆಯಿತಲ್ಲವೆ- ಒಂದರ ಪಾಠವು ಕಷ್ಟವಾಗಿದೆಯೋ ಅಥವಾ ಸಹಜವಾಗಿದೆಯೋ? ಸಹಜವಂತೂ ಆಗಿದೆ “ಆದರೆ” – ಇಂತಹ ಭಾಷೆಯನ್ನು ಹೇಳುವುದಿಲ್ಲ ತಾನೆ.
ಬಹಳ-ಬಹಳ ಭಾಗ್ಯಶಾಲಿಗಳಾಗಿದ್ದೀರಿ. ಅನೇಕ ಪ್ರಕಾರದ ಪರಿಶ್ರಮದಿಂದ ಮುಕ್ತರಾದಿರಿ. ಪ್ರಪಂಚದವರಿಗಂತೂ ಸಮಯ ಮಾಡಿಸುತ್ತದೆ ಮತ್ತು ಸಮಯದಲ್ಲಿ ಬಲವಂತವಾಗಿ ಮಾಡುತ್ತಾರೆ. ಮಕ್ಕಳನ್ನು ತಂದೆಯು ಸಮಯಕ್ಕೆ ಮೊದಲೇ ತಯಾರು ಮಾಡುತ್ತಾರೆ ಮತ್ತು ತಂದೆಯ ಪ್ರೀತಿಯಿಂದ ಮಾಡುತ್ತೀರಿ. ಒಂದುವೇಳೆ ಪ್ರೀತಿಯಿಂದ ಮಾಡಲಿಲ್ಲ ಅಥವಾ ಸ್ವಲ್ಪವೇ ಮಾಡಿದಿರೆಂದರೆ ಏನಾಗುವುದು? ಕೊನೆಯಲ್ಲಿ ಬಲವಂತಲಿಂದಾದರೂ ಮಾಡಲೇಬೇಕಾಗುವುದು. ಬೇಹದ್ದಿನ ವೈರಾಗ್ಯವನ್ನು ಧಾರಣೆ ಮಾಡಿಕೊಳ್ಳಲೇಬೇಕಾಗುವುದು ಆದರೆ ಬಲವಂತವಾಗಿ ಮಾಡುವುದಕ್ಕೆ ಫಲ ಸಿಗುವುದಿಲ್ಲ. ಪ್ರೀತಿಯ ಪ್ರತ್ಯಕ್ಷ ಫಲವು ಭವಿಷ್ಯ ಫಲವಾಗುತ್ತದೆ ಮತ್ತು ಬಲವಂತದಿಂದ ಮಾಡುವವರಿಗೆ ಎಲ್ಲಿಂದಲಾದರೂ ಕ್ರಾಸ್ ಮಾಡಬೇಕಾಗುತ್ತದೆ. ಈ ಕ್ರಾಸ್ ಮಾಡಬೇಕಾಗುವುದೂ ಸಹ ಕ್ರಾಸ್ (ನೇಣು ಗಂಬ) ನಲ್ಲಿ ಏರುವ ಸಮಾನವಾಗಿದೆ ಅಂದಮೇಲೆ ಯಾವುದು ಇಷ್ಟವಾಗುತ್ತದೆ? ಪ್ರೀತಿಯಿಂದ ಮಾಡುತ್ತೀರಿ. ಬಾಪ್ದಾದಾ ಎಂದಾದರೂ ತೀರಗಳ ಪಟ್ಟಿಯನ್ನು ತಿಳಿಸುತ್ತೇವೆ. ಹಾಗೆ ನೋಡಿದರೆ ತಿಳಿದುಕೊಳ್ಳುವುದರಲ್ಲಿ ಬುದ್ಧಿವಂತರಾಗಿದ್ದೀರಿ. ರಿವೈಜ್ ಮಾಡಿಸುತ್ತೇವೆ ಏಕೆಂದರೆ ಬಾಪ್ದಾದಾ ಪ್ರತೀ ದಿನದ ದಿನಚರಿಯನ್ನು ಯಾವಾಗ ಬೇಕೋ ಆಗ ನೋಡಬಲ್ಲೆವು. ಒಬ್ಬೊಬ್ಬರದನ್ನು ನೋಡುವ ಕೆಲಸವನ್ನು ಇಡೀ ದಿನ ಮಾಡುವುದಿಲ್ಲ. ಸಾಕಾರ ಬ್ರಹ್ಮಾ ತಂದೆಯನ್ನು ನೋಡಿದಿರಿ. ಅವರ ದೃಷ್ಟಿಯು ಸ್ವತಹವಾಗಿ ಎಲ್ಲಿ ಬೀಳುತ್ತಿತ್ತು? ತಮ್ಮ ಪತ್ರವಾಗಿರಲಿ, ಲೆಕ್ಕವಾಗಿರಲಿ ಯಾವುದೇ ಚಲನ-ವಲನೆಯಾಗಿರಲಿ, ಯಾವುದೇ 8 ಪುಟಗಳ ಪತ್ರವಾಗಿರಲಿ ಆದರೆ ತಂದೆಯ ದೃಷ್ಟಿಯು ಎಲ್ಲಿಗೆ ಹೋಗುತ್ತಿತ್ತು? ಎಲ್ಲಿ ಸಲಹೆಯನ್ನು ಕೊಡಬೇಕಾಗುವುದೊ, ಎಲ್ಲಿ ಅವಶ್ಯಕತೆಯಿರುವುದೋ ಅಲ್ಲಿ ಹೋಗುತ್ತಿತ್ತು. ಬಾಪ್ದಾದಾ ಎಲ್ಲವನ್ನು ನೋಡುತ್ತಾರೆ ಆದರೆ ನೋಡದಂತಿರುತ್ತಾರೆ. ಎಲ್ಲವನ್ನೂ ತಿಳಿದುಕೊಂಡಿದ್ದಾರೆ ಆದರೆ ತಿಳಿಯದವರಂತೆ ಇರುತ್ತಾರೆ. ಯಾವುದು ಅವಶ್ಯಕವಲ್ಲವೋ ಅದನ್ನು ನೋಡುವುದರಿಂದ ತಿಳಿದುಕೊಳ್ಳುವುದಿಲ್ಲ. ಬಹಳ ಒಳ್ಳೊಳ್ಳೆಯ ಆಟಗಳನ್ನು ನೋಡುತ್ತೇವೆ, ಅದನ್ನು ಮತ್ತೆಂದಾದರೂ ತಿಳಿಸುತ್ತೇವೆ. ಒಳ್ಳೆಯದು.
ತಪಸ್ಸು ಮಾಡುವುದು, ಬೇಹದ್ದಿನ ವೈರಾಗ್ಯ ವೃತ್ತಿಯಲ್ಲಿರುವುದು ಸಹಜವಲ್ಲವೆ. ತೀರಗಳನ್ನು ಬಿಡುವುದು ಕಷ್ಟವಾಗುತ್ತದೆಯೇ? ಆದರೆ ತಾವೇ ಆಗಬೇಕಾಗಿದೆ. ಕಲ್ಪ-ಕಲ್ಪದ ಪ್ರಾಪ್ತಿಗೆ ಅಧಿಕಾರಿಗಳಾಗಿದ್ದೀರಿ, ಮತ್ತು ಅವಶ್ಯವಾಗಿ ಆಗುವಿರಿ. ಒಳ್ಳೆಯದು – ಈ ವರ್ಷ ಕಲ್ಪದ ಹಿಂದಿನವರು ಅನೇಕ ಕಲ್ಪಗಳ ಹಳಬರು ಮತ್ತು ಈ ಕಲ್ಪದ ಹೊಸ ಮಕ್ಕಳಿಗೆ ಅವಕಾಶವು ಸಿಕ್ಕಿದೆ. ಅಂದಮೇಲೆ ಅವಕಾಶ ಸಿಕ್ಕಿರುವ ಖುಷಿಯಿದೆಯಲ್ಲವೆ? ಮೆಜಾರಿಟಿ ಹೊಸಬರಿದ್ದಾರೆ, ಟೀಚರ್ಸ್ ಹಳಬರಿದ್ದಾರೆ. ಅಂದಮೇಲೆ ಟೀಚರ್ಸ್ ಏನು ಮಾಡುವಿರಿ? ವೈರಾಗ್ಯ ವೃತ್ತಿಯನ್ನು ಧಾರಣೆ ಮಾಡಿಕೊಳ್ಳುತ್ತೀರಲ್ಲವೆ. ತೀರಗಳನ್ನು ಬಿಡುತ್ತೀರಲ್ಲವೆ ಅಥವಾ ಸಮಯದಲ್ಲಿ ಮಾಡಬೇಕೆಂದು ಬಯಸುತ್ತೇವೆ ಆದರೆ ಏನು ಮಾಡುವುದು ಎಂದು ಹೇಳುವಿರಾ? ಮಾಡಿ ತೋರಿಸುವವರಾಗಿದ್ದೀರಾ ಅಥವಾ ಕೇವಲ ಹೇಳುವವರಾಗಿದ್ದೀರಾ? ನಾಲ್ಕಾರು ಕಡೆಯ ಯಾರೆಲ್ಲಾ ಮಕ್ಕಳು ಬಂದಿದ್ದಾರೆಯೋ ಎಲ್ಲಾ ಮಕ್ಕಳನ್ನು ಬಾಪ್ದಾದಾ ಸಾಕಾರ ರೂಪದಲ್ಲಿ ನೋಡಿ ಹರ್ಷಿತರಾಗುತ್ತಿದ್ದೇವೆ. ಸಾಹಸವನ್ನಿಟ್ಟಿದ್ದೀರಿ ಮತ್ತು ತಂದೆಯ ಸಹಯೋಗವು ಸದಾ ಇದ್ದೇ ಇದೆ ಆದ್ದರಿಂದ ಸಾಹಸದಿಂದ ಸಹಯೋಗದ ಅಧಿಕಾರದ ಅನುಭವವನ್ನು ಮಾಡುತ್ತಾ ಸಹಜವಾಗಿ ಹಾರುತ್ತಾ ಹೋಗಿ. ತಂದೆಯು ಸಹಯೋಗವನ್ನಂತೂ ಕೊಡುತ್ತಾರೆ ಆದರೆ ತೆಗೆದುಕೊಳ್ಳುವವರು ತೆಗೆದುಕೊಳ್ಳಬೇಕಲ್ಲವೆ. ದಾತನು ನೀಡುತ್ತಾರೆ ಆದರೆ ಪಡೆಯುವವರು ಯಥಾ ಶಕ್ತಿಯಾಗಿ ಬಿಡುತ್ತಾರೆ ಆದ್ದರಿಂದ ಯಥಾ ಶಕ್ತಿಯಾಗಬಾರದು, ಸದಾ ಸರ್ವಶಕ್ತಿವಂತರಾಗಬೇಕು. ಇದರಿಂದ ಕೊನೆಯಲ್ಲಿ ಬರುವವರೂ ಸಹ ಮೊದಲಿನ ನಂಬರ್ ತೆಗೆದುಕೊಳ್ಳುತ್ತೀರಿ. ತಿಳಿಯಿತೆ – ಸರ್ವಶಕ್ತಿಗಳ ಅಧಿಕಾರವನ್ನು ಪೂರ್ಣಪ್ರಾಪ್ತಿ ಮಾಡಿಕೊಳ್ಳಿ. ಒಳ್ಳೆಯದು.
