01 June 2021 KANNADA Murli Today – Brahma Kumaris

May 31, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಇಡೀ ವಿಶ್ವವೇ ಈಶ್ವರೀಯ ಪರಿವಾರವಾಗಿದೆ, ಆದ್ದರಿಂದ ನೀವು ಮಾತಾಪಿತಾ ನಾವು ನಿಮ್ಮ ಬಾಲಕರೆಂದು ಹಾಡುತ್ತಾರೆ, ನೀವೀಗ ಪ್ರತ್ಯಕ್ಷದಲ್ಲಿ ಈಶ್ವರೀಯ ಪರಿವಾರದವರಾಗಿದ್ದೀರಿ”

ಪ್ರಶ್ನೆ:: -

ತಂದೆಯಿಂದ 21 ಜನ್ಮಗಳ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಸಹಜ ವಿಧಿ ಯಾವುದಾಗಿದೆ?

ಉತ್ತರ:-

ಸಂಗಮದಲ್ಲಿ ಶಿವ ತಂದೆಯನ್ನು ತಮ್ಮ ವಾರಸುಧಾರನನ್ನಾಗಿ ಮಾಡಿಕೊಳ್ಳಿ. ತನು-ಮನ-ಧನದಿಂದ ಬಲಿಹಾರಿಯಾಗಿ, ಆಗ 21 ಜನ್ಮಗಳಿಗಾಗಿ ಪೂರ್ಣ ಆಸ್ತಿಯು ಪ್ರಾಪ್ತಿಯಾಗುವುದು. ತಂದೆಯು ಹೇಳುತ್ತಾರೆ – ಯಾವ ಮಕ್ಕಳು ಸಂಗಮದಲ್ಲಿ ತಮ್ಮ ಹಳೆಯದೆಲ್ಲವನ್ನೂ ಇನ್ಶೂರ್ ಮಾಡುವರೋ ಅವರಿಗೆ ಪ್ರತಿಫಲವಾಗಿ ನಾನು 21 ಜನ್ಮಗಳವರೆಗೆ ಕೊಡುತ್ತೇನೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಯನ ಹೀನನಿಗೆ ದಾರಿ ತೋರಿಸು ಪ್ರಭು………..

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಈ ರೀತಿ ಭಕ್ತರು ಭಗವಂತನನ್ನು ಕರೆಯುತ್ತಾರೆ ಆದರೆ ಭಗವಂತನನ್ನು ಪೂರ್ಣ ರೀತಿಯಲ್ಲಿ ಅರಿತುಕೊಳ್ಳದ ಕಾರಣ ಮನುಷ್ಯರು ಎಷ್ಟೊಂದು ದುಃಖಿಯಾಗಿದ್ದಾರೆ. ಭಕ್ತಿ ಮಾರ್ಗದಲ್ಲಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಕೇವಲ ಈ ಜೀವನದ ಮಾತಿಲ್ಲ. ಯಾವಾಗಿನಿಂದ ಭಕ್ತಿಯು ಆರಂಭವಾಗಿದೆಯೋ ಆಗಿನಿಂದಲೂ ಅಲೆದಾಡುತ್ತಲೇ ಇದ್ದಾರೆ. ಭಾರತದಲ್ಲಿಯೇ ದೇವಿ-ದೇವತೆಗಳ ರಾಜ್ಯವಿತ್ತು ಯಾವುದಕ್ಕೆ ಸ್ವರ್ಗ, ಸತ್ಯ ಖಂಡವೆಂದು ಹೇಳಲಾಗುತ್ತಿತ್ತು. ಈಗ ಭಾರತವು ಅಸತ್ಯ ಖಂಡವಾಗಿದೆ. ಭಾರತದ ಮಹಿಮೆಯು ಬಹಳ ಭಾರಿಯಾಗಿದೆ ಏಕೆಂದರೆ ಭಾರತವು ಪರಮಪಿತ ಪರಮಾತ್ಮನ ಜನ್ಮ ಸ್ಥಳವಾಗಿದೆ. ಅವರ ಮೂಲ ಹೆಸರಾಗಿದೆ, ಶಿವ. ಶಿವ ಜಯಂತಿಯನ್ನು ಆಚರಿಸುತ್ತಾರೆ, ರುದ್ರ ಅಥವಾ ಸೋಮನಾಥ ಜಯಂತಿಯೆಂದು ಹೇಳಲಾಗುವುದಿಲ್ಲ. ಶಿವ ಜಯಂತಿ ಅಥವಾ ಶಿವರಾತ್ರಿ ಎಂದು ಹೇಳಲಾಗುತ್ತದೆ. ಸ್ವರ್ಗದ ಸ್ಥಾಪನೆ ಮಾಡುವವರು ಒಬ್ಬರೇ ಸ್ವರ್ಗದ ರಚಯಿತನಾಗಿದ್ದಾರೆ. ಎಲ್ಲಾ ಭಕ್ತರ ಭಗವಂತನಂತೂ ಅವಶ್ಯವಾಗಿ ಒಬ್ಬರೇ ಆಗಿರಬೇಕು. ಎಲ್ಲರೂ ನಯನಹೀನರಾಗಿದ್ದಾರೆ. ಅರ್ಥಾತ್ ಜ್ಞಾನದ ಚಕ್ಷು ಅಥವಾ ಡಿವೈನ್ ಇನ್ಸೈಟ್ ಇಲ್ಲ. ಭಗವಾನುವಾಚ – ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಶ್ರೀ ಮದ್ಭಗವದ್ಗೀತೆಯು ಮುಖ್ಯವಾಗಿದೆ, ಶ್ರೀ ಅರ್ಥಾತ್ ಶ್ರೇಷ್ಠ ಮತ. ಈಗ ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡಲಾಗುತ್ತದೆ. ದಿವ್ಯ ಚಕ್ಷು ಅರ್ಥಾತ್ ಜ್ಞಾನದ ಮೂರನೇ ನೇತ್ರವನ್ನು ತೋರಿಸುತ್ತಾರೆ. ವಾಸ್ತವದಲ್ಲಿ ಜ್ಞಾನದ ಮೂರನೇ ನೇತ್ರವು ನೀವು ಬ್ರಾಹ್ಮಣರಿಗೆ ಸಿಗುತ್ತದೆ, ಯಾವುದರಿಂದ ನೀವು ತಂದೆಯನ್ನು ಹಾಗೂ ತಂದೆಯ ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುತ್ತೀರಿ. ಈ ಸಮಯದಲ್ಲಿ ಎಲ್ಲರಲ್ಲಿಯೂ ದೇಹದ ಅಹಂಕಾರ ಅಥವಾ ಪಂಚ ವಿಕಾರಗಳಿವೆ. ಆದ್ದರಿಂದ ಘೋರ ಅಂಧಕಾರದಲ್ಲಿದ್ದಾರೆ. ನೀವು ಮಕ್ಕಳ ಬಳಿ ಪ್ರಕಾಶವಿದೆ, ನೀವಾತ್ಮರು ಇಡೀ ವಿಶ್ವದ ಚರಿತ್ರೆ-ಭೂಗೋಳವನ್ನು ಅರಿತುಕೊಂಡಿದ್ದೀರಿ, ಮೊದಲು ನೀವೆಲ್ಲರೂ ಅಜ್ಞಾನದಲ್ಲಿದ್ದಿರಿ, ಜ್ಞಾನ ಅಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತು. ಯಾರು ಪೂಜ್ಯರಾಗಿದ್ದರೋ ಅವರೇ ನಂತರ ಪೂಜಾರಿಗಳಾಗಿ ಬಿಟ್ಟಿದ್ದಾರೆ. ಪೂಜ್ಯರು ಪ್ರಕಾಶತೆಯಲ್ಲಿರುತ್ತಾರೆ, ಪೂಜಾರಿಗಳು ಅಂಧಕಾರದಲ್ಲಿ ಇದ್ದಾರೆ. ಪರಮಾತ್ಮನಿಗೆ ನೀವೇ ಪೂಜ್ಯ, ನೀವೇ ಪೂಜಾರಿ ಎಂದು ಹೇಳುವಂತಿಲ್ಲ, ಅವರು ಪರಮ ಪೂಜ್ಯನಾಗಿದ್ದಾರೆ. ಎಲ್ಲರನ್ನೂ ಪೂಜ್ಯರನ್ನಾಗಿ ಮಾಡುವವರಾಗಿದ್ದಾರೆ. ಅವರಿಗೆ ಪರಮ ಪೂಜ್ಯರೆಂದು ಹೇಳಲಾಗುತ್ತದೆ. ಪರಮಪಿತ ಪರಮಾತ್ಮ ಎಂದರೆ ಪರಮಾತ್ಮ. ಕೃಷ್ಣನಿಗೆ ಈ ರೀತಿ ಹೇಳುವರೇ! ಕೃಷ್ಣನನ್ನು ಎಲ್ಲರೂ ಪರಮಪಿತನೆಂದು ಹೇಳುವುದಿಲ್ಲ. ನಿರಾಕಾರ ತಂದೆಗೇ ಎಲ್ಲರೂ ಪರಮಪಿತನೆಂದು ಹೇಳುತ್ತಾರೆ. ಅವರೂ ಆತ್ಮನೇ ಆಗಿದ್ದಾರೆ ಆದರೆ ಪರಮ ಅರ್ಥ ಶ್ರೇಷ್ಠರಾಗಿದ್ದಾರೆ ಆದ್ದರಿಂದ ಅವರಿಗೆ ಪರಮಾತ್ಮನೆಂದು ಹೇಳಲಾಗುತ್ತದೆ. ಅವರು ಪರಮ ಆತ್ಮ, ಸದಾ ಪರಮಧಾಮದಲ್ಲಿ ಇರುವವರಾಗಿದ್ದಾರೆ. ಆಂಗ್ಲ ಭಾಷೆಯಲ್ಲಿ ಅವರಿಗೆ ಸುಪ್ರೀಂ ಸೌಲ್ ಎಂದು ಹೇಳಲಾಗುತ್ತದೆ. ತಂದೆಯು ಹೇಳುತ್ತಾರೆ – ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿ ಹೋಗಿದ್ದರು ಎಂದು ಹಾಡುತ್ತೀರಿ. ಪರಮಾತ್ಮನು ಪರಮಾತ್ಮನಿಂದ ಬಹುಕಾಲ ಅಗಲಿದ್ದರು ಎಂದು ಹೇಳುವುದಿಲ್ಲ. ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮನೆಂದು ಹೇಳುವುದು ಮೊಟ್ಟ ಮೊದಲನೇ ಅಜ್ಞಾನವಾಗಿದೆ. ಆತ್ಮವಂತೂ ಜನನ-ಮರಣದಲ್ಲಿ ಬರುತ್ತದೆ, ಪರಮಾತ್ಮನು ಪುನರ್ಜನ್ಮದಲ್ಲಿ ಬರುತ್ತಾರೆಯೇ? ತಂದೆಯು ತಿಳಿಸುತ್ತಾರೆ – ನೀವು ಭಾರತವಾಸಿಗಳು ಸ್ವರ್ಗವಾಸಿ, ಪೂಜ್ಯರಾಗಿದ್ದಿರಿ. ಎಲ್ಲಾ ದೇವಿ-ದೇವತೆಗಳು ಮಾನವ ಸೃಷ್ಟಿಗೆ ಪೂಜ್ಯರಾಗಿದ್ದರು, ಇದೆಲ್ಲವೂ ಈಶ್ವರೀಯ ಪರಿವಾರವಾಗಿದೆ, ಈಶ್ವರನು ರಚಯಿತನಾಗಿದ್ದಾರೆ. ನೀವು ಮಾತಾಪಿತಾ ನಾವು ನಿಮ್ಮ ಬಾಲಕರೆಂದು ಹಾಡುತ್ತಾರೆ ಅಂದಮೇಲೆ ಇದು ಪರಿವಾರವಾಯಿತಲ್ಲವೆ. ಅಂದಾಗ ತಿಳಿಸಿ, ನೀವು ಮಾತಾಪಿತಾ ಎಂದು ಯಾರಿಗೆ ಹೇಳುತ್ತೀರಿ? ಇದನ್ನು ಯಾರು ಹೇಳುತ್ತಾರೆ? ನೀವು ಮಾತಾಪಿತಾ, ನಿಮ್ಮ ಕೃಪೆಯಿಂದ ನಮಗೆ ಸ್ವರ್ಗದಲ್ಲಿ ಅಪಾರ ಸುಖ ಸಿಕ್ಕಿತ್ತು ಎಂದು ಆತ್ಮವೇ ಹೇಳುತ್ತದೆ. ನೀವು ಮಾತಾಪಿತರು ಬಂದು ಸ್ವರ್ಗದ ಸ್ಥಾಪನೆ ಮಾಡುತ್ತೀರಿ, ಆದ್ದರಿಂದ ನಾವು ನಿಮ್ಮ ಮಕ್ಕಳಾಗುತ್ತೇವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಸಂಗಮದಲ್ಲಿಯೇ ಬಂದು ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತೇನೆ. ಮನುಷ್ಯರ ಬುದ್ಧಿಯು ಸಂಪೂರ್ಣ ಭ್ರಷ್ಟವಾಗಿ ಬಿಟ್ಟಿದೆ, ಸ್ವರ್ಗವನ್ನೇ ನರಕವೆಂದು ತಿಳಿದುಕೊಳ್ಳುತ್ತಾರೆ, ಅಲ್ಲಿಯೂ ಸಹ ಕಂಸ, ಜರಾಸಂಧ, ಹಿರಣ್ಯ ಕಷ್ಯಪ ಮೊದಲಾದವರಿದ್ದರೆಂದು ಹೇಳುತ್ತಾರೆ. ತಂದೆಯು ಬಂದು ತಿಳಿಸುತ್ತಾರೆ – ಮಕ್ಕಳೇ ನೀವು ಮರೆತು ಹೋಗಿದ್ದೀರಾ? ಭಾರತದಲ್ಲಿಯೇ ನೀವು ನನ್ನ ಶಿವ ಜಯಂತಿಯನ್ನು ಆಚರಿಸುತ್ತೀರಿ, ಶಿವರಾತ್ರಿಯೆಂದೂ ಗಾಯನವಿದೆ ಅಂದಾಗ ಯಾವ ರಾತ್ರಿ? ಇದು ಬ್ರಹ್ಮನ ಬೇಹದ್ದಿನ ರಾತ್ರಿಯಾಗಿದೆ. ತಂದೆಯು ಸಂಗಮದಲ್ಲಿ ಬಂದು ರಾತ್ರಿಯಿಂದ ದಿನ ಅರ್ಥಾತ್ ನರಕದಿಂದ ಸ್ವರ್ಗವನ್ನಾಗಿ ಮಾಡುತ್ತಾರೆ. ಶಿವರಾತ್ರಿಯ ಅರ್ಥವು ಯಾರಿಗೂ ತಿಳಿದಿಲ್ಲ, ಭಗವಂತನು ನಿರಾಕಾರನಾಗಿದ್ದಾರೆ. ಮನುಷ್ಯರಿಗಾದರೆ ಪ್ರತೀ ಜನ್ಮದಲ್ಲಿ ಶರೀರದ ಹೆಸರು ಬದಲಾಗುತ್ತದೆ. ಪರಮಾತ್ಮನು ಹೇಳುತ್ತಾರೆ- ನನಗೆ ಯಾವುದೇ ಶರೀರದ ಹೆಸರಿಲ್ಲ, ನನ್ನ ಹೆಸರು ಶಿವನೆಂದೇ ಆಗಿದೆ, ನಾನು ಕೇವಲ ವೃದ್ಧ, ವಾನಪ್ರಸ್ಥ ತನುವಿನ ಆಧಾರ ತೆಗೆದುಕೊಳ್ಳುತ್ತೇನೆ, ಇವರು ಪೂಜ್ಯರಾಗಿದ್ದರು, ಈಗ ಪೂಜಾರಿಯಾಗಿದ್ದಾರೆ. ಶಿವ ತಂದೆಯು ಬಂದು ಸ್ವರ್ಗವನ್ನು ರಚಿಸುತ್ತಾರೆ, ನಾವು ಅವರ ಮಕ್ಕಳಾಗಿದ್ದೇವೆ ಅಂದಮೇಲೆ ಅವಶ್ಯವಾಗಿ ನಾವು ಸ್ವರ್ಗದ ಮಾಲೀಕರಾಗಬೇಕಲ್ಲವೆ. ಶಿವ ತಂದೆಯು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನದು ತಮ್ಮತಮ್ಮದೇ ಪಾತ್ರವಿದೆ. ಪ್ರತಿಯೊಂದು ಆತ್ಮನಲ್ಲಿ ತನ್ನ ಸುಖ-ದುಃಖದ ಪಾತ್ರವು ನಿಗಧಿಯಾಗಿದೆ. ನೀವು ತಿಳಿದುಕೊಂಡಿದ್ದೀರಿ, ಶಿವ ತಂದೆಗೆ ನೀವು ವಾರಸುಧಾರರಾಗಿದ್ದೀರಿ, ಶಿವ ತಂದೆಯು ಸ್ವರ್ಗವಾಸಿಗಳನ್ನಾಗಿ ಮಾಡಿದ್ದರು. ಆದ್ದರಿಂದಲೇ ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ – ಓ ಭಗವಂತನೇ ದಯೆ ತೋರಿಸಿ ಎಂದು. ಸಾಧುಗಳೂ ಸಹ ಸಾಧನೆ ಮಾಡುತ್ತಾರೆ ಏಕೆಂದರೆ ಇಲ್ಲಿ ದುಃಖವಿರುವುದರಿಂದ ನಿರ್ವಾಣಧಾಮಕ್ಕೆ ಹೋಗಲು ಬಯಸುತ್ತಾರೆ. ಆತ್ಮವು ಪರಮಾತ್ಮನಲ್ಲಿ ಲೀನವಾಗುತ್ತದೆ ಅಥವಾ ನಾವಾತ್ಮರೇ ಪರಮಾತ್ಮನೆಂದು ತಿಳಿದುಕೊಳ್ಳುವುದು ತಪ್ಪಾಗಿದೆ. ಈಗ ನೀವು ಹೇಳುತ್ತೀರಿ, ನಾವಾತ್ಮರು ಪರಮಧಾಮ ನಿವಾಸಿಗಳಾಗಿದ್ದೇವೆ, ನಂತರ ದೇವತಾ ಕುಲದಲ್ಲಿ ಬರುತ್ತೇವೆ, 84 ಜನ್ಮಗಳಲ್ಲಿ ಬರುತ್ತೇವೆ, ನಾವಾತ್ಮರೇ ವರ್ಣಗಳಲ್ಲಿ ಬರುತ್ತೇವೆ. ಶಿವ ತಂದೆಯು ಜನನ-ಮರಣದಲ್ಲಿ ಬರುವುದಿಲ್ಲ. ಕೇವಲ ನಾರಾಯಣನ ರಾಜಧಾನಿಯಿತ್ತು, ಹೇಗೆ ಕ್ರಿಶ್ಚಿಯನ್ನರ ವಂಶಾವಳಿಯಲ್ಲಿ ಎಡ್ವರ್ಡ್ ದಿ ಫಸ್ಟ್, ಸೆಕೆಂಡ್… ಹೀಗೆ ನಡೆಯುತ್ತದೆ. ಹಾಗೆಯೇ ಅಲ್ಲಿಯೂ ಸಹ ಲಕ್ಷ್ಮೀ-ನಾರಾಯಣ ದಿ ಫಸ್ಟ್, ಸೆಕೆಂಡ್, ಥರ್ಡ್… ಹೀಗೆ 8 ಪೀಳಿಗೆಗಳು ನಡೆಯುತ್ತವೆ. ಈಗ ನೀವು ಬ್ರಾಹ್ಮಣರ ಮೂರನೇ ನೇತ್ರವು ತೆರೆದಿದೆ. ತಂದೆಯು ಕುಳಿತು ಆತ್ಮಗಳೊಂದಿಗೆ ಮಾತನಾಡುತ್ತಾರೆ – ನೀವು 84 ಜನ್ಮಗಳ ಚಕ್ರವನ್ನು ಸುತ್ತಿ ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾ ಬಂದಿದ್ದೀರಿ. ವರ್ಣಗಳ ಒಂದು ಚಿತ್ರವನ್ನೂ ಮಾಡುತ್ತಾರೆ ಅದರಲ್ಲಿ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ, ಬ್ರಾಹ್ಮಣರನ್ನು ತೋರಿಸುತ್ತಾರೆ. ಈಗ ನೀವು ತಿಳಿದುಕೋಂಡಿದ್ದೀರಿ – ನಾವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೇವೆ, ಈ ಸಮಯದಲ್ಲಿ ನಾವು ಪ್ರತ್ಯಕ್ಷ ರೂಪದಲ್ಲಿ ಈಶ್ವರೀಯ ಸಂತಾನರಾಗಿದ್ದೇವೆ, ಈ ಸಹಜ ರಾಜಯೋಗ ಮತ್ತು ಜ್ಞಾನದಿಂದ ನಮಗೆ ಅಪಾರ ಸುಖ ಸಿಗುತ್ತದೆ. ಕೆಲವರು ಸೂರ್ಯವಂಶಿ ರಾಜಧಾನಿಯ ಆಸ್ತಿ, ಇನ್ನೂ ಕೆಲವರು ಚಂದ್ರವಂಶಿ ರಾಜಧಾನಿಯ ಆಸ್ತಿಯನ್ನು ಪಡೆಯುತ್ತಾರೆ. ಇಡೀ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಪ್ರತಿಯೊಬ್ಬರೂ ತಮ್ಮ ಪುರುಷಾರ್ಥದಿಂದ ಆ ಪದವಿಯನ್ನು ಪಡೆಯುತ್ತಾರೆ. ಈಗ ಓದುತ್ತಾ-ಓದುತ್ತಾ ನಾವು ಶರೀರ ಬಿಟ್ಟರೆ ಏನು ಪದವಿ ಸಿಗುವುದೆಂದು ಯಾರಾದರೂ ಒಂದುವೇಳೆ ಕೇಳಿದರೆ ತಂದೆಯು ತಿಳಿಸಬಲ್ಲರು. ಯೋಗದಿಂದಲೇ ಆಯಸ್ಸು ವೃದ್ಧಿಯಾಗುತ್ತದೆ, ವಿಕರ್ಮಗಳು ವಿನಾಶವಾಗುತ್ತದೆ, ಪತಿತರಿಂದ ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ಎಂದು ಹೇಳುತ್ತಿದ್ದಂತೆಯೇ ಭಗವಂತನ ನೆನಪು ಬರುತ್ತದೆ ಆದರೆ ಭಗವಂತ ಯಾರೆಂದು ತಿಳಿದುಕೊಂಡಿಲ್ಲ. ತಂದೆಯು ಹೇಳುತ್ತಾರೆ – ನಾನು ಭಾರತದಲ್ಲಿಯೇ ಬರುತ್ತೇನೆ, ಇದು ನನ್ನ ಜನ್ಮ ಸ್ಥಾನವಾಗಿದೆ. ಸೋಮನಾಥ ಮಂದಿರವು ಎಷ್ಟು ಸುಂದರವಾಗಿದೆ! ಇದನ್ನು ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಭಕ್ತಿ ಮಾರ್ಗದಲ್ಲಿ ನೆನಪಾರ್ಥವಾಗಲು ಆರಂಭವಾಗುತ್ತದೆ. ಪೂಜಾರಿಗಳಾದಾಗ ಮೊಟ್ಟ ಮೊದಲಿಗೆ ಸೋಮನಾಥ ಮಂದಿರವನ್ನು ಕಟ್ಟಿಸುತ್ತಾರೆ. ಭಾರತವು ಸತ್ಯ-ತ್ರೇತಾಯುಗದಲ್ಲಿ ಬಹಳ ಸಾಹುಕಾರನಾಗಿತ್ತು, ಮಂದಿರಗಳಲ್ಲಿಯೂ ಅಪಾರ ಧನವಿತ್ತು, ಭಾರತವು ವಜ್ರ ಸಮಾನವಾಗಿತ್ತು, ಈಗಂತೂ ಭಾರತವು ಕಂಗಾಲ ಕವಡೆಯ ಸಮಾನವಾಗಿದೆ. ಮತ್ತೆ ತಂದೆಯು ಬಂದು ಭಾರತವನ್ನು ವಜ್ರ ಸಮಾನವನ್ನಾಗಿ ಮಾಡುತ್ತಾರೆ. ರಚಯಿತ ಯಾರೆಂದು ಯಾರೊಂದಿಗಾದರೂ ಕೇಳಿರಿ ಅವರು ಪರಮಾತ್ಮನೆಂದು ಹೇಳುತ್ತಾರೆ. ಅವರು ಎಲ್ಲಿದ್ದಾರೆ ಎಂದರೆ ಸರ್ವವ್ಯಾಪಿ ಆಗಿದ್ದಾರೆಂದು ಹೇಳಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ – ಈ ಇಡೀ ವೃಕ್ಷವೇ ಜಡ ಜಡೀಭೂತ ಸ್ಥಿತಿಯನ್ನು ತಲುಪಿದೆ.

ತಮ್ಮನ್ನು ನೋಡಿಕೊಳ್ಳಿ – ನಾನು ಮಮ್ಮಾ-ಬಾಬಾರವರ ಸಿಂಹಾಸನಕ್ಕೆ ಅಧಿಕಾರಿಯಾಗಲು ಯೋಗ್ಯನಾಗಿದ್ದೇನೆಯೇ? ಇದರಲ್ಲಿ ಪವಿತ್ರತೆಯು ಮುಖ್ಯವಾಗಿದೆ, ಈಗಂತೂ ಆರೋಗ್ಯವೂ ಇಲ್ಲ, ಐಶ್ವರ್ಯವೂ ಇಲ್ಲ, ಸಂತೋಷವೂ ಇಲ್ಲ. ಇದು ಮೃಗ ತೃಷ್ಣ ಸಮಾನ ರಾಜ್ಯವಾಗಿದೆ. ಇದರ ಮೇಲೆ ದುರ್ಯೋಧನನ ಕಥೆಯನ್ನು ಶಾಸ್ತ್ರಗಳಲ್ಲಿ ಬರೆದಿದ್ದಾರೆ. ವಿಕಾರಿಗೆ ದುರ್ಯೋಧನನೆಂದು ಹೇಳಲಾಗುತ್ತದೆ. ನಮ್ಮನ್ನು ರಕ್ಷಣೆ ಮಾಡಿ ಎಂದು ದ್ರೌಪದಿಯರು ಹೇಳುತ್ತಾರೆ, ಎಲ್ಲರೂ ದ್ರೌಪದಿಯರಲ್ಲವೆ. ಈ ಕನ್ಯೆಯರು ಸ್ವರ್ಗದ ದ್ವಾರವಾಗಿದ್ದಾರೆ, ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಯಾರ ಬುದ್ಧಿಯೋಗವು ಪೂರ್ಣ ಜೋಡಿಸಲ್ಪಟ್ಟಿರುವುದೊ ಅವರಿಗೆ ಧಾರಣೆಯೂ ಆಗುವುದು. ಜ್ಞಾನವನ್ನು ಬ್ರಹ್ಮಚರ್ಯದಲ್ಲಿಯೇ ಓದಲಾಗುತ್ತದೆ. ತಂದೆಯು ಹೇಳುತ್ತಾರೆ – ಗೃಹಸ್ಥ ವ್ಯವಹಾರದಲ್ಲಿತ್ತಾ ಕಮಲಪುಷ್ಪ ಸಮಾನರಾಗಬೇಕಾಗಿದೆ, ಎರಡೂ ಕಡೆ ನಿಭಾಯಿಸಬೇಕಾಗಿದೆ. ಸಾಯುವುದಂತೂ ಖಂಡಿತ, ಸಾಯುವ ಸಮಯದಲ್ಲಿ ಮನುಷ್ಯರಿಗೆ ಮಂತ್ರವನ್ನು ಕೊಡುತ್ತಾರೆ. ತಂದೆಯು ಹೇಳುತ್ತಾರೆ – ನೀವೆಲ್ಲರೂ ಶರೀರ ಬಿಡುವವರಾಗಿದ್ದೀರಿ, ನಾನು ಕಾಲರ ಕಾಲ ಮಹಾಕಾಲನು ಮರಳಿ ಕರೆದುಕೊಂಡು ಹೋಗುವವನಾಗಿದ್ದೇನೆ ಅಂದಮೇಲೆ ಖುಷಿಯಾಗಬೇಕಲ್ಲವೆ. ಯಾರು ಚೆನ್ನಾಗಿ ಓದುವರೋ ಅವರು ಸ್ವರ್ಗದ ಮಾಲೀಕರಾಗುತ್ತಾರೆ, ಓದಲಿಲ್ಲವೆಂದರೆ ಪ್ರಜಾ ಪದವಿಯನ್ನು ಪಡೆಯುತ್ತಾರೆ. ನೀವಿಲ್ಲಿ ರಾಜ್ಯ ಪದವಿಯನ್ನು ಪಡೆಯಲು ಬಂದಿದ್ದೀರಿ, ಇದು ವಿದ್ಯೆಯಾಗಿದೆ, ಇದರಲ್ಲಿ ಅಂಧಶ್ರದ್ಧೆಯ ಮಾತಿಲ್ಲ. ರಾಜ್ಯಭಾಗ್ಯಕ್ಕಾಗಿ ಈ ವಿದ್ಯೆಯಿದೆ. ಹೇಗೆ ವಿದ್ಯೆಯ ಗುರಿ-ಧ್ಯೇಯವಿರುತ್ತದೆ – ವಕೀಲರಾಗುತ್ತಾರೆಂದರೆ ಅವಶ್ಯವಾಗಿ ಓದಿಸುವ ಶಿಕ್ಷಕರೊಂದಿಗೆ ಯೋಗವನ್ನು ಇಡಬೇಕಾಗುತ್ತದೆ, ಇಲ್ಲಿ ನಿಮಗೆ ಭಗವಂತನೇ ಓದಿಸುತ್ತಾರೆ ಅಂದಮೇಲೆ ಅವರೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ. ತಂದೆಯು ಹೇಳುತ್ತಾರೆ – ಮಕ್ಕಳೇ, ನಾನು ಪರಮಧಾಮ ಬಹಳ ದೂರದಿಂದ ಬರುತ್ತೇನೆ, ಪರಮಧಾಮವು ಎಷ್ಟು ಉನ್ನತವಾಗಿದೆ. ಸೂಕ್ಷ್ಮ ವತನಕ್ಕಿಂತಲೂ ಮೇಲೆ ಅಲ್ಲಿಂದ ಬರುವುದರಿಂದ ನನಗೆ ಒಂದು ಸೆಕೆಂಡ್ ಸಾಕು. ನನಗಿಂತಲೂ ತೀಕ್ಷ್ಣ ಮತ್ತ್ಯಾರೂ ಇರಲು ಸಾಧ್ಯವಿಲ್ಲ, ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಕೊಡುತ್ತೇನೆ. ಜನಕನ ಉದಾಹರಣೆಯಿದೆಯಲ್ಲವೆ. ಈಗಂತೂ ನರಕ, ಹಳೆಯ ಪ್ರಪಂಚವಾಗಿದೆ, ಸ್ವರ್ಗಕ್ಕೆ ಹೊಸ ಪ್ರಪಂಚವೆಂದು ಹೇಳಲಾಗುತ್ತದೆ. ತಂದೆಯು ನರಕದ ವಿನಾಶ ಮಾಡಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ, ಉಳಿದೆಲ್ಲಾ ಆತ್ಮರು ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಆತ್ಮವು ಅವಿನಾಶಿಯಾಗಿದೆ, ಅದಕ್ಕೆ ಅವಿನಾಶಿ ಪಾತ್ರವು ಸಿಕ್ಕಿದೆ ಅಂದಮೇಲೆ ಆತ್ಮವು ಚಿಕ್ಕದು-ದೊಡ್ಡದಾಗಲು ಹೇಗೆ ಸಾಧ್ಯ! ಅಥವಾ ಅದು ಸುಡಲು ಹೇಗೆ ಸಾಧ್ಯ? ನಕ್ಷತ್ರ ಮಾದರಿಯಾಗಿದೆ. ಗಾತ್ರದಲ್ಲಿ ಚಿಕ್ಕದು-ದೊಡ್ಡದಾಗಲು ಸಾಧ್ಯವಿಲ್ಲ, ನೀವೀಗ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಿ, ಪರಮಾತ್ಮ ಜ್ಞಾನ ಸಾಗರ ಆನಂದ ಸಾಗರನಾಗಿದ್ದಾರೆ, ಅವರು ನಿಮಗೆ ಓದಿಸುತ್ತಿದ್ದಾರೆ. ಈ ವಿದ್ಯೆಯಿಂದ ನಾವೇ ದೇವಿ-ದೇವತೆಗಳಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ನೀವು ಭಾರತದ ಸೇವೆ ಮಾಡುತ್ತಿದ್ದೀರಿ. ಮೊಟ್ಟಮೊದಲಿಗೆ ಈ ತಂದೆಗೆ ಮಕ್ಕಳಾಗಬೇಕಾಗಿದೆ, ಅನ್ಯ ಸ್ಥಳಗಳಲ್ಲಂತೂ ಗುರುವಿನ ಬಳಿ ಹೋಗುತ್ತಾರೆ, ಅವರಿಗೆ ಶಿಷ್ಯರಾಗುತ್ತಾರೆ ಅಥವಾ ಅವರನ್ನು ತಮ್ಮ ಗುರುವನ್ನಾಗಿ ಮಾಡಿಕೊಳ್ಳುತ್ತಾರೆ. ಇಲ್ಲಿ ಇವರು ತಂದೆಯಾಗಿದ್ದಾರೆ, ಅಂದಮೇಲೆ ಮೊದಲು ತಂದೆಗೆ ಮಗುವಾಗಬೇಕಾಗಿದೆ. ತಂದೆಯು ಮಕ್ಕಳಿಗೆ ತಮ್ಮ ಆಸ್ತಿಯನ್ನು ಕೊಡುತ್ತಾರೆ, ತಂದೆಯು ಹೇಳುತ್ತಾರೆ – ಮಕ್ಕಳೇ, ನೀವು ನಿಮ್ಮ ಬಳಿ ಇರುವುದೆಲ್ಲವನ್ನೂ ಬದಲಾವಣೆ ಮಾಡಿಕೊಳ್ಳಿ. ನಿಮ್ಮ ಹಳೆಯದೆಲ್ಲವೂ ನನ್ನದು, ನನ್ನದೆಲ್ಲವೂ ನಿಮ್ಮದು. ದೇಹ ಸಹಿತವಾಗಿ ಏನೆಲ್ಲವೂ ಇದೆಯೋ ಅದನ್ನು ನನಗೆ ಕೊಟ್ಟು ಬಿಡಿ. ನಾನು ನಿಮ್ಮ ಆತ್ಮ ಮತ್ತು ಶರೀರವೆರಡನ್ನೂ ಪವಿತ್ರವನ್ನಾಗಿ ಮಾಡುತ್ತೇನೆ, ಮತ್ತು ರಾಜ್ಯ ಪದವಿಯನ್ನೂ ಕೊಡುತ್ತೇನೆ. ನಿಮ್ಮ ಬಳಿ ಏನೆಲ್ಲವೂ ಇದೆಯೋ ಅದನ್ನು ಬಲಿದಾನವಾಗಿ ಕೊಟ್ಟು ಬಿಡಿ ಆಗ ಜೀವನ್ಮುಕ್ತಿ ಸಿಗುವುದು – ಬಾಬಾ, ಇದೆಲ್ಲವೂ ತಮ್ಮದಾಗಿದೆ ಎಂದು. ನನ್ನನ್ನು ನಿಮ್ಮ ವಾರಸುಧಾರನನ್ನಾಗಿ ಮಾಡಿಕೊಳ್ಳಿ, ನಾನು ನಿಮಗೆ 21 ಜನ್ಮಗಳವರೆಗೆ ವಾರಸುಧಾರನಾಗುತ್ತೇನೆ, ಕೇವಲ ನನ್ನ ಮತದಂತೆ ನಡೆಯಿರಿ, ಭಲೆ ಉದ್ಯೋಗ-ವ್ಯವಹಾರಗಳನ್ನೂ ಮಾಡಿ, ವಿದೇಶಕ್ಕೂ ಹೋಗಿ ಏನಾದರೂ ಮಾಡಿ. ಕೇವಲ ನನ್ನ ಮತದಂತೆ ನಡೆಯಿರಿ. ಮಾಯೆಯು ಪದೇ-ಪದೇ ಹಿಂದೆ ಬೀಳುತ್ತದೆ, ಇದರಲ್ಲಿ ಎಚ್ಚರಿಕೆಯಿಂದಿರಿ, ಇದರಲ್ಲಿ ಯಾವುದೇ ವಿಕರ್ಮ ಮಾಡಬೇಡಿ. ಶ್ರೀಮತದಂತೆ ನಡೆದಾಗಲೇ ಶ್ರೇಷ್ಠರಾಗುವಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ನೀವು ತಿಳಿದುಕೊಂಡಿದ್ದೀರಿ – ನಾವು ತಂದೆಯ ಸಲಹೆಯಂತೆ ನಡೆದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆಸ್ತಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಯುಕ್ತಿಯನ್ನೂ ತಿಳಿಸುತ್ತಾರೆ. ಮನುಷ್ಯರಂತೂ ಅನೇಕ ಪ್ರಕಾರದ ಯುಕ್ತಿಗಳನ್ನು ರಚಿಸುತ್ತಾರೆ. ಕೆಲವರು ವಿಜ್ಞಾನದ ಅಭಿಮಾನಿಗಳಾಗಿದ್ದಾರೆ, ಕೆಲವರು ವೈದ್ಯಕೀಯ ಅಭಿಮಾನಿಗಳಾಗಿದ್ದಾರೆ. ಮನುಷ್ಯರ ಹೃದಯವು ಹಾಳಾದರೆ ಇನ್ನೊಂದು ಪ್ಲಾಸ್ಟಿಕ್ ಹೃದಯವನ್ನು ಹಾಕಬಲ್ಲೆವು ಎಂದು ಬರೆಯುತ್ತಾರೆ. ನಿಜವಾದುದನ್ನು ತೆಗೆದು ತಾತ್ಕಾಲಿಕ ಹೃದಯವನ್ನು ನಡೆಸುತ್ತಿರುತ್ತಾರೆ. ಇದೂ ಸಹ ಎಷ್ಟು ಒಳ್ಳೆಯ ಕಲೆಯಾಗಿದೆ ಆದರೆ ಇದು ಅಲ್ಪಕಾಲದ ಸುಖಕ್ಕಾಗಿ. ನಾಳೆ ಅವರು ಮರಣ ಹೊಂದಿದರೆ ಶರೀರವೇ ಸಮಾಪ್ತಿ ಆಗಿ ಬಿಡುವುದು, ಪ್ರಾಪ್ತಿಯೇನೂ ಆಗುವುದಿಲ್ಲ. ಅಲ್ಪಕಾಲಕ್ಕಾಗಿ ಸಿಕ್ಕಿತಷ್ಟೇ. ವಿಜ್ಞಾನದ ಮೂಲಕ ಬಹಳಷ್ಟು ಕಮಾಲ್ ಮಾಡಿ ತೋರಿಸುತ್ತಾರೆ ಅದೂ ಕೇವಲ ಅಲ್ಪಕಾಲಕ್ಕಾಗಿ. ಈ ಮಾತಂತೂ ಎಲ್ಲದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಪಾವನ ಆತ್ಮವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತವಾಗಿ ಬಿಟ್ಟಿದೆ. ಆ ಪತಿತ ಆತ್ಮವನ್ನು ಪುನಃ ಪಾವನವನ್ನಾಗಿ ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಒಬ್ಬ ತಂದೆಯದೇ ಗಾಯನವಿದೆ, ಸರ್ವರ ಪತಿತ-ಪಾವನ, ಸರ್ವರ ಸದ್ಗತಿದಾತ, ಸರ್ವರ ಮೇಲೆ ದಯಾ ದೃಷ್ಟಿಯನ್ನು ಇಡುವವರು, ಸರ್ವೋದಯ ಲೀಡರ್ ಆಗಿದ್ದಾರೆ. ಮನುಷ್ಯರು ತಮ್ಮನ್ನು ಸರ್ವೋದಯ ಲೀಡರ್ ಎಂದು ಕರೆಸಿಕೊಳ್ಳುತ್ತಾರೆ ಆದರೆ ಸರ್ವ ಎಂದರೆ ಅದರಲ್ಲಿ ಎಲ್ಲರೂ ಬಂದುಬಿಡುತ್ತಾರೆ. ಅಂದಮೇಲೆ ಸರ್ವರ ಮೇಲೆ ದಯೆ ತೋರಿಸುವವರು ತಂದೆಯೊಬ್ಬರೇ ಎಂದು ಗಾಯನವಿದೆ. ಅವರಿಗೇ ದಯಾ ಸಾಗರ, ಆನಂದ ಸಾಗರನೆಂದು ಹೇಳುತ್ತಾರೆ. ಉಳಿದ ಮನುಷ್ಯರು ಸರ್ವರ ಮೇಲೆ ದಯೆ ತೋರಿಸಲು ಸಾಧ್ಯವೇ? ತಮ್ಮಮೇಲೆ ದಯೆ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದರೆ ಅನ್ಯರ ಮೇಲೆ ಏನು ಮಾಡುವರು? ಇವರು ಅಲ್ಪಕಾಲದ ದಯೆ ತೋರಿಸುತ್ತಾರೆ. ಎಷ್ಟು ದೊಡ್ಡ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ.

