01 July 2022 KANNADA Murli Today | Brahma Kumaris
Read and Listen today’s Gyan Murli in Kannada
30 June 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ನೀವು ಮಾಸ್ಟರ್ ಪ್ರೀತಿಯ ಸಾಗರರಾಗಬೇಕಾಗಿದೆ, ಎಂದೂ ಯಾರಿಗೂ ದುಃಖವನ್ನು ಕೊಡಬಾರದಾಗಿದೆ, ಒಬ್ಬರು ಇನ್ನೊಬ್ಬರ ಜೊತೆ ತುಂಬಾ ಪ್ರೀತಿಯಿಂದ ಇರಬೇಕಾಗಿದೆ”
ಪ್ರಶ್ನೆ:: -
ಮಾಯೆಯ ನಡೆಯುತ್ತಾ-ನಡೆಯ್ಯುತ್ತಾ ಎಂತಹ ಮಕ್ಕಳ ಕುತ್ತಿಗೆಯನ್ನು ಒಂದೇ ಸಲ ಹಿಚುಕುತ್ತದೆ?
ಉತ್ತರ:-
ಯಾರಿಗಾದರೂ ಯಾವುದೇ ಮಾತಿನಲ್ಲಿ ಸ್ವಲ್ಪ ಸಂಶಯ ಬರುತ್ತದೆ, ಕ್ರೋಧ ಅಥವಾ ಕಾಮದ ಗ್ರಹಚಾರಿಯು ಕುಳಿತುಕೊಳ್ಳುತ್ತದೆ, ಅವರು ವಿದ್ಯೆಯನ್ನೇ ಬಿಟ್ಟು ಬಿಡುತ್ತಾರೆ ಎನ್ನುವುದು ಅರ್ಥವಾಗುವುದೇ ಇಲ್ಲ. ಬುದ್ಧಿಯ ಬೀಗವೇ ಬಂದ್ ಆಗಿಬಿಡುತ್ತದೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ನೀವು ಪ್ರೀತಿಯ ಸಾಗರ ಆಗಿದ್ದೀರಿ..
ಓಂ ಶಾಂತಿ. ಇದು ತಂದೆಯ ಮಹಿಮೆಯಾಗಿದೆ. ಭಕ್ತರೆಲ್ಲರೂ ಈ ಗೀತೆಯನ್ನು ಹಾಡುತ್ತಾರೆ ಎನ್ನು ವುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ಎಷ್ಟೊಂದು ಪ್ರೀತಿಯ ಸಾಗರನಾಗಿದ್ದಾರೆ. ಎಲ್ಲಾ ಪತಿತರನ್ನು ಪಾವನ ಮಾಡುತ್ತಾರೆ. ಎಲ್ಲಾ ಮಕ್ಕಳಿಗೆ ಸುಖಧಾಮದ ಆಸ್ತಿಯನ್ನು ಕೊಡುತ್ತಾರೆ. ನಾವು ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ. ಯಾವಾಗ ಅರ್ಧ ಕಲ್ಪ ಮಾಯೆಯ ರಾಜ್ಯವಿರುತ್ತದೆ ಆಗ ಇಂತಹ ಪ್ರೀತಿಯ ತಂದೆ ಇರುವುದಿಲ್ಲ. ಅರ್ಥವಾಗುವುದೇ ಇಲ್ಲ, ಬೇಹದ್ದಿನ ತಂದೆಯ ಪ್ರೀತಿಯ ಸಾಗರನಾಗಿದ್ದಾರೆ. ಅವರು ಹೇಗೆ ಪ್ರೀತಿಯ, ಶಾಂತಿಯ, ಸುಖದ ಸಾಗರನಾಗಿದ್ದಾರೆ ಎನ್ನುವುದನ್ನು ನೀವೀಗ ಅರಿತುಕೊಂಡಿದ್ದೀರಿ. ಪ್ರತ್ಯಕ್ಷ ರೂಪದಲ್ಲಿ ನೀವು ಮಕ್ಕಳಿಗೆ ಸಿಗುತ್ತಿದೆ. ಭಕ್ತಿ ಮಾರ್ಗದವರಿಗೆ ಸಿಗುವುದಿಲ್ಲ. ಅವರು ಕೇವಲ ಹಾಡುತ್ತಾರೆ, ನೆನಪು ಮಾಡುತ್ತಾರೆ. ಈಗ ಆ ನೆನಪು ಪೂರ್ಣವಾಗುತ್ತಿದೆ. ಮಕ್ಕಳು ಸಮ್ಮುಖದಲ್ಲಿ ಕುಳಿತಿದ್ದೀರಿ ಮತ್ತು ಬೇಹದ್ದಿನ ತಂದೆಯೇ ಇದು ಗಾಯನವಾಗಿದೆ ಎಂದು ತಿಳಿಯುತ್ತೀರಿ. ಅವಶ್ಯವಾಗಿ ಆ ತಂದೆಯು ಇಷ್ಟೊಂದು ಪ್ರೀತಿಯನ್ನು ಕೊಟ್ಟು ಹೋಗಿದ್ದಾರೆ. ಸತ್ಯಯುಗದಲ್ಲಿಯೂ ಸಹ ಪ್ರತಿಯೊಬ್ಬರೂ ಒಬ್ಬರು ಇನ್ನೊಬ್ಬರನ್ನು ತುಂಬಾ ಪ್ರೀತಿ ಮಾಡುತ್ತಾರೆ. ಪ್ರಾಣಿಗಳಲ್ಲಿಯೂ ಸಹ ಪರಸ್ಪರ ತುಂಬಾ ಪ್ರೀತಿ ಇರುತ್ತದೆ. ಆದರೆ ಇಲ್ಲಂತೂ ಅದು ಇಲ್ಲವೇ ಇಲ್ಲ. ಸತ್ಯಯುಗದಲ್ಲಿ ಪರಸ್ಪರ ಪ್ರೀತಿ ಇಲ್ಲದೇ ಇರುವಂತಹ ಪ್ರಾಣಿಗಳು ಇರುವುದೇ ಇಲ್ಲ. ನೀವು ಮಕ್ಕಳಿಗೂ ಸಹ ಇದನ್ನು ಕಲಿಸಲಾಗುತ್ತದೆ. ಇಲ್ಲಿ ನೀವು ಮಾಸ್ಟರ್ ಪ್ರೀತಿಯ ಸಾಗರರಾಗುತ್ತೀರೆಂದರೆ ನಿಮ್ಮ ಆ ಸಂಸ್ಕಾರವು ಅವಿನಾಶಿ ಆಗಿ ಬಿಡುತ್ತದೆ. ಇಲ್ಲಿ ಒಬ್ಬರು ಇನ್ನೊಬ್ಬರಿಗೆ ಶತ್ರುಗಳಾಗಿದ್ದಾರೆ ಏಕೆಂದರೆ ರಾವಣ ರಾಜ್ಯವಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ ಕಲ್ಪದ ಹಿಂದಿನ ತರಹ ಚಾಚು ತಪ್ಪದೆ ನಿಮ್ಮನ್ನು ಈಗ ತುಂಬಾ ಪ್ರಿಯರನ್ನಾಗಿ ಮಾಡುತ್ತೇನೆ. ಎಂದಾದರೂ ಯಾರ ಶಬ್ದವನ್ನಾದರು ಕೇಳಿರುತ್ತೀರಿ, ಕೋಪ ಮಾಡಿಕೊಳ್ಳುತ್ತಾರೆಂದರೆ ತಂದೆಯ ಶಿಕ್ಷಣ ಕೊಡುತ್ತಾರೆ – ಮಕ್ಕಳೇ ಕೋಪ ಮಾಡಿಕೊಳ್ಳುವುದು ಸರಿ ಅಲ್ಲ. ಇದರಿಂದ ನೀವು ದುಃಖಿ ಆಗುತ್ತೀರಿ, ಅನ್ಯರನ್ನು ದುಃಖಿಗಳನ್ನಾಗಿ ಮಾಡುತ್ತೀರಿ ಎಂದು. ಹೇಗೆ ಲೌಕಿಕ ತಂದೆಯು ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಾರೆ, ಅವರು ಹದ್ದಿನ ಸುಖವನ್ನು ಕೊಡುವವರಾಗಿದ್ದಾರೆ. ಈ ತಂದೆಯ ಬೇಹದ್ದಿನ ಮತ್ತು ಸದಾ ಕಾಲದ ಸುಖವನ್ನು ಕೊಡುವವರಾಗಿದ್ದಾರೆ ಎಂದಾಗ ನೀವು ಮಕ್ಕಳೂ ಸಹ ಒಬ್ಬರು ಇನ್ನೊಬ್ಬರಿಗೆ ದುಃಖವನ್ನು ಕೊಡಬಾರದು, ಅರ್ಧಕಲ್ಪ ತುಂಬಾ ದುಃಖವನ್ನು ಕೊಟ್ಟಿದ್ದೀರಿ, ರಾವಣನು ತುಂಬಾ ಕೆಟ್ಟವರನ್ನಾಗಿ ಮಾಡಿದ್ದಾನೆ. ಈಗ ನಿಮಗೆ ಪ್ರಕಾಶವು ಸಿಗುತ್ತಿದೆ. ಈ ನಾಟಕದ ಚಕ್ರವು ಸುತ್ತುತ್ತಾ ಇರುತ್ತದೆ. ಒಂದು ವೇಳೆ ನೀವು ಜ್ಞಾನದ ವಿಸ್ತಾರವನ್ನು ಅರಿತುಕೊಳ್ಳಲಾಗುವುದಿಲ್ಲವೆಂದರೆ ಎರಡು ಅಕ್ಷರವನ್ನೇ ನೆನಪು ಮಾಡಿ. ಬೇಹದ್ದಿನ ತಂದೆಯಿಂದ ನಮಗೆ ಈ ಆಸ್ತಿಯು ಸಿಗುತ್ತದೆ. ಯಾರು ಎಷ್ಟು ತಂದೆಯನ್ನು ನೆನಪು ಮಾಡಿ ಕಮಲಪುಷ್ಪ ಸಮಾನ ಪವಿತ್ರರಾಗಿರುತ್ತಾರೋ ಅರ್ಥಾತ್ ವಿಕಾರಗಳ ಮೇಲೆ ಜಯವನ್ನು ಪಡೆಯುತ್ತಾರೆಯೋ ಅಷ್ಟು ಆಸ್ತಿಯ ಅಧಿಕಾರಿಗಳಾಗುತ್ತಾರೆ. ವಿಕಾರವೂ ಸಹ ಅನೇಕ ಪ್ರಕಾರದ್ದಾಗಿದೆ. ಶ್ರೀಮತದ ಮೇಲೆ ನಡೆಯದೇ ಇರುವುದೂ ಸಹ ವಿಕಾರವಾಗಿದೆ. ಶ್ರೀಮತದ ಮೇಲೆ ನಡೆಯುವುದರಿಂದ ನೀವು ನಿರ್ವಿಕಾರಿಗಳು ಆಗುತ್ತೀರಿ. ನನ್ನೊಬ್ಬನನ್ನೇ ನೆನಪು ಮಾಡಬೇಕಾಗಿದೆ ಮತ್ಯಾರನ್ನೂ ನೆನಪು ಮಾಡಬಾರದಾಗಿದೆ, ತಂದೆಯು ಬ್ರಹ್ಮಾರವರ ಮುಖಾಂತರ ತಿಳಿಸುತ್ತಾರೆ – ಮಕ್ಕಳೇ ನಾನು ಬಂದಿದ್ದೇನೆ, ನಾನು ಎಲ್ಲರನ್ನು ಕರೆದುಕೊಂಡು ಹೋಗುವವನಿದ್ದೇನೆ. ಪ್ರತಿಯೊಂದು ಧರ್ಮದಲ್ಲೂ ನಂಬರ್ವಾರ್ ಇರುತ್ತಾರೆ. ಪೋಪ್ ನಿಗೂ ಸಹ ತುಂಬಾ ಗೌರವವಿದೆ. ಈ ಸಮಯದಲ್ಲಂತೂ ಎಲ್ಲರೂ ಅಂಧ ಶ್ರದ್ಧೆಯಲ್ಲಿದ್ದಾರೆ. ನೀವು ಒಬ್ಬ ತಂದೆ ವಿನಃ ಮತ್ಯಾರಿಗೂ ಮಾನ್ಯತೆಯನ್ನು ಕೊಡುವುದಿಲ್ಲ. ಎಲ್ಲರು ತಾತ್ಕಾಲಿಕ ಆಗಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ತೆಗೆದುಕೊಳ್ಳುತ್ತಾ ಪತಿತರಾಗುತ್ತಾರೆ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆ ಅವರು ಅಂತ್ಯದಲ್ಲಿ ಪೂರ್ತಿ ಪತಿತರಾಗಲೇ ಬೇಕಾಗಿದೆ. ಪತಿತ ಪಾವನ ಹೆಸರನ್ನಂತೂ ಹೇಳುತ್ತಾರೆ ಆದರೆ ವಿಸ್ತಾರವಾಗಿ ಅರಿತುಕೊಂಡಿಲ್ಲ. ಇದು ಪತಿತರ ಪ್ರಪಂಚವಾಗಿರುವುದರಿಂದ ಇದಕ್ಕೇನು ಬೆಲೆ ಇರುತ್ತದೆ. ಹೇಗೆ ಪೋಪ್ ಫಸ್ಟ್ ಆಗಿದ್ದಾರೆ, ಸೆಕೆಂಡ್, ಥರ್ಡ್ನಲ್ಲಿ ನಡೆಯುತ್ತಾ ಬರುತ್ತಾರೆ, ಇಳಿಯುತ್ತಾ ಬರುತ್ತಾರೆ. ಅವರನ್ನು ನಂಬರ್ ವಾರ್ ಆಗಿ ತೋರಿಸುತ್ತಾರೆ ಮತ್ತು ಅವರು ನಂಬರ್ ವಾರ್ ಆಗಿಯೇ ತಮ್ಮ ಪದವಿಯನ್ನು ಪಡೆಯುತ್ತಾರೆ. ಈ ಚಕ್ರವನ್ನು ನೀವೀಗ ಒಳ್ಳೆಯ ರೀತಿಯಲ್ಲಿ ತಿಳಿದುಕೊಂಡಿದ್ದೀರಿ. ಇಲ್ಲಿ ಬೇಹದ್ದಿನ ತಂದೆಯ ಬಳಿ ಬರುತ್ತೀರಿ, ಇವರಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಸಾಕಾರದಲ್ಲೆ ಅಲ್ಲದೆ ಆಸ್ತಿಯು ಸಿಗುವುದಿಲ್ಲ. ತಂದೆಯು ತಿಳಿಸುತ್ತಾರೆ – ಮಕ್ಕಳೇ ದೇಹಧಾರಿಗಳನ್ನು ನೆನಪು ಮಾಡಬೇಡಿ. ಶ್ರೇಷ್ಠಾತಿ ಶ್ರೇಷ್ಠ ಒಬ್ಬ ತಂದೆಯನ್ನೇ ನೆನಪು ಮಾಡಬೇಕು. ಇದು ತುಂಬಾ ದೊಡ್ಡ ಆಜ್ಞೆಯಾಗಿದೆ – ಮಕ್ಕಳೇ ನನ್ನ ಒಬ್ಬನನ್ನೇ ನೆನಪು ಮಾಡಿ. ದೇಹಧಾರಿಗಳನ್ನು ನೆನಪು ಮಾಡಿದರೆ ಅವರ ನೆನಪಿನಿಂದ ಪುನಃ ಪುರ್ನಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ನೆನಪಿನ ಯಾತ್ರೆಯು ನಿಂತು ಹೋಗುತ್ತದೆ. ವಿಕರ್ಮ ವಿನಾಶ ವಿನಾಶವಾಗುವುದಿಲ್ಲ. ತುಂಬಾ ನಷ್ಟವಾಗಿ ಬಿಡುತ್ತದೆ. ವ್ಯಾಪಾರದ ಲಾಭವೂ ಬರುತ್ತದೆ, ನಷ್ಟವೂ ಆಗುತ್ತದೆ. ನಿರಾಕಾರ ತಂದೆಯನ್ನು ಮಾಂತ್ರಿಕ, ವ್ಯಾಪಾರಿ ಎಂತಲೂ ಹೇಳುತ್ತಾರೆ. ದಿವ್ಯ ದೃಷ್ಟಿಯ ಬೀಗದ ಕೈ ತಂದೆಯ ಕೈಯಲ್ಲಿ ಇದೆ ಎನ್ನುವುದನ್ನು ನೀವು ತಿಳಿದುಕೊಂಡಿದ್ದೀರಿ, ಭಲೆ ಏನನ್ನೇ ನೋಡಿದಿರಿ, ಕೃಷ್ಣನ ಸಾಕ್ಷಾತ್ಕಾರವನ್ನೇ ಮಾಡಿದಿರಿ ಎಂದರೂ ಸಹ ಇದರಿಂದ ಲಾಭವಾದರೂ ಏನು? ಏನೇನೂ ಇಲ್ಲ. ಈ ವಿದ್ಯೆಯಂತೂ ನಾಟಕದ ಚಕ್ರವನ್ನು ಅ ರಿತುಕೊಳ್ಳುವ ವಿದ್ಯೆಯಾಗಿದೆಯಲ್ಲವೇ, ಎಷ್ಟು ತಂದೆಯನ್ನು ನೆನಪು ಮಾಡುತ್ತೀರಿ, ಚಕ್ರವನ್ನು ತಿರುಗಿಸುತ್ತೀರೆಂದರೆ ಅಷ್ಟು ಉತ್ತಮ ಪದವಿಯನ್ನು ಪಡೆಯುತ್ತೀರಿ. ಈಗ ನೀವು ನನ್ನ ಮಕ್ಕಳಾಗಿದ್ದೀರಿ, ಈ ನೆನಪು ಬರುತ್ತದೆಯಲ್ಲವೇ, ನಾವು ತಂದೆಯ ಮಕ್ಕಳಾಗಿದ್ದವು. ನಾವಾತ್ಮಗಳು ಪರಮಧಾಮದಲ್ಲಿ ಇದ್ದೆವು. ಅಲ್ಲಿ ಮಾತನಾಡುವ ಅವಶ್ಯಕತೆ ಇರುವುದಿಲ್ಲ. ನಾಟಕವು ತನಗೆ ತಾನೇ ನಡೆಯುತ್ತಾ ಇರುತ್ತದೆ. ಹೇಗೆ ಮೀನುಗಳ ಗೊಂಬೆಗಳನ್ನು ತೋರಿಸುತ್ತಾರಲವೇ. ಅದರಲ್ಲಿ ಸಾಲಿನಲ್ಲಿ ಮೀನುಗಳು ಸುತ್ತುತ್ತಾ ಇರುತ್ತವೆ. ಈ ರೀತಿ ಸುತ್ತುತ್ತಾ ಇರುವುದನ್ನು ನಿಧಾನ – ನಿಧಾನವಾಗಿ ಕೆಳಗೆ ಇಳಿಯುತ್ತದೆ. ಹಾಗೆಯೇ ಯಾರೆಲಾ ಆತ್ಮಗಳು ಇದ್ದಾರೆ ಎಲ್ಲರೂ ನಾಟಕದ ಸಾಲಿನಲ್ಲಿ ಬಂಧಿತರಾಗಿದ್ದಾರೆ. ಆ ಸಾಲಿನಲ್ಲೇ ಸುತ್ತುತ್ತಾ ಇರುತ್ತಾರೆ. ಈಗ ಏರುವ ಕಲೆಯಾಲಾಗಿದೆ ಮತ್ತೆ ಇಳಿಯಲು ತೊಡಗುತ್ತಾರೆ. ಈಗ ನಮ್ಮದು ಏರುವ ಕಲೆಯಾಗಿದೆ, ಜ್ಞಾನಸಾಗರ ತಂದೆಯು ಬಂದಿದ್ದಾರೆ, ಏರುವ ಕಲೆ ಮತ್ತು ಇಳಿಯುವ ಕಲೆಯನ್ನು ನೀವು ತಿಳಿದುಕೊಂಡಿದ್ದೀರಿ, ಎಷ್ಟು ಸಹಜವಾಗಿದೆ. ಇಳಿಯುವ ಕಲೆ ನೋಡಿ ಎಷ್ಟೊಂದು ಸಮಯ ಹಿಡಿಸುತ್ತದೆ. ನಂತರ ಹೇಗೆ ಏರುವ ಕಲೆಯಾಗುತ್ತದೆ. ತಂದೆಯು ಬಂದು ಪರಿವರ್ತನೆ ಮಾಡುತ್ತಾರೆ ಎನ್ನುವುದನೂ ಸಹ ನೀವೇ ತಿಳಿದುಕೊಂಡಿದ್ದೀರಿ, ಮೊದ ಮೊದಲು ಆದಿ ಸನಾತನ ದೇವಿ ದೇವತಾ ಧರ್ಮವಾಗಿದೆ ನಂತರ ಅನ್ಯ ಧರ್ಮಗಳು ಬರುತ್ತಾ ಇರುತ್ತವೆ. ನಮ್ಮದು ಏರುವ ಕಲೆಯಾಗಿದೆ, ಇಳಿಯುವ ಕಲೆಯು ಪೂರ್ಣವಾಯಿತು. ಇದು ತಮೋಪ್ರಧಾನ ಪ್ರಪಂಚ ಎನ್ನುವುದು ನೀವು ಮಕ್ಕಳಿಗೆ ತಿಳಿದಿದೆ. ಈ ಬಿರುಗಾಳಿ ಮುಂತಾದುವುಗಳಂತೂ ಏನೇನೂ ಅಲ್ಲ. ಅಂತ್ಯದಲ್ಲಿ ಬಿರುಗಾಳಿಗಳಂತೂ ಈ ರೀತಿ ಬರುತ್ತವೆ. ದೊಡ್ಡ ದೊಡ್ಡ ಮಹಲಗಳೇ ಬಿದ್ದು ಹೋಗುತ್ತವೆ. ತುಂಬಾ ದುಃಖದ ಸಮಯವು ಬರುವುದಿದೆ. ಇದು ವಿನಾಶದ ಸಮಯವಾಗಿದೆ. ಎಲ್ಲರೂ ಅಯ್ಯಯ್ಯೋ, ತ್ರಾಹಿ ತ್ರಾಹಿ ಎನ್ನುತ್ತಿರುತ್ತಾರೆ, ಎಲ್ಲರ ಬಾಯಿಂದ ಅಯೋ ಭಗವಂತನೇ ಎನ್ನುವ ಶಬ್ದವೇ ಹೊರಡುತ್ತದೆ. ಭಗವಂತನನ್ನು ನೆನಪು ಮಾಡುತ್ತಿರುತ್ತಾರೆ. ನೇಣು ಗಂಭಕ್ಕೆ ಏರಿಸುವಾಗಲೂ ಸಹ ಪಾದ್ರಿ ಮುಂತಾದವರು ಗಾಡ್ ಫಾದರ್ ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಆದರೆ ಅರಿತುಕೊಂಡಿಲ್ಲ. ತಮ್ಮ ಆತ್ಮನನ್ನೂ ಸಹ ಯಥಾರ್ತ ರೀತಿಯಲ್ಲಿ ಅರಿತುಕೊಂಡಿಲ್ಲ. ನಾನು ಆತ್ಮ ಏನಾಗಿದ್ದೇನೆ? ಯಾವ ಪಾತ್ರವನ್ನು ಅಭಿನಯಿಸುತ್ತೇನೆ? ಏನನ್ನೂ ಅರಿತುಕೊಂಡಿರುವುದಿಲ್ಲ? ಆತ್ಮವು ತುಂಬಾ ಚಿಕ್ಕದಾಗಿದೆ. ನಕ್ಷತ್ರದ ತರಹ ಚಿಕ್ಕದಾಗಿದೆ ಎಂದು ಹೇಳುತ್ತಾರೆ, ಆತ್ಮನ ಸಾಕ್ಷಾತ್ಕಾರವು ಸಹ ಅನೇಕರಿಗೆ ಆಗುತ್ತದೆ. ತುಂಬಾ ಸಣ್ಣ ಲೈಟ್ ಆಗಿದೆ, ಬಿಂದುವಿನ ತರಹ ಬೆಳ್ಳನೆಯ ಲೈಟ್ ಆಗಿದೆ, ಅದನ್ನು ದಿವ್ಯ ದೃಷ್ಟಿಯ ವಿನಃ ಯಾರೂ ನೋಡಲು ಸಾಧ್ಯವಿಲ್ಲ. ಒಂದು ವೇಳೆ ನೋಡಿದರೂ ಸಹ ಅರ್ಥವಾಗುವುದಿಲ್ಲ. ಜ್ಞಾನವಿಲ್ಲದೆ ಏನೂ ಸಹ ಅರ್ಥವಾಗುವುದಿಲ್ಲ. ಅನೇಕ ಸಾಕ್ಷಾತ್ಕಾರಗಳಂತೂ ಆಗುತ್ತವೆ. ಆದರೆ ಇದು ದೊಡ್ಡ ಮಾತೆನಲ್ಲ ಇಲ್ಲಂತೂ ಬುದ್ಧಿಯಿಂದ ಅರ್ಥ ಮಾಡಿಕೊಳ್ಳುತ್ತೀರಿ, ತಂದೆಯು ಯಥಾರ್ತ ರೀತಿಯಲ್ಲಿಯೇ ತಿಳಿಸುತ್ತಾರೆ, ಆತ್ಮನನ್ನು 84 ಜನ್ಮಗಳ ಪಾತ್ರವು ನಿಗದಿಯಾಗಿದೆ ಎನ್ನುವ ಮಾತು ನೀವು ಮಕ್ಕಳ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ, ಯಾರು ಬ್ರಾಹ್ಮಣ ಮಕ್ಕಳಾಗುತ್ತಾರೆ, ಅವರಿಗೇನೇ ತಂದೆಯು ತಿಳಿಸುತ್ತಾರೆ ಮತ್ತು ಅವರಿಗೇನೇ 84 ಜನ್ಮಗಳಿರುತ್ತವೆ. ಇದು ಅನ್ಯ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. 84 ಜನ್ಮಗಳ ಚಕ್ರವಾಗಿದೆ ಎನ್ನುವುದನ್ನು ನೀವು ಸರಿಯಾಗಿ ತಿಳಿದುಕೊಳ್ಳುತ್ತೀರಿ, ಮೊದಲು ಬ್ರಾಹ್ಮಣರ ಗಾಯನವಿದೆ ಏಕೆಂದರೆ ಮುಖವಂಶಾವಳಿ ಬ್ರಾಹ್ಮಣರಾಗಿದ್ದಾರಲ್ಲವೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ, ಬ್ರಹ್ಮಾಕುಮಾರ-ಕುಮಾರಿಯರು ಎಂದರೆ ಸಾಮಾನ್ಯ ಮಾತಾಗಿ ಬಿಟ್ಟಿದೆ. ಈ ಸಂಸ್ಥೆಯು ಏನಾಗಿದೆ? ಈ ಹೆಸರು ಏಕೆ ಬಂದಿದೆ? ಎನ್ನುವುದನ್ನು ಯಾರೂ ತಿಳಿದುಕೊಂಡಿಲ್ಲ. ಪ್ರಜಾಪಿತ ಬ್ರಹ್ಮಾ ಎಂಬ ಹೆಸರನ್ನು ಹಾಕುವುದರಿಂದ ಏಕೆ ಎನ್ನುವ ಪ್ರಶ್ನೆಯು ಹೊರಟೇ ಹೋಗುತ್ತದೆ. ನೀವು ಹೇಳಬಹುದು ಶಿವತಂದೆಯ ಮಕ್ಕಳೆಲ್ಲರೂ ಸಹೋದರ ಸಹೋದರಿಯರಾಗಿದ್ದಾರೆ, ನಂತರ ಪ್ರಜಾಪಿತ ಬ್ರಹ್ಮನ ಮಕ್ಕಳಾದ ಕಾರಣ ಸಹೋದರ ಸಹೋದರಿಯರಾಗಿದ್ದೇವೆ. ಇದನ್ನು ಅರಿತುಕೊಳ್ಳುವುದರಿಂದ ಪ್ರಶ್ನೆಯು ಬರುವುದಿಲ್ಲ. ಹೊಸ ಪ್ರಪಂಚವು ಸ್ಥಾಪನೆಯಾಗುತ್ತದೆ ಎಂದು ತಿಳಿಯುತ್ತಾರೆ. ಅವಶ್ಯವಾಗಿ ಬ್ರಹ್ಮಾರವರ ಮುಖಾಂತರ ನೀವು ಪತಿತರಿಂದ ಪಾವನರಾಗುತ್ತೀರಿ, ಈ ರಕ್ಷಾ ಬಂಧನ ಮುಂತಾದುವುಗಳನ್ನು ಆಚರಿಸುತ್ತಾರೆ, ಇವು ಹಳೆಯ ಪದ್ಧತಿಯಾಗಿ ನಡೆಯುತ್ತಾ ಬರುತ್ತವೆ. ಈಗ ನೀವು ಅರ್ಥವನ್ನು ತಿಳಿದುಕೊಂಡಿದ್ದೀರಿ, ಯಾವುದೆಲ್ಲ ನೆನಪಾರ್ಥಗಳಿವೆ, ಈ ಸಮಯದಲ್ಲಿ ಅವೆಲ್ಲದರ ಜ್ಞಾನವು ನಿಮಗೆ ಸಿಗುತ್ತದೆ. ಸತ್ಯಯುಗದಲ್ಲಿ ರಾಮ ನವಮಿಯನ್ನು ಆಚರಿಸುತ್ತಾರೇನು ! ಅಲ್ಲಿ ಆಚರಿಸುವ ಮಾತೇ ಇರುವುದಿಲ್ಲ, ಅಲ್ಲಂತೂ ಜ್ಞಾನ ಇರುವುದೇ ಇಲ್ಲ. ನಮ್ಮದು ಇಳಿಯುವ ಕಲೆಯಾಗುತ್ತದೆ ಎನ್ನುವುದೂ ಸಹ ಅವರಿಗೆ ತಿಳಿದಿರುವುದಿಲ್ಲ. ಸುಖದಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ. ಅಲ್ಲಿ ಯೋಗ ಬಲದಿಂದ ಜನ್ಮವಾಗುತ್ತದೆ. ವಿಕಾರದ ಹೆಸರೇ ಇರುವುದಿಲ್ಲ ಏಕೆಂದರೆ ರಾವಣ ರಾಜ್ಯವೇ ಇರುವುದಿಲ್ಲ. ಅಂತೂ ಸಂಪೂರ್ಣ ನಿರ್ವಿಕಾರಿಗಳಾಗಿರುತ್ತಾರೆ. ಮೊದಲಿನಿಂದಲೂ ಸಾಕ್ಷಾತ್ಕಾರವಾಗುತ್ತದೆ. ಇಲ್ಲವೆಂದರೆ ಹೇಗೆ ಸಿದ್ಧವಾಗುತ್ತದೆ. ಅವರು ಒಂದು ಹಳೆಯ ಶರೀರವನ್ನು ಬಿಟ್ಟು ಇನ್ನೊಂದು ಹೊಸದನ್ನು ತೆಗೆದುಕೊಳ್ಳುತ್ತಾರೆ ಎಂದು ಇಲ್ಲಿಂದ ಮೊದಲು ನೀವು ಶಾಂತಿಧಾಮಕ್ಕೆ ಹೋಗುತ್ತೀರಿ, ಮಕ್ಕಳಿಗೆ ಇದು ತಿಳಿದಿದೆ, ಅದು ನಮ್ಮ ಮನೆಯಾಗಿದೆ, ಅದನ್ನೇ ಶಾಂತಿಧಾಮವೆಂದು ಹೇಳುತ್ತಾರೆ. ಅದು ನಮ್ಮ ಅಥವಾ ತಂದೆಯ ಮನೆಯಾಗಿದೆ, ಅದೇ ತಂದೆಯನ್ನೇ ನೆನಪು ಮಾಡುತ್ತೇವೆ. ಆ ತಂದೆಯಿಂದಲೇ ಅಗಲಿದ್ದೀರಿ, ಆದ್ದರಿಂದ ನೆನಪು ಮಾಡುತ್ತೀರಿ, ವಾನಪ್ರಸ್ಥದಲ್ಲಿರುತ್ತಾರೆ, ಪ್ರಪಂಚದಲ್ಲಿ ಮನುಷ್ಯರು ಯಾವಾಗ ವೃದ್ಧರಾಗುತ್ತಾರೋ ಆಗ ವಾನ ಪ್ರಸವನ್ನು ತೆಗೆದುಕೊಳ್ಳುತ್ತಾರೆ. ಆದರೆ ಪರಮಪಿತ ಪರಮಾತ್ಮನನ್ನು ವೃದ್ಧರೆಂದು ಹೇಳುತ್ತಾರೆಯೇ? ಯುವಕ ಹಾಗು ವೃದ್ಧ ಶರೀರವೇ ಆಗುತ್ತದೆ, ಆತ್ಮನಂತೂ ಅದೇ ಆಗಿದೆ. ಆತ್ಮನಿಗೆ ಮಾಯೆಯ ನೆರಳು ಬೀಳುತ್ತದೆ. ನೀವೀಗ ಎಲ್ಲವನ್ನೂ ಅರಿತುಕೊಂಡಿದ್ದೀರಿ, ಮೊದಲು ಅರಿತುಕೊಂಡಿರಲಿಲ್ಲ, ರಚಯಿತ ಮತ್ತು ರಚನೆಯ ರಹಸ್ಯವನ್ನು ತಂದೆಯು ತಿಳಿಸಿದ್ದಾರೆ. ನೀವು ಮಕ್ಕಳು ಸಮ್ಮುಖದಲ್ಲಿ ಕುಳಿತಿದ್ದೀರಿ, ನಿಮ್ಮದು ಬಹಳ ಮಹಿಮೆ ಇದೆ. ಅಧ್ಯಕ್ಷರು, ಅಧ್ಯಕ್ಷರೇ ಆಗಿದ್ದಾರೆ. ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿಯೇ ಆಗಿದ್ದಾರೆ. ಎಲ್ಲರಿಗೆ ಒಳ್ಳೆಯ ಪಾತ್ರವು ಸಿಕ್ಕಿದೆ. ತಂದೆಯು ಶ್ರೇಷ್ಠಾತಿ ಶ್ರೇಷ್ಠ ಎನ್ನುವ ಗಾಯನವಿದೆ, ಎಂದಾಗ ಅವಶ್ಯವಾಗಿ ನಮಗೆ ಶ್ರೇಷ್ಠ ಮತಿ ಶ್ರೇಷ್ಠ ಆಸ್ತಿಯೂ ಸಿಗಬೇಕಲ್ಲವೇ, ಎಷ್ಟೊಂದು ತಿಳುವಳಿಕೆಯ ಮಾತಾಗಿದೆ. ಹೇಗೆ ತಂದೆಯು ತಿಳಿಸುತ್ತಾರೆ ಹಾಗೆಯೇ ಮಕ್ಕಳೂ ಸಹ ತಿಳಿಸಬೇಕಾಗಿದೆ. ಮೊದಲು ತಂದೆಯ ಪರಿಚಯವನ್ನು