ನಾಲ್ಕಾರು ಕಡೆಯ ಸರ್ವಸ್ನೇಹಿ ಆತ್ಮರು, ಸದಾ ತಂದೆಯ ಪ್ರೀತಿಗೆ ರಿಟರ್ನ್ ಕೊಡುವವರು, ಅನನ್ಯ ಆತ್ಮರು, ಸದಾ ತಪಸ್ವೀ ಮೂರ್ತಿಯ ಸ್ಥಿತಿಯಲ್ಲಿ ಸ್ಥಿತರಾಗಿರುವವರು, ತಂದೆಯ ಸಮೀಪ ಆತ್ಮರು, ಸದಾ ತಂದೆಯ ಸಮಾನರಾಗುವ ಲಕ್ಷ್ಯವನ್ನು ಲಕ್ಶಣದ ರೂಪದಲ್ಲಿ ತರುವವರು, ಇಂತಹ ದೇಶ-ವಿದೇಶದ ಸರ್ವ ಮಕ್ಕಳಿಗೆ ಹೃದಯರಾಮ ತಂದೆಯ ಅತಿ ಹೃದಯಪೂರ್ವಕ ನೆನಪು-ಪ್ರೀತಿ ಹಾಗು ನಮಸ್ತೆ.
ದಾದಿಯರ ಜೊತೆ ಅವ್ಯಕ್ತ ಬಾಪ್ದಾದಾರವರ ಮಿಲನ
ಅಷ್ಟ ಶಕ್ತಿಧಾರಿ, ಇಷ್ಟ ಮತ್ತು ಅಷ್ಟ ಆಗಿರುವಿರಲ್ಲವೆ? ಆಷ್ಟದ ಲಕ್ಷಣಗಳೇನು, ತಿಳಿದಿರುವಿರಾ? ಪ್ರತಿ ಕರ್ಮದಲ್ಲಿ ಸಮಯ ಪ್ರಮಾಣ, ಪರಿಸ್ಥಿತಿ ಪ್ರಮಾಣ, ಪ್ರತಿ ಶಕ್ತಿಯನ್ನು ಕರ್ಮದಲ್ಲಿ ತರುವವರು. ಆಷ್ಟ ಶಕ್ತಿಗಳು ಇಷ್ಟರನ್ನಾಗಿ ಮಾಡುತ್ತವೆ ಮತ್ತು ಅಷ್ಟರನ್ನಾಗಿಯೂ ಮಾಡುತ್ತವೆ, ಅಷ್ಟ ಶಕ್ತಿಧಾರಿ ಆಗಿರುವಿರಿ, ಹಾಗಾಗಿ ಅಷ್ಟ ಭುಜವನ್ನು ತೋರಿಸಲಾಗುತ್ತದೆ. ವಿಶೇಷವಾಗಿ ಎಂಟು ಶಕ್ತಿಗಳಿವೆ. ಹಾಗೆ ನೋಡಿದರೆ ಅನೇಕ ಶಕ್ತಿಗಳಿವೆ, ಆದರೆ ಎಂಟರಲ್ಲಿ ಎಲ್ಲವೂ ಬಂದು ಬಿಡುತ್ತವೆ. ವಿಶೇಷ ಎಂಟು ಶಕ್ತಿಗಳನ್ನು ಸಮಯ ಪ್ರಮಾಣ ಕಾರ್ಯದಲ್ಲಿ ತರಬೇಕು. ಯಾವ ತರಹ ಸಮಯ, ಯಾವ ತರಹ ಪರಿಸ್ಥಿತಿ, ಅದೇ ತರಹ ಸ್ಥಿತಿ ಇರಲಿ. ಇದಕ್ಕೆ ಹೇಳಲಾಗುತ್ತದೆ ಅಷ್ಟ ಹಾಗು ಇಷ್ಟ. ಅಂದಮೇಲೆ ಇಂತಹ ಸಂಘಟನೆ ತಯಾರಾಗಿದೆಯಾ? ವಿದೇಶದಲ್ಲಿ ಎಷ್ಟು ತಯಾರಾಗಿದ್ದಾರೆ? ಅಷ್ಟದಲ್ಲಿ ಬರುವವರಾಗಿದ್ದಾರೆ ಅಲ್ಲವೇ? ಒಳ್ಳೆಯದು.
(ಬೆಳಗ್ಗೆ ಬ್ರಹ್ಮ ಮಹೂರ್ತದ ಸಮಯದಲ್ಲಿ ಸಂತರಿ ದಾದಿಯವರು ಶರೀರವನ್ನು ತ್ಯಜಿಸಿದರು) ಒಳ್ಳೆಯದು, ಪ್ರತಿಯೊಬ್ಬರೂ ಹೊಗಲೇಬೇಕಲ್ಲವೆ? ಎವರ್ ರೆಡಿ (ಸದಾ ತಯಾರು) ಆಗಿರುವಿರಾ ಇಲ್ಲಾ. ನೆನಪು ಬರುತ್ತಾ – ನನ್ನ ಸೇವಾ ಕೇಂದ್ರ, ಈಗ ಜಿಜಾÐಸುಗಳಿಗೆ ಏನಾಗುತ್ತದೊ? ನನ್ನದು-ನನ್ನದು ನೆನಪಾಗದು ತಾನೆ? ಹೋಗುವುದಂತು ಪ್ರತಿಯೊಬ್ಬರೂ ಹೋಗಲೇಬೇಕು, ಆದರೆ ಪ್ರತಿಯೊಬ್ಬರ ಲೆಕ್ಕಾಚಾರ ತಮ್ಮದೇ ಆಗಿದೆ. ಲೆಕ್ಕಾಚಾರ ಚುಕ್ತಾ ಮಾಡದೇ ಯಾರೂ ಹೋಗಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ಖುಶಿಯಿಂದ ಸಂತರಿ ದಾದಿಯನ್ನು ಬೀಳ್ಕೊಟ್ಟರು. ಎಲ್ಲರಿಗೂ ಒಳ್ಳೆಯದೆನಿಸಿತೇ? ಈ ತರಹ ಹೋಗುವುದು ಒಳ್ಳೆಯದಲ್ಲವೇ? ಅಂದಮೇಲೆ ನೀವೂ ಕೂಡ ಸದಾ ತಯಾರಾಗಿರಿ. ಒಳ್ಳೆಯದು.
ಪಾರ್ಟಿಗಳ ಜೊತೆ ಬಾಪ್ ದಾದಾರವರ ಮಿಲನ
(1) ದೆಹಲಿ ಮತ್ತು ಪಂಜಾಬ್ ಎರಡೂ ಸೇವೆಯ ಆದಿ ಸ್ಥಾನಗಳಾಗಿವೆ. ಸ್ಥಾಪನೆಯ ಸ್ಥಾನ ಸದಾ ಮಹತ್ವಪೂರ್ವಕ ಎಂದು ನೋಡಲಾಗುತ್ತದೆ, ಗಾಯನ ಮಾಡಲಾಗುತ್ತದೆ. ಯಾವ ತರಹ ಸೇವೆಯಲ್ಲಿ ಆದಿ ಸ್ಥಾನ ಆಗಿದೆಯೊ ಅದೇ ತರಹ ಸ್ಥಿತಿಯಲ್ಲಿ ಕೂಡ ಆದಿ ರತ್ನ ಆಗಿರುವಿರಾ? ಸ್ಥಾನದ ಜೊತೆಯಲ್ಲಿ ಸ್ಥಿತಿಯ ಮಹಿಮೆ ಇದೆಯಲ್ಲವೆ. ಆದಿ ರತ್ನವೆಂದರೆ, ಪ್ರತಿ ಶ್ರೀಮತವನ್ನು ಜೀವನದಲ್ಲಿ ತರುವುದರಲ್ಲಿ ಆದಿ ಮಾಡುವವರು. ಕೇವಲ ಕೇಳುವವರು ಹೇಳುವವರಲ್ಲ, ಮಾಡುವವರು. ಏಕೆಂದರೆ ಕೇಳುವವರು ಹೇಳುವವರು ಅನೇಕರಿದ್ದಾರೆ, ಆದರೆ ಮಾಡುವವರು ಕೋಟಿಯಲ್ಲಿ ಕೆಲವರು ಮಾತ್ರ. ಅಂದ ಮೇಲೆ ಈ ನಶೆ ಇರುತ್ತಾ, ನಾವು ಕೋಟಿಯಲ್ಲಿ ಕೆಲವರೆಂದು? ಈ ಆತ್ಮಿಕ ನಶೆ ಮಾಯೆಯ ನಶೆಯನ್ನು ಬಿಡಿಸಿ ಬಿಡುತ್ತದೆ. ಈ ಆತ್ಮಿಕ ನಶೆ ಸುರಕ್ಷತೆಯ ಸಾಧನವಾಗಿದೆ. ಯಾವುದೇ ಮಾಯೆಯ ನಶೆ – ತೊಟ್ಟುಕೊಳ್ಳುವ, ತಿನ್ನುವ, ನೋಡುವ – ತನ್ನ ಕಡೆ ಆಕರ್ಶಿತ ಮಾಡಲು ಸಾಧ್ಯವಿಲ್ಲ. ಈ ತರಹ ನಶೆಯಲ್ಲಿ ಇರುತ್ತೀರ ಇಲ್ಲಾ ಮಾಯೆ ಸ್ವಲ್ಪ ಸ್ವಲ್ಪ ಆಕರ್ಷಣೆ ಮಾಡುತ್ತಾ? ಈಗ ತಿಳುವಳಿಕೆ ಉಳ್ಳವರು ಆಗಿರುವಿರಲ್ಲವೆ? ಮಾಯೆಯ ತಿಳುವಳಿಕೆ ಕೂಡ ಇದೆ. ತಿಳುವಳಿಕೆ ಉಳ್ಳವರು ಎಂದೂ ಮೋಸ ಹೋಗುವುದಿಲ್ಲ. ಒಂದು ವೇಳೆ ತಿಳುವಳಿಕೆ ಉಳ್ಳವರು ಮೋಸ ಹೋದರೆ ಅಂತವರಿಗೆ ಎಲ್ಲರು ಏನ್ನೆನ್ನುವರು? ತಿಳುವಳಿಕೆ ಉಳ್ಳವರು ಮೋಸ ಹೋದರೆನ್ನುವರು. ಮೋಸ ಹೋಗುವುದೆಂದರೆ ದುಃಖದ ಆಹ್ವಾನ ಮಾಡಿದಂತೆ. ಯಾವಾಗ ಮೋಸ ಹೋಗುತ್ತೀರೊ ಅದರಿಂದ ದುಃಖ ಆಗುತ್ತದೆ ಅಲ್ಲವೆ. ಅಂದಮೇಲೆ ದುಃಖವನ್ನು ಯಾರಾದರೂ ಪಡಕೊಳ್ಳಬಯಸುತ್ತಾರಾ? ಆದ್ದರಿಂದ ಸದಾ ಆದಿ ರತ್ನ ಆಗಿರುವಿರಿ ಅರ್ಥಾತ್ ಪ್ರತಿ ಶ್ರೀಮತದ ಆದಿ ತಮ್ಮ ಜೀವನದಲ್ಲಿ ತರವವರು. ಈ ತರಹ ಆಗಿರುವಿರಾ? ಇಲ್ಲಾ ಮೊದಲು ಅನ್ಯರು ಮಾಡಲಿ ಆಮೇಲೆ ನಾವು ಮಾಡುತ್ತೇವೆ – ಎಂದು ನೋಡುವುದಿಲ್ಲ ತಾನೇ? ಅವರು ಮಾಡುತ್ತಿಲ್ಲ ಅಂದಮೇಲೆ ನಾನು ಹೇಗೆ ಮಾಡುವುದು? ಮಾಡುವುದರಲ್ಲಿ “ಮೊದಲು ನಾನು”. ಬೇರೆಯವರು ಬದಲಾದರೆ ನಾನು ಬದಲಾಗುವೆ, ಇವರು ಕೂಡ ಬದಲಾದರೆ ನಾನು ಬದಲಾಗುವೆ, ತಪ್ಪು – ಯಾರು ಮಾಡುತ್ತಾರೊ ಅವರೇ ಪಡೆದುಕೊಳ್ಳುತ್ತಾರೆ ಮತ್ತು ಎಷ್ಟು ಪಡೆದುಕೊಳ್ಳುತ್ತಾರೆ? ಒಂದಕ್ಕೆ ಪದುಮದಷ್ಟು. ಅಂದಮೇಲೆ ಮಾಡುವುದರಲ್ಲೇ ಮಜಾ ಇದೆಯಲ್ಲವೇ? ಒಂದು ಮಾಡಿ ಮತ್ತು ಪದುಮದಷ್ಟು ಪಡೆದುಕೊಳ್ಳಿರಿ. ಇದರಲ್ಲಿ ಪ್ರಾಪ್ತಿಯೇ ಪ್ರಾಪ್ತಿ. ಆದ್ದರಿಂದ ಶ್ರೀಮತವನ್ನು ಕಾರ್ಯರೂಪದಲ್ಲಿ ತರಲು ಮೊದಲು ನಾನು. ಮಾಯೆಯ ವಶವಾಗುವುದರಲ್ಲಿ ಮೊದಲು ನಾನಲ್ಲ, ಆದರೆ ಈ ಪುರುಷಾರ್ಥದಲ್ಲಿ ಮೊದಲು ನಾನು. ಆಗಲೇ ಸಫಲತೆಯನ್ನು ಪ್ರತಿ ಹೆಜ್ಜೆಯಲ್ಲಿ ಅನುಭವ ಮಾಡುವಿರಿ. ಸಫಲತೆ ಆಗಿ ಬಿಟ್ಟಿದೆ. ಸ್ವಲ್ಪ ದಾರಿಯನ್ನು ಬದಲಾವಣೆ ಮಾಡುತ್ತೀರಾ, ಬದಲಾವಣೆ ಮಾಡುವುದರಿಂದ ಗುರಿ ದೂರ ಆಗಿ ಬಿಡುತ್ತದೆ, ಸಮಯವೂ ಹಿಡಿಯುತ್ತದೆ. ಒಂದು ವೇಳೆ ಯಾರಾದರೂ ತಪ್ಪು ದಾರಿಯಲ್ಲಿ ನಡೆದರೆ ಗುರಿ ದೂರವಾಗಿ ಬಿಡುತ್ತದೆಯಲ್ಲವೆ? ಅಂದಮೇಲೆ ಈ ತರಹ ಮಾಡಬೇಡಿರಿ. ಗುರಿ ಕಣ್ಮುಂದಿದೆ, ಸಫಲತೆ ಆಗಲೆ ಬಂದು ಬಿಟ್ಟಿದೆ. ಯಾವಾಗಲಾದರೂ ಪರಿಶ್ರಮ ಪಡಬೇಕಾದಾಗ ಪ್ರೀತಿಯ ತೂಕ ಕಮ್ಮಿ ಆಗಿ ಬಿಡುತ್ತದೆ. ಒಂದುವೇಳೆ ಪ್ರೀತಿ ಇದ್ದರೆ ಯಾವತ್ತೂ ಪರಿಶ್ರಮ ಪಡಬೇಕಾಗಿ ಬರುವುದಿಲ್ಲ. ಏಕೆಂದರೆ ತಂದೆ ಅನೇಕ ಭುಜಗಳ ಸಹಿತ ತಮಗೆ ಸಹಾಯ ಮಾಡುವರು. ಅವರು ಅನೇಕ ಭುಜಗಳಿಂದ ಕ್ಷಣದಲ್ಲಿ ಕಾರ್ಯ ಸಫಲ ಮಾಡಿಬಿಡುವರು. ಪುರುಷಾರ್ಥದಲ್ಲಿ ನೀವು ಸದಾ ಹಾರುತ್ತಿರುತ್ತೀರಿ. ಪಂಜಾಬಿನವರು ಹಾರುತ್ತೀರೊ ಇಲ್ಲ ಹೆದರುತ್ತೀರೋ? ಏನಾಗುತ್ತೊ, ಹೇಗಾಗುತ್ತೋ… ಅಲ್ಲ! ಅನ್ಯರಿಗೂ ಶಾಂತಿಯ ದಾನ ಕೊಡುವವರಾಗಿದ್ದೀರಿ. ಯಾರುಬೇಕಾದರೂ ಬರಲಿ, ಶಾಂತಿ ಪಡಕೊಂಡು ಹೋಗಲಿ. ಭಲೆ ಜ್ಞಾನ ಕೊಡದಿದ್ದರೂ ಶಾಂತಿಯ ಪ್ರಕಂಪನಗಳೂ ಶಾಂತ ಮಾಡಿ ಬಿಡುತ್ತವೆ. ಒಳ್ಳೆಯದು.
(2) ನಾಲ್ಕೂ ಕಡೆಗಳಿಂದ ಬಂದಿರುವಂತಹ ಶ್ರೇಷ್ಠ ಆತ್ಮರೆಲ್ಲರು ಬ್ರಾಹ್ಮಣರಾಗಿದ್ದೀರಾ, ರಾಜಸ್ಥಾನಿಗಳಲ್ಲ, ಮಹಾರಾಷ್ಟ್ರೀಯರಲ್ಲ, ಮಧ್ಯ ಪ್ರದೇಶಿಗರಲ್ಲ…. ಎಲ್ಲರೂ ಒಂದಾಗಿದ್ದೀರಿ. ಈ ಸಮಯದಲ್ಲಿ, ಎಲ್ಲರೂ ಮಧುಬನ ನಿವಾಸಿಗಳು ಆಗಿದ್ದೀರಿ. ಬ್ರಾಹ್ಮಣರ ಮೂಲ ಸ್ಥಾನ ಮಧುಬನ ಆಗಿದೆ. ಸೇವೆಗಾಗಿ ಭಿನ್ನ ಭಿನ್ನ ಸ್ಥಾನಗಳಿಗೆ ಹೋಗಿದ್ದೀರಿ. ಒಂದು ವೇಳೆ ಒಂದೇ ಸ್ಥಾನದಲ್ಲಿ ಕುಳಿತು ಬಿಟ್ಟರೆ, ನಾಲ್ಕೂ ಕಡೆಗಳ ಸೇವೆ ಹೇಗಾಗುತ್ತದೆ? ಆದುದರಿಂದ ಸೇವಾರ್ಥವಾಗಿ ಬೇರೆ ಬೇರೆ ಸ್ಥನಗಳಿಗೆ ಹೋಗಿರುವಿರಿ. ಲೌಕಿಕವಾಗಿ ವ್ಯಾಪರಿಗಳಾಗಿರಬಹುದು, ಸರ್ಕಾರಿ ಕರ್ಮಚಾರಿಗಳಾಗಿರಬಹುದು, ಕಾರ್ಖಾನೆಯ ಕಾರ್ಮಿಕರಾಗಿರಬಹುದು…. ಆದರೆ ಮೂಲ ಕರ್ಮವಾಗಿದೆ “ಈಶ್ವರೀಯ ಸೇವಾಧಾರಿಗಳು”. ಮಾತೆಯರು ಕೂಡ ಮನೆಯಲ್ಲಿರುತ್ತ ಈಶ್ವರೀಯ ಸೇವೆಯಲ್ಲಿದ್ದೀರಿ. ಜ್ಞಾನ ಭಲೇ ಅನ್ಯರು ಕೇಳಲಿ ಇಲ್ಲ ಬಿಡಲಿ, ಶುಭ ಭಾವನೆ ಶುಭ ಕಾಮನೆಯ ಪ್ರಕಂಪನದಿಂದ ಕೂಡ ಅವರನ್ನು ಬದಲಾಯಿಸಬಹುದು. ಕೇವಲ ವಾಣಿಯ ಸೇವೆ ಮಾತ್ರ ಸೇವೆಯಲ್ಲ, ಶುಭ ಭಾವನೆ ಇಡುವುದು ಕೂಡ ಸೇವೆಯಾಗಿದೆ. ಅಂದಮೇಲೆ ಎರಡೂ ಸೇವೆ ಮಾಡಲು ಬರುತ್ತದಲ್ಲವೇ? ಯಾರಾದರೂ ನಿಮಗೆ ನಿಂದಿಸಿದರೂ, ಶುಭಭಾವನೆ ಶುಭಕಾಮನೆಯನ್ನು ಬಿಡಬೇಡಿರಿ. ಬ್ರಾಹ್ಮಣರ ಕೆಲಸವೆ ಆಗಿದೆ, ಏನ್ನನಾದರೂ ಕೊಡುತ್ತಿರುವುದು. ಹೀಗಾಗಿ ಶುಭಭಾವನೆ ಶುಭಕಾಮನೆ ಇಡುವುದು ಕೂಡ ಶಿಕ್ಷಣ ಕೊಡುವುದಾಗಿದೆ. ಎಲ್ಲರೂ ವಾಣಿಯಿಂದ ಬದಲಾಗುವುದಿಲ್ಲ. ಎಂತವರೇ ಆಗಿರಲಿ, ಏನಾದರೊಂದು ಖಂಡಿತವಾಗಿ ಕೊಡುತ್ತಿರಿ; ಪಕ್ಕಾ ರಾವಣನೇ ಯಾಕಾಗಿರಬಾರದು! ಅನೇಕ ಮಾತೆಯರು ಹೇಳುತ್ತಾರೆ, “ನಮ್ಮ ಸಂಬಂಧಿಗಳು ಪಕ್ಕಾ ರಾವಣ, ಬದಲಾಗುವವರಲ್ಲ” ಎಂದು. ಇಂತಹ ಆತ್ಮರಿಗೂ ತಮ್ಮ ಖಜಾನೆಯಿಂದ, ಶುಭಭಾವನೆ ಶುಭಕಾಮನೆಯ ಅಂಚಲಿಯನ್ನು ಖಂಡಿತವಾಗಿ ಕೊಡಿರಿ. ಯಾರಾದರೂ ನಿಂದಿಸಿದರೆ ಅವರ ಬಾಯಿಂದ ಏನು ಬರುತ್ತದೆ? ಇವರು ಬ್ರಹ್ಮಾಕುಮಾರಿಯರೆಂದು. ಅಂದ ಮೇಲೆ ಬ್ರಹ್ಮಾ ತಂದೆಯನ್ನು