ಈಗ ತಂದೆಯು ತಿಳಿಸುತ್ತಾರೆ – ನಿಮಗೆ ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುವ ಎಷ್ಟು ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಯುಕ್ತಿಯು ಅತಿ ಸಹಜವಾಗಿದೆ, ಕೇವಲ ನನ್ನನ್ನು ನೆನಪು ಮಾಡಿರಿ ಏಕೆಂದರೆ ನೀವು ನನ್ನನ್ನೇ ಮರೆತು ಹೋದಿರಿ. ಸತ್ಯಯುಗದಲ್ಲಿ ನೀವು ಸುಖಿಯಾಗಿರುತ್ತೀರಿ ಆದ್ದರಿಂದ ನನ್ನನ್ನು ನೆನಪು ಮಾಡುವುದಿಲ್ಲ. ನಿಮ್ಮ 84 ಜನ್ಮಗಳ ಚರಿತ್ರೆ-ಭೂಗೋಳವನ್ನು ನಿಮಗೆ ತಿಳಿಸುತ್ತೇನೆ, ನೀವು ಹೀಗೆ ರಾಜ್ಯ ಮಾಡುತ್ತಿದ್ದಿರಿ, ಸದಾ ಸುಖಿಯಾಗಿದ್ದಿರಿ, ನಂತರ ದಿನ-ಪ್ರತಿದಿನ ಕೆಳಗಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನ, ದುಃಖಿ, ಪತಿತರಾಗಿ ಬಿಟ್ಟಿದ್ದೀರಿ. ಈಗ ತಂದೆಯು ಪುನಃ ನೀವುಮಕ್ಕಳಿಗೆ ಕಲ್ಪದ ಮೊದಲಿನಂತೆ ಆಸ್ತಿಯನ್ನು ಕೊಡುತ್ತಿದ್ದಾರೆ. ನೀವೇ ಕಲ್ಪ-ಕಲ್ಪವೂ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಶ್ರೀಮತದಂತೆ ನಡೆಯುತ್ತೀರಿ. ಶ್ರೀಮತವು ಬಾಪ್ದಾದಾರವರ ಮತವಾಗಿದೆ. ಅವರನ್ನು ಬಿಟ್ಟರೆ ಶ್ರೀಮತವೆಲ್ಲಿಂದ ಸಿಗುವುದು! ತಂದೆಯು ತಿಳಿಸುತ್ತಾರೆ – ನೀವು ವಿಚಾರ ಮಾಡಿ, ಈ ಕಲೆಯು ಯಾರಲ್ಲಿಯಾದರೂ ಇದೆಯೇ? ಇಲ್ಲ. ವಿಶ್ವದ ಮಾಲೀಕರನ್ನಾಗಿ ಮಾಡುವ ಯುಕ್ತಿಯನ್ನು ತಂದೆಯೇ ತಿಳಿಸಿಕೊಡುತ್ತಾರೆ. ಇದರ ವಿನಃ ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ತಂದೆಯೇ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಜ್ಞಾನ ತಿಳಿಸುತ್ತಾರೆ. ಕೇವಲ ಸೃಷ್ಟಿಚಕ್ರದ ಜ್ಞಾನವನ್ನು ತಿಳಿದುಕೊಳ್ಳುವುದರಿಂದ ನೀವು ಪವಿತ್ರರಾಗಿ ಬಿಡುವುದಿಲ್ಲ. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ, ಈ ಯೋಗಾಗ್ನಿಯಿಂದಲೇ ನಿಮ್ಮ ಪಾಪದ ಕೊಡವು ಸಮಾಪ್ತಿ ಆಗುವುದು.

ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಬಹಳ ಪತಿತರಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಇತ್ತೀಚೆಗಂತೂ ಮನುಷ್ಯರು ನಾನೇ ಶಿವನೆಂದು ಹೇಳಿಕೊಳ್ಳುತ್ತಾರೆ ಅಥವಾ ನೀವು ಪರಮಾತ್ಮನ ರೂಪವಾಗಿದ್ದೀರಿ, ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ. ಈಗ ತಂದೆಯು ಬಂದಿದ್ದಾರೆ, ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯೇ ನೆನಪು ತರಿಸಬೇಕಾಗಿದೆ. ಸರ್ವರ ಸದ್ಗತಿದಾತನು ಒಬ್ಬ ಪರಮಪಿತ ಪರಮಾತ್ಮನೇ ಆಗಿದ್ದಾರೆ. ಶಿವನ ಮಂದಿರಗಳನ್ನು ಪ್ರತ್ಯೇಕವಾಗಿ ಕಟ್ಟಿಸುತ್ತಾರೆ, ಶಂಕರನ ರೂಪವೇ ಬೇರೆಯಾಗಿದೆ. ಪ್ರದರ್ಶನಿಯಲ್ಲಿಯೂ ಇದನ್ನು ತೋರಿಸಬೇಕಾಗಿದೆ, ಶಿವ ನಿರಾಕಾರ, ಶಂಕರ ಆಕಾರಿಯಾಗಿದ್ದಾನೆ. ಕೃಷ್ಣನಂತೂ ಸಾಕಾರದಲ್ಲಿದ್ದಾನೆ, ಜೊತೆಯಲ್ಲಿ ರಾಧೆಯನ್ನು ತೋರಿಸುವುದು ಸರಿಯಾಗಿದೆ. ಆಗ ಇದು ಸಿದ್ಧವಾಗುವುದು – ಇವರೇ ನಂತರ ಲಕ್ಷ್ಮೀ-ನಾರಾಯಣ ಆಗುತ್ತಾರೆಂದು. ಕೃಷ್ಣನು ದ್ವಾಪರದಲ್ಲಿ ಗೀತೆಯನ್ನು ತಿಳಿಸಲು ಬರುವುದೇ ಇಲ್ಲ. ಪತಿತರಾಗುವುದು ಕಲಿಯುಗದ ಅಂತ್ಯದಲ್ಲಿ, ಸತ್ಯಯುಗದಲ್ಲಿ ಪಾವನರಿರುತ್ತಾರೆ ಅಂದಮೇಲೆ ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಇದನ್ನು ತಂದೆಯೇ ತಿಳಿದುಕೊಂಡಿದ್ದಾರೆ, ಅವರೇ ತ್ರಿಕಾಲದರ್ಶಿಯಾಗಿದ್ದಾರೆ. ಕೃಷ್ಣನಿಗೆ ತ್ರಿಕಾಲದರ್ಶಿಯೆಂದು ಹೇಳಲಾಗುವುದಿಲ್ಲ, ಅವರು ಮೂರು ಕಾಲಗಳ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ ಏಕೆಂದರೆ ಕೃಷ್ಣನಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವೇ ಇಲ್ಲ. ಕೃಷ್ಣನು ಚಿಕ್ಕ ಮಗುವಾಗಿದ್ದಾನೆಂದು ಹೇಳುತ್ತಾರೆ. ದೈವೀ ರಾಜಕುಮಾರ-ಕುಮಾರಿಯರು ಕಾಲೇಜಿಗೆ ಓದಲು ಹೋಗುತ್ತಾರೆ. ಮೊದಲು ಇಲ್ಲಿಯೂ ಸಹ ರಾಜಕುಮಾರ-ಕುಮಾರಿಯರ ಕಾಲೇಜುಗಳಿತ್ತು, ಈಗ ಒಂದೇ ಬೆರಕೆಯಾಗಿ ಬಿಟ್ಟಿದೆ. ಕೃಷ್ಣನು ರಾಜಕುಮಾರನಾಗಿದ್ದನು, ಅನ್ಯ ರಾಜಕುಮಾರ-ಕುಮಾರಿಯರೂ ಇರುತ್ತಾರೆ, ಎಲ್ಲರೂ ಒಟ್ಟಿಗೆ ಓದುತ್ತಾರೆ. ಅದಂತೂ ನಿರ್ವಿಕಾರಿ ಪ್ರಪಂಚವಾಗಿದೆ, ಒಬ್ಬ ಶಿವ ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ. ಮನುಷ್ಯರು ಸರ್ವರ ಸದ್ಗತಿದಾತನಾಗಲು ಸಾಧ್ಯವಿಲ್ಲ. ತಂದೆಯೇ ಬಂದು ಸರ್ವರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ದೇವತೆಗಳ ರಾಜ್ಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಧರ್ಮಗಳು ಅರ್ಧದಿಂದ ಬರುತ್ತವೆ ಅಂದಮೇಲೆ ಸತ್ಯಯುಗದಲ್ಲಿ ಈ ಧರ್ಮಗಳಿರಲು ಹೇಗೆ ಸಾಧ್ಯ! ಇವರು ನಿವೃತ್ತಿ ಮಾರ್ಗದವರು ಹಠಯೋಗಿಗಳಾಗಿದ್ದಾರೆ. ರಾಜಯೋಗವನ್ನು ತಿಳಿದುಕೊಂಡಿಲ್ಲ. ಪ್ರವೃತ್ತಿ ಮಾರ್ಗದವರಿಗಾಗಿ ಈ ರಾಜಯೋಗವಿದೆ, ಭಾರತವು ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಕಲಿಯುಗದಲ್ಲಿ ಪತಿತ ಪ್ರವೃತ್ತಿ ಮಾರ್ಗದವರಾಗಿ ಬಿಟ್ಟಿದ್ದೀರಿ. ಭಗವಾನುವಾಚ, ನನ್ನೊಬ್ಬನನ್ನೇ ನೆನಪು ಮಾಡಿರಿ. ಹಳೆಯ ಪ್ರಪಂಚ ಅಥವಾ ದೇಹದ ಸಂಬಂಧಗಳೊಂದಿಗೆ ಮನಸ್ಸನ್ನಿಟ್ಟರೆ ಅದೃಷ್ಟವು ಕೆಟ್ಟು ಹೋಗುವುದು. ಅನೇಕರ ಅದೃಷ್ಟವು ಕೆಟ್ಟು ಹೋಗುತ್ತದೆ. ಯಾರಾದರೂ ಅಕರ್ತವ್ಯ ಮಾಡಿದ್ದರೆ ಅಂತಿಮದಲ್ಲಿ ಅದೆಲ್ಲವೂ ಮುಂದೆ ಬರುತ್ತದೆ, ಸಾಕ್ಷಾತ್ಕಾರವಾಗುತ್ತದೆ. ಕೆಲವು ಮಕ್ಕಳು ಬಹಳ ಮುಚ್ಚಿಡುತ್ತಾರೆ. ಈ ಜನ್ಮದಲ್ಲಿ ಮಾಡಿರುವ ಪಾಪಕರ್ಮಗಳನ್ನು ತಂದೆಗೆ ತಿಳಿಸುವುದರಿಂದ ಅರ್ಧ ಶಿಕ್ಷೆಯು ಕಳೆದು ಹೋಗುವುದು. ಆದರೆ ಸಂಕೋಚಕ್ಕೊಳಗಾಗಿ ತಿಳಿಸುವುದೇ ಇಲ್ಲ. ಬಹಳ ಕೊಳಕು ಕೆಲಸಗಳನ್ನು ಮಾಡುತ್ತಾರೆ. ಬುದ್ಧಿಯಲ್ಲಿ ನೆನಪಂತೂ ಇರುತ್ತದೆ ಆದರೆ ಅದನ್ನು ತಿಳಿಸುವುದರಿಂದ ಶಿಕ್ಷೆಯಿಂದ ಮುಕ್ತರಾಗುವಿರಿ. ಇವರು ಅವಿನಾಶಿ ಸರ್ಜನ್ ಆಗಿದ್ದಾರೆ. ಇರುವ ಕಾಯಿಲೆಯನ್ನು ಸಂಕೋಚಕ್ಕೊಳಗಾಗಿ ಸರ್ಜನ್ಗೆ ತಿಳಿಸಲಿಲ್ಲವೆಂದರೆ ಅದು ಕಳೆಯುವುದಾದರೂ ಹೇಗೆ? ಯಾವುದೇ ವಿಕರ್ಮ ಮಾಡಿದ್ದರೂ ಸಹ ತಿಳಿಸುವುದರಿಂದ ಅರ್ಧ ಪಾಪವು ತುಂಡಾಗುವುದು. ತಿಳಿಸದೇ ಇದ್ದರೆ ಅದು ವೃದ್ಧಿಯಾಗುತ್ತಾ ಹೋಗುವುದು. ಹೆಚ್ಚು ಸಿಕ್ಕಿ ಹಾಕಿಕೊಳ್ಳುತ್ತಾ ಹೋಗುವಿರಿ ಮತ್ತೆ ಅದೃಷ್ಟವು ಸಮಾಪ್ತಿಯಾಗಿ ದುರಾದೃಷ್ಟವಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ – ದೇಹದೊಂದಿಗೂ ಸಂಬಂಧವನ್ನು ಇಡಬೇಡಿ.ಯಾವಾಗಲೂ ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮಿಂದ ಯಾವುದೇ ಕೆಟ್ಟ ಕೆಲಸವಾಗುವುದಿಲ್ಲ. ಇವರು ಧರ್ಮರಾಜನೂ ಆಗಿದ್ದಾರೆ, ಅವರೊಂದಿಗೂ ಮುಚ್ಚಿಡುತ್ತಾ ಇದ್ದರೆ ಮತ್ತೆ ನಿಮ್ಮಷ್ಟು ಶಿಕ್ಷೆ ಮತ್ತ್ಯಾರಿಗೂ ಸಿಗುವುದಿಲ್ಲ. ಸಮಯವು ಎಷ್ಟು ಸಮೀಪಿಸುತ್ತಾ ಹೋಗುವುದೋ ಎಲ್ಲರಿಗೂ ಸಾಕ್ಷಾತ್ಕಾರವಾಗುತ್ತಾಹೋಗುವುದು. ಈಗ ಎಲ್ಲರ ಅಂತಿಮ ಸಮಯವಾಗಿದೆ, ಎಲ್ಲರೂ ಪತಿತರಾಗಿದ್ದಾರೆ. ಪಾಪಗಳ ಶಿಕ್ಷೆಯು ಖಂಡಿತ ಸಿಗುತ್ತದೆ. ಹೇಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುವುದೋ ಹಾಗೆಯೇ ಒಂದು ಸೆಕೆಂಡಿನಲ್ಲಿ ಶಿಕ್ಷೆಗಳ ಈ ರೀತಿ ಅನುಭವವಾಗುತ್ತದೆ ಹೇಗೆ ಬಹಳ ಸಮಯದಿಂದ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ ಎಂಬಂತೆ. ಇದು ಬಹಳ ಸೂಕ್ಷ್ಮ ಮೆಷಿನರಿಯಾಗಿದೆ, ಎಲ್ಲರ ಅಂತಿಮ ಸಮಯವಾಗಿದೆ. ಶಿಕ್ಷೆಗಳನ್ನು ಖಂಡಿತವಾಗಿಯೂ ಅನುಭವಿಸಬೇಕಾಗಿದೆ ನಂತರ ಎಲ್ಲಾ ಆತ್ಮರು ಪವಿತ್ರರಾಗಿ ಹೊರಟು ಹೋಗುವರು. ತಂದೆಯು ಬಂದು ಪತಿತ ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ. ತಂದೆಯ ವಿನಃ ಮತ್ತ್ಯಾರಿಗೂ ಈ ಶಕ್ತಿಯಿಲ್ಲ. 63 ಜನ್ಮಗಳಿಂದ ಪಾಪಗಳನ್ನು ಮಾಡುತ್ತಾ-ಮಾಡುತ್ತಾ ಈಗ ಪಾಪದ ಕೊಡವು ತುಂಬಿದೆ. ಮಾಯೆಯ ಗ್ರಹಣವು ಎಲ್ಲರಿಗೂ ಹಿಡಿದಿದೆ. ದೊಡ್ಡ ಗ್ರಹಣವು ನಿಮಗೆ ಹಿಡಿದಿದೆ, ನೀವೇ ಸರ್ವಗುಣ ಸಂಪನ್ನರಾಗಿದ್ದಿರಿ, ನಿಮ್ಮ ಮೇಲೆ ಗ್ರಹಣ ಹಿಡಿದಿದೆ. ಜ್ಞಾನವೂ ಸಹ ಈಗ ನೀವು ಮಕ್ಕಳಿಗೆ ಸಿಕ್ಕಿದೆ. ತಂದೆಯು ತಿಳಿಸುತ್ತಾರೆ – ನೀವು ಭಾರತದ ಮಾಲೀಕರಾಗಿದ್ದಿರಿ ನಂತರ 84 ಜನ್ಮಗಳನ್ನು ನೀವು ತೆಗೆದುಕೊಂಡಿರಿ. ನೀವು ಅವಶ್ಯವಾಗಿ ದೇವಿ-ದೇವತಾ ಧರ್ಮದವರಾಗಿದ್ದಿರಿ, ಮತ್ತೆ ಪತಿತರಾದ ಕಾರಣ ಹಿಂದೂಗಳೆಂದು ಕರೆಸಿಕೊಂಡಿದ್ದಿರಿ ಎಂದು ತಂದೆಯು ನೇರವಾಗಿ ತಿಳಿಸುತ್ತಾರೆ. ಹಿಂದೂ ಧರ್ಮವನ್ನು ಯಾರೂ ಸ್ಥಾಪನೆ ಮಾಡಿಯೇ ಇಲ್ಲ. ಮಠಪಂಥಕ್ಕೆ ರಾಜಧಾನಿ ಎಂದು ಹೇಳುವುದಿಲ್ಲ. ರಾಜ್ಯವು ರಾಜರಿಗಿರುತ್ತದೆ. ಮೊದಲನೇ ಲಕ್ಷ್ಮೀ-ನಾರಾಯಣ, ಎರಡನೇ ಲಕ್ಷ್ಮೀ-ನಾರಾಯಣ……ಹೀಗೆ ರಾಜ್ಯವು ನಡೆಯುತ್ತದೆ. ಇದೂ ಸಹ ಅವಶ್ಯವಾಗಿದೆ, ಪಾವನರಿಂದ ಪತಿತರಾಗಲೇಬೇಕಾಗಿದೆ. ಪತಿತರಾಗುವ ಕಾರಣ ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನೀವು ತಿಳಿದುಕೊಳ್ಳುತ್ತೀರಿ, ನಾವು ಪೂಜ್ಯ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ತಮ್ಮ ಧರ್ಮದ ಚಿತ್ರಗಳನ್ನೇ ಪೂಜಿಸುತ್ತಾರೆ. ನಾವೇ ಪೂಜ್ಯ ದೇವಿ-ದೇವತೆಗಳಾಗಿದ್ದೆವು, ಈಗ ಪೂಜಾರಿಗಳಾಗಿದ್ದೇವೆ ಎಂಬುದನ್ನೇ ಮರೆತು ಹೋಗಿದ್ದೇವೆ. ತಂದೆಯು ಆಸ್ತಿಯನ್ನು ಕೊಟ್ಟಿದ್ದರು, ನಂತರ ಪತಿತರಾದೆವು ಆದ್ದರಿಂದ ನಮ್ಮದೇ ಚಿತ್ರಗಳಿವೆ. ಕುಳಿತು ಪೂಜೆ ಮಾಡಿದೆವು ಎಂದು ನೀವೀಗ ತಿಳಿದುಕೊಳ್ಳುತ್ತೀರಿ. ತಾವೇ ಪೂಜ್ಯ, ತಾವೇ ಪೂಜಾರಿ. ಇದು ಭಾರತದ ವಿನಃ ಮತ್ತ್ಯಾರಿಗೂ ಹೇಳುವುದಿಲ್ಲ, ತಂದೆಯೂ ಸಹ ಭಾರತದಲ್ಲಿಯೇ ಬಂದು ಪುನಃ ದೇವಿ-ದೇವತೆಗಳನ್ನಾಗಿ ಮಾಡಲು ಜ್ಞಾನ ಕೊಡುತ್ತಾರೆ. ಉಳಿದೆಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ಹೊರಟು ಹೋಗುತ್ತಾರೆ. ಆತ್ಮರೆಲ್ಲರೂ ಓ ಗಾಡ್ ಫಾದರ್ ಎಂದು ತಂದೆಯನ್ನು ಕರೆಯುತ್ತಾ ಇರುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಸಮಯದಲ್ಲಿ ನಿಮಗೆ ಮೂವರು ತಂದೆಯರಿದ್ದಾರೆ, ಒಬ್ಬರು ಶಿವ ತಂದೆ, ಇನ್ನೊಬ್ಬರು ಲೌಕಿಕ ತಂದೆ ಮತ್ತು ಇವರು ಅಲೌಕಿಕ ತಂದೆ ಪ್ರಜಾಪಿತ ಬ್ರಹ್ಮಾನಾಗಿದ್ದಾರೆ. ಮತ್ತೆಲ್ಲರಿಗೆ ಇಬ್ಬರು ತಂದೆಯರಿದ್ದಾರೆ, ಲೌಕಿಕ ಮತ್ತು ಪಾರಲೌಕಿಕ. ಸತ್ಯಯುಗದಲ್ಲಿ ಕೇವಲ ಒಬ್ಬರೇ ಲೌಕಿಕ ತಂದೆಯಿರುತ್ತಾರೆ. ಪಾರಲೌಕಿಕ ತಂದೆಯನ್ನು ಅರಿತುಕೊಂಡೇ ಇಲ್ಲ. ಅಲ್ಲಂತೂ ಸುಖವೇ ಸುಖವಿರುತ್ತದೆ ಅಂದಮೇಲೆ ಮತ್ತೆ ಪಾರಲೌಕಿಕ ತಂದೆಯನ್ನು ಏಕೆ ನೆನಪು ಮಾಡುವರು! ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ, ಇಲ್ಲಿ ನಿಮಗೆ ಮೂವರು ತಂದೆಯರಿರುತ್ತಾರೆ, ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ, ನಂತರ ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಇಲ್ಲಿ ನೀವು ಆತ್ಮಾಭಿಮಾನಿಗಳೂ ಆಗಿದ್ದೀರಿ, ಪರಮಾತ್ಮಾಭಿಮಾನಿಗಳೂ ಆಗಿದ್ದೀರಿ. ನಾವೆಲ್ಲರೂ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಿಮಗೆ ಶುದ್ಧ ಅಭಿಮಾನವಿದೆ. ತಂದೆಯು ಶಿಕ್ಷಕ, ಸದ್ಗುರುವೂ ಆಗಿದ್ದಾರೆ, ಅವರ ಮಹಿಮೆಯನ್ನೂ ಸಹ ತಿಳಿಸಬೇಕಾಗಿದೆ. ಅವರೇ ಬಂದು ಎಲ್ಲಾ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ನಿಮಗೆ ಆಸ್ತಿಯಿತ್ತು, ನಂತರ 84 ಜನ್ಮಗಳನ್ನು ತೆಗೆದುಕೊಂಡು ಅದನ್ನು ಕಳೆದುಕೊಂಡಿದ್ದೀರಿ. ಇದನ್ನು ತಿಳಿಸುವುದು ಎಷ್ಟು ಸಹಜವಾಗಿದೆ, ತಂದೆಗೆ ಪತಿತ-ಪಾವನ, ಸರ್ವರ ಸದ್ಗತಿದಾತನೆಂದು ಹೇಳಲಾಗುತ್ತದೆ. ಈ ಪ್ರಪಂಚವೇ ಪತಿತರದಾಗಿದೆ. ಯಾರೂ ಸದ್ಗತಿ ಕೊಡಲು ಸಾಧ್ಯವಿಲ್ಲ. ಬಾಕಿ ಯಾರಾದರೂ ಬಹಳ ಶಾಸ್ತ್ರಗಳನ್ನು ಓದಿದ್ದರೆ ಅವರದು ಅಂತ್ಯಮತಿ ಸೋ ಗತಿಯಾಗುತ್ತದೆ. ನಂತರದ ಜನ್ಮದಲ್ಲಿ ಬಾಲ್ಯದಲ್ಲಿಯೇ ಎಲ್ಲವನ್ನೂ ಕಂಠಪಾಠ ಮಾಡಿ ಬಿಡುತ್ತಾರೆ. ತಂದೆಯು ನೀವು ಮಕ್ಕಳಿಗೆ ಎಷ್ಟು ಒಳ್ಳೆಯ ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ – ಮಕ್ಕಳೇ, ನಿವು ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಪುನಃ ತಂದೆಯನ್ನು ನೆನಪು ಮಾಡಿರಿ ಆಗ ತುಕ್ಕು ಕಳೆಯುವುದು. ಈಗ ನಾಟಕವು ಪೂರ್ಣವಾಗುತ್ತದೆ. ಎಲ್ಲರೂ ಇಲ್ಲಿ ರಾಜರಾಗಬೇಕಾಗಿದೆ. ಕ್ರೈಸ್ಟ್ ಮೊದಲಾದವರೆಲ್ಲರ ಆತ್ಮಗಳು ಹಾಜರಿದ್ದಾರೆ, ಅವರೂ ಸಹ ತಂದೆಯ ಬಳಿ ಸಲಾಮು ಹೊಡೆಯಲು ಬರುವರು. ಅವರಂತೂ ಚಕ್ರವರ್ತಿ ರಾಜರಾಗುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡುತ್ತಾರೆ. ಮನ್ಮನಾಭವದ ಮಂತ್ರವನ್ನು ತೆಗೆದುಕೊಂಡು ಹೋಗುತ್ತಾರೆ. ನಿಮ್ಮದು ಮನ್ಮನಾಭವ ಮತ್ತು ಮಧ್ಯಾಜೀಭವದ ಡಬಲ್ ಮಂತ್ರವಾಗಿದೆ. ತಂದೆಯು ಎಷ್ಟು ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಆತ್ಮ ಮತ್ತು ಶರೀರ ಎರಡನ್ನೂ ಪಾವನ ಮಾಡಿಕೊಳ್ಳಲು ದೇಹ ಸಹಿತವಾಗಿ ಏನೆಲ್ಲವೂ ಇದೆಯೋ ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡಿ ಅವರ ಶ್ರೀಮತದಂತೆ ನಡೆಯಬೇಕಾಗಿದೆ.