ನೆನಪು ಮಾಡಿದಂತಾಯಿತಲ್ಲವೆ, ಬೈದರೂ ಕೂಡ “ಬ್ರಹ್ಮಾ” ಎಂದು ಹೇಳುತ್ತಾರಲ್ಲವೆ! ಅಂತೂ ತಂದೆಯ ಹೆಸರು ಹೇಳುತ್ತಾರಲ್ಲವೆ! ತಿಳಿದವರಾಗಿರಲಿ ಅಥವಾ ತಿಳಿಯದವರಾಗಿರಲಿ, ನೀವು ಅವರಿಗೆ ಅಂಚಲಿಯನ್ನು ಕೊಡಿರಿ. ಈ ತರಹ ಅಂಚಲಿ ಕೊಡುತ್ತೀರಾ ಇಲ್ಲವೇ ಯಾರು ಕೇಳುವುದಿಲ್ಲ ಅವರನ್ನು ಬಿಟ್ಟು ಬಿಡುತ್ತೀರಾ ಯಾರನ್ನೂ ಬಿಡಬೇಡಿರಿ, ಇಲ್ಲದೇ ಹೋದರೆ ಕೊನೆಯಲ್ಲಿ ನಿಮ್ಮ ಕಿವಿ ಹಿಂಡುತ್ತಾರೆ, ದೂರುತ್ತಾರೆ – ನಾವು ತಿಳುವಳಿಕೆಹೀನರಾಗಿದ್ದೆವು, ನೀವೇಕೆ ತಿಳಿಸಿಕೊಡಲ್ಲಿಲ್ಲ – ಎಂದು. ಅಂದಮೇಲೆ ಕಿವಿ ಹಿಂಡಿದಂತಾಯಿತಲ್ಲವೇ? ತಾವು ಕೊಡುತ್ತ ಹೋಗಿ, ಅನ್ಯರು ತೆಗೆದುಕೊಳ್ಳಲಿ ಇಲ್ಲ ಬಿಡಲಿ. ಬಾಪ್ ದಾದರವರು ಪ್ರತಿದಿನ ಇಷ್ಟೊಂದು ಖಜಾನೆಗಳನ್ನು ಮಕ್ಕಳಿಗೆ ಕೊಡುತ್ತಾರೆ. ಕೆಲವರು ಪೂರ್ತಿ ತೆಗೆದುಕೊಳ್ಳುತ್ತಾರೆ, ಕೆಲವರು ಯಥಾಶಕ್ತಿ ತೆಗೆದುಕೊಳ್ಳುತ್ತಾರೆ. ಆದರೆ ಬಾಪ್ ದಾದರವರು ಎಂದಾದರೂ ಹೇಳುತ್ತಾರೆಯೆ “ನಾನು ನಿಮಗೆ ಕೊಡುವುದಿಲ್ಲ” ಎಂದು? ಏಕೆ ತೆಗೆದುಕೊಳ್ಳುವುದಿಲ್ಲ? ಆಂದಮೇಲೆ ಬ್ರಾಹ್ಮಣರ ಕರ್ತವವೇ ಆಗಿದೆ ಕೊಡುವುದು. ದಾತರ ಮಕ್ಕಳಲ್ಲವೇ! ಅವರು ಮನ್ನಣೆ ಕೊಟ್ಟಾಗ ಮಾತ್ರ ನೀವು ಅವರಿಗೆ (ಜ್ಞಾನ) ಕೊಟ್ಟರೆ ಅದು ಲೇವತ ಎಂದು ಕರೆಸಿಕೊಂಡಂತಾಗುತ್ತದೆ. ಲೇವತೆಗಳು ಎಂದೂ ದಾತನ ಮಕ್ಕಳು ಆಗಲು ಸಾಧ್ಯವಿಲ್ಲ, ದೇವತೆಗಳೂ ಆಗಲು ಸಾಧ್ಯವಿಲ್ಲ. ನೀವು ದೇವತೆಗಳು ಆಗುವವರಲ್ಲವೇ? ದೇವತಾ ವಸ್ತ್ರ (ಶರೀರ) ತಯಾರಿದೆಯಲ್ಲವೇ? ಇಲ್ಲಾ ಇನ್ನೂ ಹೊಲಿಗೆ ಹಾಕುತ್ತಿದ್ದೀರಾ? ಒಗೆಯುತ್ತಿದ್ದೀರಾ? ಇಲ್ಲಾ ಇಸ್ತ್ರಿ ಹಾಕುವುದು ಮಾತ್ರ ಬಾಕಿ ಇದೆಯಾ? ದೇವತಾ ಶರೀರ ಕಣ್ಣುಂದೆ ಕಾಣಿಸಬೇಕು, ಇವತ್ತು ಫರಿಸ್ತಾ (ಸೂಕ್ಷ್ಮ ದೇವತೆ) ನಾಳೆ ದೇವತೆ. ಎಷ್ಟು ಬಾರಿ ದೇವತೆಗಳು ಆಗಿದ್ದಿರಿ? ಅಂದಮೇಲೆ ಸದಾ ತಮ್ಮನ್ನು – ದಾತನ ಮಕ್ಕಳು ಮತ್ತು ದೇವತೆಗಳಾಗುವವರು – ಎಂಬುದನ್ನು ನೆನಪಿಡಿ. ದಾತನ ಮಕ್ಕಳು ತೆಗೆದುಕೊಂಡು ಕೊಡುವುದಿಲ್ಲ. ನನಗೆ ಮಾನ ಕೊಟ್ಟರೆ, ಗೌರವ ಕೊಟ್ಟರೆ, ನಾನೂ ಕೂಡ ಕೊಡುವೆ – ಈ ತರಹವಲ್ಲ. ಸದಾ ದಾತನ ಮಕ್ಕಳು ಕೊಡುವವರು. ಈ ತರಹ ನಶೆ ಸದಾ ಇರುತ್ತದೆಯಲ್ಲವೆ! ಇಲ್ಲಾ, ಒಂದು ಬಾರಿ ಕಮ್ಮಿ ಒಂದು ಬಾರಿ ಜಾಸ್ತಿ? ಇನ್ನೂ ಮಾಯೆಗೆ ಬೀಳ್ಕೊಡುಗೆ ಕೊಟ್ಟಿಲ್ಲವೆ? ನಿಧಾನವಾಗಿ ಕೊಡುವುದಲ್ಲ. ಅಷ್ಟು ಸಮಯವೂ ಇಲ್ಲ. ತಡವಾಗಿ ಜ್ಞಾನಕ್ಕೆ ಬಂದಿರುವಿರಿ ಮತ್ತು ನಿಧಾನವಾಗಿ ಪುರುಷಾರ್ಥ ಮಾಡಿದರೆ ತಲುಪಲು ಸಾಧ್ಯವಿಲ್ಲ. ನಿಶ್ಚಯವಾಯಿತು, ನಶೆ ಏರಿತು ಮತ್ತೆ ಹಾರಲು ಶುರು ಮಾಡಿ. ಈಗ ಹಾರುವ ಕಲೆಯ ಸಮಯ. ಹಾರಿದರೆ ವೇಗವಾಗಿರುತ್ತದಲ್ಲವೆ? ತಾವು ಅದೃಷ್ಟಶಾಲಿಗಳು, ಹಾರುವ ಸಮಯದಲ್ಲಿ ಬಂದಿರುವಿರಿ. ಆದ್ದರಿಂದ ಸದಾ ತಮ್ಮನ್ನು ಈ ತರಹ ಅನುಭವ ಮಾಡಿ, ನಾನು ಬಹಳ-ಬಹಳ ಭಾಗ್ಯವಂತನಾಗಿರುವೆನೆಂದು. ಇಂತಹ ಭಾಗ್ಯ ಪುನಃ ಇಡೀ ಕಲ್ಪದಲ್ಲಿ ಸಿಗಲು ಸಾಧ್ಯವಿಲ್ಲ. ಹಾಗಾದರೆ ದಾತನ ಮಕ್ಕಳಾಗಿ, ತೆಗೆದುಕೊಳ್ಳುವ ಸಂಸ್ಕರವೇ ಇರಬಾರದು. ಧನ ಕೊಡಲಿ, ಬಟ್ಟೆ ಕೊಡಲಿ, ತಿನ್ನಲು ಕೊಡಲಿ. ದಾತನ ಮಕ್ಕಳಿಗೆ ಎಲ್ಲ ಸ್ವತಃ ಪ್ರಾಪ್ತಿಯಾಗುತ್ತದೆ. ಬೇಡುವವರಿಗೆ ಸಿಗುವುದಿಲ್ಲ. ದಾತರಾದವರಿಗೆ ಸ್ವತ: ಸಿಗುತ್ತಿರುತ್ತದೆ. ಒಳ್ಳೆಯದು.
ವರದಾನ:-
ಯಥಾರ್ಥ ನೆನಪೆಂದರೆ ಸರ್ವಶಕ್ತಿಗಳಿಂದ ಸದಾ ಸಂಪನ್ನರಾಗಿ ಇರುವುದು. ಪರಿಸ್ಥಿತಿಗಳೆಂಬ ಶತ್ರುಗಳು ಬಂದಾಗ ಶಸ್ತ್ರಗಳು ಉಪಯೋಗಕ್ಕೆ ಬರದಿದ್ದರೆ ಶಸ್ತ್ರಧಾರಿಯೆಂದು ಹೇಳುವುದಿಲ್ಲ. ಪ್ರತಿಯೊಂದು ಕರ್ಮದಲ್ಲಿಯೂ ನೆನಪಿದ್ದಾಗ ಸಫಲತೆಯಾಗುವುದು. ಹೇಗೆ ಕರ್ಮವಿಲ್ಲದೆ ಒಂದು ಸೆಕೆಂಡ್ ಸಹ ಇರುವುದಕ್ಕೆ ಆಗುವುದಿಲ್ಲವೋ ಹಾಗೆಯೇ ಯಾವುದೇ ಕರ್ಮವು ಯೋಗವಿಲ್ಲದೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕರ್ಮಯೋಗಿ, ಶಸ್ತ್ರಧಾರಿಯಾಗಿರಿ ಹಾಗೂ ಸಮಯದಲ್ಲಿ ಸರ್ವಶಕ್ತಿಗಳನ್ನು ಆದೇಶದನುಸಾರ ಉಪಯೋಗ ಮಾಡುತ್ತೀರೆಂದರೆ ಹೇಳಲಾಗುತ್ತದೆ – ಯಥಾರ್ಥ ಯೋಗಿ.
ಸ್ಲೋಗನ್:-
➤ Email me Murli: Receive Daily Murli on your email. Subscribe!