2. ಮಾತಾಪಿತರ ಸಿಂಹಾಸನಕ್ಕೆ ಅಧಿಕಾರಿಗಳಾಗಲು ಸ್ವಯಂನ್ನು ಯೋಗ್ಯರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಯೋಗ್ಯರಾಗುವುದಕ್ಕಾಗಿ ಮುಖ್ಯವಾಗಿ ಪವಿತ್ರತೆಯನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಯಾವಾಗ ಯಾವುದೇ ವಸ್ತುವನ್ನು ಸಾಕಾರದಲ್ಲಿ ನೋಡುತ್ತೀರೆಂದರೆ, ಅದನ್ನು ಬಹಳ ಬೇಗನೆ ಗ್ರಹಿಸಲಾಗುತ್ತದೆ. ಆದ್ದರಿಂದ ಯಾರು ನಿಮಿತ್ತವಾಗಿರುವ ಶ್ರೇಷ್ಠವಾದ ಆತ್ಮರಿದ್ದಾರೆಯೋ, ಅವರ ಸೇವೆ, ತ್ಯಾಗ, ಸ್ನೇಹ ಹಾಗೂ ಸರ್ವರ ಸಹಯೋಗಿಯಾಗಿರುವ ಪ್ರತ್ಯಕ್ಷ ಕರ್ಮವನ್ನು ನೋಡುತ್ತಾ, ಯಾವ ಪ್ರೇರಣೆಯು ಸಿಗುತ್ತದೆಯೋ ಅದು ವರದಾನವೇ ಆಗಿ ಬಿಡುತ್ತದೆ. ನಿಮಿತ್ತವಾಗಿರುವ ಆತ್ಮರ ಕರ್ಮದಲ್ಲಿ ಈ ಧಾರಣೆಗಳನ್ನು ಯಾವಾಗ ನೋಡುತ್ತೀರಿ, ಆಗ ಸಹಜ ಕರ್ಮಯೋಗಿ ಆಗುವಂತಹ ವರದಾನವೇ ಸಿಕ್ಕಿ ಬಿಡುತ್ತದೆ. ಯಾರು ಈ ರೀತಿ ವರದಾನಗಳನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾ ಇರುತ್ತಾರೆಯೋ, ಅವರು ಸ್ವಯಂ ಸಹ ಮಾಸ್ಟರ್ ವರಾದಾತಾ ಆಗಿ ಬಿಡುತ್ತಾರೆ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯಗಳು – “ಸತ್ಯ ಸಾಮ್ರಾಟ ತಂದೆಯೊಂದಿಗೆ ಸತ್ಯವಾಗಿರಿ”

ತಮಗೆ ಇದೇ ಸಮಯದಲ್ಲಿ ಪರಮಾತ್ಮನ ಮೂಲಕ ಈ ಆದೇಶವು ಸಿಕ್ಕಿರುತ್ತದೆ – ನಿರಂತರವಾಗಿ ನನ್ನ ನೆನಪಿನಲ್ಲಿರಿ. ಯೋಗದ ಪರಿಭಾಷೆಯಾಗಿದೆ – ಈಶ್ವರೀಯ ನೆನಪಿನಲ್ಲಿರುವುದು. ಯೋಗವೆಂದರೆ ಧ್ಯಾನವಲ್ಲ. ನಮ್ಮ ಈ ಸಹಜಯೋಗವು, ನಡೆಯುತ್ತಾ-ಸುತ್ತಾಡುತ್ತಾ, ಕೆಲಸ ಕಾರ್ಯಗಳನ್ನು ಮಾಡುತ್ತಿರುವಾಗಲೂ ಅವರ ನೆನಪಿನಲ್ಲಿರುವುದು – ಇದನ್ನೇ ಅಟೂಟ ಅಖಂಡ ಯೋಗವೆಂದು ಹೇಳಲಾಗುತ್ತದೆ. ಆದರೆ ಇದರಲ್ಲಿ ನಿರಂತರವಾಗಿ ಇರುವ ಅಭ್ಯಾಸದ ಅವಶ್ಯಕತೆಯಿದೆ. ಒಂದುವೇಳೆ ಅವರ ಆದೇಶದಲ್ಲಿ ಆದೇಶ ಪಾಲಕರು ಆಗಿರುವುದಿಲ್ಲ ಅಥವಾ ಯಾವುದಾದರೂ ಆಜ್ಞೆಯ ಉಲ್ಲಂಘನೆ ಮಾಡಿದರೆ ಅವಶ್ಯವಾಗಿ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಅವರ ಆದೇಶವಿದೆ – ನಾನು ಎಂತಹ ಕರ್ಮವನ್ನು ಮಾಡುವೆನೋ, ನನ್ನನ್ನು ನೋಡಿ ನೀವೂ ಪ್ರತಿ ಹೆಜ್ಜೆಯನ್ನು ಹಾಕಿರಿ, ಇಲ್ಲದಿದ್ದರೆ ಮಾಯೆಯ ಪೆಟ್ಟನ್ನು ಅನುಭವಿಸುವಿರಿ. ಸತ್ಯ ಸಾಮ್ರಾಟನೊಂದಿಗೆ ಸತ್ಯವಾಗಿರಿ, ಮಾಯೆಯ ಯಾವುದೇ ವಿಘ್ನಗಳು ಸತಾಯಿಸುತ್ತದೆಯೆಂದರೆ, ಅದನ್ನೂ ಇವರ ಮುಂದೆ ಇಡಬೇಕಾಗಿದೆ. ಅವರ ಸಹಯೋಗದಿಂದ ಆ ಮಾಯೆಯೂ ದೂರವಾಗಿ ಬಿಡುತ್ತದೆ ಮತ್ತು ಮಾರ್ಗವೂ ಸ್ಪಷ್ಟವಾಗಿ ಬಿಡುತ್ತದೆ. ಆನಂತರ ಎಲ್ಲಿ ಕೂರಿಸುತ್ತಾರೆ, ಹೇಗೆ ನಡೆಸುತ್ತಾರೆಯೋ, ಏನು ತಿನ್ನಿಸುವರು…. ಅದರ ಮಾರ್ಗಗಳು ಸ್ಪಷ್ಟವಾಗಿ ಬಿಡುತ್ತದೆ. ಈ ರೀತಿ ಜೊತೆ ಕೊಡುವ ಸಾಹಸವು ಬಹಳಷ್ಟಿರಬೇಕು. ಇಂತಹ ಮಹಾನ್ ಸೌಭಾಗ್ಯಶಾಲಿಗಳಂತು ಬಹಳ ಸ್ವಲ್ಪವೇ ಹೊರ ಬರುತ್ತಾರೆ, ಅವರೇ ವಿಜಯ ಮಾಲೆಯಲ್ಲಿ ಹೋಗುವರು. ಉಳಿದವರು ಭಾಗ್ಯಶಾಲಿಯಾಗಿದ್ದಾರೆ, ಅವರು ಅಲ್ಪ ಸ್ವಲ್ಪ ತೆಗೆದುಕೊಂಡು ಹೋಗಿ ಪ್ರಜೆಗಳಾಗುವರು. ಅಂದಾಗ ಸ್ವಲ್ಪದರಲ್ಲಿಯೇ ಖುಷಿಯಾಗಬಾರದು, ತಮ್ಮ ಇಚ್ಛೆಯಂತು ಸಂಪೂರ್ಣವಾಗುವುದರಲ್ಲಿ ಇರಲಿ, ಇದರಲ್ಲಿಯೇ ಮುಂದುವರೆಯಬೇಕು ಎನ್ನುವ ಸಾಹಸವನ್ನಿಡಿ. ಇದರಲ್ಲಿ ಮಾಯೆಯು ವಿಘ್ನಗಳನ್ನು ಹಾಕುತ್ತದೆ ಆದರೆ ಅದರ ಮೇಲೆ ವಿಜಯವನ್ನು ಸಾಧಿಸಬೇಕಾಗಿದೆ, ಇದರಲ್ಲೇನಾದರೂ ತಪ್ಪಾಯಿತೆಂದರೆ ನಿಶ್ಚಯದ ಕೊರತೆ, ತಮ್ಮ ಧಾರಣೆಗಳಲ್ಲಿ ಕೊರತೆಯಿದೆ ಎಂದರ್ಥ. ಇದಂತು ತಮ್ಮ ಪ್ರತಿಜ್ಞೆಯಾಗಿದೆ, ಇದರಲ್ಲಿ ಲೋಕ ಮರ್ಯಾದೆ, ಕುಲ-ಮರ್ಯಾದೆಯನ್ನು ಮುರಿಯಬೇಕಾಗುತ್ತದೆ, ಯಾವಾಗ ಈ ರೀತಿ ಮಾಡುವಿರೋ ಆಗಲೇ ಸತ್ಯ ಪಾರಲೌಕಿಕ ದೈವೀ ಮರ್ಯಾದೆಗಳನ್ನು ಪಡೆದುಕೊಳ್ಳುವಿರಿ. ಈಗ ಈ ವಿಕಾರಿ ಪ್ರಪಂಚವಂತು ಹೊರಟು ಹೋಗುವುದಿದೆ, ಉದಾ: ಮೀರಾಭಾಯಿಯೂ ಸಹ ಲೋಕ-ಮರ್ಯಾದೆಯನ್ನು ಮುರಿದು ಬಿಟ್ಟಳು, ಅದರಿಂದಲೇ ಗಿರಿಧರನನ್ನು ಪಡೆದಳು. ಒಂದುವೇಳೆ ಅದೇ ಲೋಕ-ಮರ್ಯಾದೆಗಳನ್ನು ಇಟ್ಟುಕೊಳ್ಳುತ್ತೀರೆಂದರೆ, ಈ ದೈವೀ ಪ್ರಪಂಚದವರಂತೆ ತಯಾರಾಗಲು ಸಾಧ್ಯವಿಲ್ಲ. ಈಗ ಈಶ್ವರೀಯ ಸಲಹೆಯನ್ನು ಕಲ್ಯಾಣಾರ್ಥವಾಗಿ ಕೊಡಲಾಗುತ್ತದೆ, ಆದರೆ ಈಗ ಏನು ಮಾಡಬೇಕು, ಯಾವುದು ಅವಶ್ಯಕವಿದೆ ಎನ್ನುವುದರ ಬಗ್ಗೆ ಬುದ್ಧಿಯಿಂದ ನಿರ್ಣಯ ತೆಗೆದುಕೊಳ್ಳಬೇಕಾಗಿದೆ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top