ಕೊಡಬೇಕಾಗಿದೆ, ಆಸ್ತಿಯೂ ತಂದೆಯಿಂದಲೇ ಸಿಗುತ್ತದೆ. ನಿಮ್ಮದು ಪ್ರವೃತ್ತಿ ಮಾರ್ಗವಾಗಿರುವುದರಿಂದ ಬುದ್ಧಿಯಲ್ಲಿ ಚಕ್ರವು ಸುತ್ತಬೇಕು, ಅವಶ್ಯವಾಗಿ ಸರ್ವೀಸ್ ಮಾಡಬೇಕಾಗಿದೆ. ದಿನ ಪ್ರತಿದಿನ ತುಂಬಾ ಸಹಜವಾಗುತ್ತಾ ಹೋಗುತ್ತದೆ. ಆಗಲೇ ಪ್ರಜೆಗಳು ವೃದ್ಧಿಯಾಗುತ್ತಾರೆ. ಸಹಜವಾಗಿ ಸಿಗುವುದರಿಂದ ಸಹಜವಾಗಿ ನಿಶ್ಚಯವಾಗಿ ಬಿಡುತ್ತದೆ. ಹೊಸ – ಹೊಸಬರು ಒಳ್ಳೆಯ ಉತ್ಸಾಹದಲ್ಲಿ ತೊಡಗುತ್ತಾರೆ, ಪೂರ್ಣ ನಿಶ್ಯಯವು ಕುಳಿತು ಬಿಡುತ್ತದೆ. ನಂಬರ್ ವಾರ್ ಪುರುಷಾರ್ಥದನುಸಾರ ಎಲ್ಲರ ಪಾತ್ರವು ನಡೆಯುತ್ತಾ ಇದೆ. ಪ್ರತಿಯೊಬ್ಬರೂ ಸತ್ಯ ಸಂಪಾದನೆಯನ್ನು ಮಾಡಿಕೊಳ್ಳುವ ಪುರುಷಾರ್ಥ ಮಾಡುತ್ತಿದ್ದಾರೆ. ಸತ್ಯ ಮತ್ತು ಸುಳ್ಳು ಸಂಪಾದನೆಯ ಅಂತರವಂತೂ ಇರುತ್ತದೆಯಲ್ಲವೆ. ಸತ್ಯ ರತ್ನಗಳು ದೂರದಿಂದಲೇ ಹೊಳೆಯುತ್ತವೆ. ಇಂದಿನ ಕಾಲದ ಮನುಷ್ಯರಿಗೆ ಹಣವನ್ನು ಇಟ್ಟುಕೊಳ್ಳಲು ತುಂಬಾ ಕಷ್ಟವಿದೆ, ಎಲ್ಲಿ ಇಟ್ಟುಕೊಳ್ಳುವುದು, ಎಲ್ಲಿ ಬಚ್ಚಿಡುವುದು! ಹಣವು ಬಿದ್ದಿರುತ್ತದೆ, ಅಂತಹ ಸಮಯವೂ ಬರುತ್ತದೆ ಯಾರೂ ಏನೂ ಮಾಡುವುದಿಲ್ಲ, ನೀವೂ ಮಕ್ಕಳಿಗೂ ಸಹ ನಂಬರ್ ವಾರ್ ಬುದ್ಧಿಯ ಬೀಗವು ತೆರೆಯುತ್ತಾ ಹೋಗುತ್ತದೆ, ಎಲ್ಲಿಯಾದರೂ ಗ್ರಹಚಾರವು ಕುಳಿತುಕೊಳ್ಳುತ್ತದೆ ಎಂದರೆ ಒಂದಲ್ಲ ಒಂದು ಸಂಶಯವು ಬಂದು ಬಿಡುತ್ತದೆ. ವಿದ್ಯೆಯನ್ನೇ ಬಿಟ್ಟು ಬಿಡುತ್ತಾರೆ, ಅವರಿಗೆ ಅರ್ಥವಾಗುವುದೇ ಇಲ್ಲ; ನಾವು ಓದುತ್ತಿದ್ದೆವು, ಓದಿಸುತ್ತಿದ್ದೆವು, ಈಗ ಏನಾಗಿಬಿಟ್ಟಿದೆ. ಸ್ವಲ್ಪ ಸಂಶಯವು ಬಂದರೂ ಸಹ ಗಂಟಲು ಕಟ್ಟುತ್ತದೆ. ತಂದೆಯಲ್ಲಿ ಸಂಶಯ ಬಂದಿತೆಂದರೆ, ವಿಕಾರದಲ್ಲಿ ಹೋಗುತ್ತಾರೆ ಎಂದರೆ ಒಂದೇ ಸಲ ಬಿದ್ದು ಬಿಡುತ್ತಾರೆ. ಕಾಮ ಮತ್ತು ಕ್ರೋಧವು ಎಲ್ಲದಕ್ಕಿಂತ ದೊಡ್ಡ ಶತ್ರುವಾಗಿದೆ, ಮೋಹವೂ ಸಹ ಕಡಿಮೆ ಇಲ್ಲ, ಸನ್ಯಾಸಿಗಳಿಗೆ ತಮ್ಮ ಜೀವನದ ಸ್ಮೃತಿ ಇರುವುದಿಲ್ಲವೆಂದಲ್ಲ, ಎಲ್ಲವೂ ಸ್ಮೃತಿಯಿರುತ್ತದೆ. ಜ್ಞಾನಿ ತೂ ಆತ್ಮ ಮಕ್ಕಳು ಸನ್ನೆಯಿಂದಲೇ ಅರಿತುಕೊಳ್ಳುತ್ತಾರೆ. ಯಾರು ಬರುತ್ತಾರೆ? ಏನಾಗುತ್ತದೆ? ಇದೆಲ್ಲವೂ ಸೆಕೆಂಡ್ ಬೈ ಸೆಕಂಡ್ ನಾಟಕವು ನಡೆಯುತ್ತಾ ಇರುತ್ತದೆ. ನಾಟಕದಲ್ಲಿ ನಿಗದಿಯಾಗಿದೆ. ಯಾರು ಕಲ್ಪದ ಮೊದಲು ಇದ್ದರು, ಅವರೇ ಮಾಡುತ್ತಾರೆ ಇಮರ್ಜ್ ಆಗುತ್ತದೆ. ನಾಟಕದ ಪಾತ್ರವು ಸೆಕೆಂಡ್ ಬೈ ಸೆಕೆಂಡ್ ತೆರೆಯುತ್ತಾ ಹೋಗುತ್ತದೆ. ತಂದೆಯ ನೆನಪು ಮುಖ್ಯವಾಗಿದೆ, ಇದರಿಂದಲೇ ವಿಕರ್ಮ ವಿನಾಶವಾಗುತ್ತದೆ. ಎಷ್ಟು ತಂದೆಯ ನೆನಪಿನಲ್ಲಿ ತೊಡಗಿರುತ್ತೀರಿ ಅಷ್ಟು ವಿಕರ್ಮ ವಿನಾಶ ಆಗುತ್ತಾ ಇರುತ್ತದೆ. ಇಲ್ಲವೆಂದರೆ ತಂದೆಯು ಧರ್ಮರಾಜನ ರೂಪದಲ್ಲಿ ಸಾಕ್ಷಾತ್ಕಾರ ಮಾಡಿಸುತ್ತಾರೆ. ಈಗಲೂ ಸಹ ಅನೇಕರಿದ್ದಾರೆ ಅವರು ನಡೆಯುತ್ತಾ ನಡೆಯುತ್ತಾ ಅನೇಕ ತಪ್ಪುಗಳನ್ನು ಮಾಡುತ್ತಾ ಇರುತ್ತಾರೆ, ತಿಳಿಸುವುದೇ ಇಲ್ಲ. ತುಂಬಾ ಒಳ್ಳೆಯ ಹೆಸರುಗಳು ಇವೆ. ಆದರೆ ಎಷ್ಟು ಕಡಿಮೆ ಪದವಿಯಾಗುತ್ತದೆ ಎನ್ನುವುದನ್ನು ತಂದೆಯು ಅರಿತುಕೊಂಡಿದ್ದಾರೆ. ಎಷ್ಟು ಗ್ರಹಚಾರಿ ಇರುತ್ತದೆ, ಉಲ್ಟಾ ವಿಕರ್ಮಗಳನ್ನು ಮಾಡಿ ತಂದೆಯೊಂದಿಗೆ ಮುಚ್ಚಿಡುತ್ತಿರುತ್ತಾರೆ. ಸತ್ಯ ತಂದೆಯ ಮುಂದೆ ಯಾವುದೇ ಮಾತು ಮುಚ್ಚಿಡಲು ಸಾಧ್ಯವಿಲ್ಲ, ನಿಮ್ಮದು ಮೌಲ್ಯವೂ ಮೇಲೆ ನೊಂದಾಯಿಸಲ್ಪಡುತ್ತದೆ. ಅಂರ್ತಯಾಮಿ ತಂದೆಯಂತೂ ಅವರಾಗಿದ್ದಾರಲ್ಲವೇ. ನಾವು ಮುಚ್ಚಿಟ್ಟುಕೊಂಡು ವಿಕರ್ಮ ಮಾಡುತ್ತೇವೆಂದರೆ ತುಂಬಾ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿದುಕೊಳ್ಳಬೇಕು, ನಾವು ಬ್ರಹ್ಮಾಣರು ಸಂಭಾಲನೆ ಮಾಡುವುದಕ್ಕೆ ನಿಮಿತ್ತರಾಗಿದ್ದೇವೆ. ನಮ್ಮಲ್ಲಿಯೇ ಈ ಅಭ್ಯಾಸ ಇರುವುದು ಸರಿಯಲ್ಲ. ಶಾಲೆಯಲ್ಲಿ ಶಿಕ್ಷಕರ ರಿಪೋರ್ಟ್ ಆಗುತ್ತದೆ ಎಂದರೆ ಪ್ರಿನ್ಸಿಪಾಲರು ಅವರನ್ನು ದೊಡ್ಡ – ಸಭೆಯ ಮಧ್ಯೆ ತೆಗೆದುಹಾಕುತ್ತಾರೆ. ಆದ್ದರಿಂದ ತುಂಬಾ ಭಯವಿರಬೇಕು. ನೀವು ಒಬ್ಬ ಶಿವತಂದೆಯನ್ನು ನೆನಪು ಮಾಡಬೇಕಾಗಿದೆ, ತಂದೆ ತಿಳಿಸುತ್ತಾರೆ – ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ನೀವಂತೂ ನನ್ನ ಹತ್ತಿರ ಬರಬೇಕಾಗುತ್ತದೆ. ಆದ್ದರಿಂದ ನನ್ನನ್ನೇ ನೆನಪು ಮಾಡಬೇಕು ಮತ್ತು ಸ್ಪದರ್ಶನ ಚಕ್ರವನ್ನು ತಿರುಗಿಸಬೇಕು ಮತ್ತ್ಯಾರನ್ನಾದರೂ ನೆನಪು ಮಾಡುತ್ತೀರೆಂದರೆ ನಿಮ್ಮ ಆತ್ಮಿಕ ಯಾತ್ರೆಯು ಬಂದ್ ಆಗಿ ಬಿಡುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಮಾಯೆಯ ಗ್ರಹಚಾರಿಯಿಂದ ರಕ್ಷಿಸಿಕೊಳ್ಳಲು ಸತ್ಯತಂದೆಯೊಂದಿಗೆ ಸದಾ ಸತ್ಯವಾಗಿರಬೇಕು, ಯಾವುದೇ ತಪ್ಪು ಮಾಡಿ ಮುಚ್ಚಿಡಬಾರದಾಗಿದೆ. ಉಲ್ಬಾ ಕರ್ಮಗಳಿಂದ ಮುಕ್ತರಾಗಿರಬೇಕಾಗಿದೆ.
2. ಶ್ರೀಮತದ ಮೇಲೆ ನಡೆಯದೇ ಇರುವುದು ಸಹ ವಿಕಾರವಾಗಿದೆ, ಆದ್ದರಿಂದ ಎಂದೂ ಶ್ರೀಮತದ ಉಲಂಘನೆ ಮಾಡಬಾರದಾಗಿದೆ. ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ.
ವರದಾನ:-
ಯಾರಲ್ಲಿ ಸತ್ಯತೆಯ ಶಕ್ತಿಯಿದೆಯೋ ಅವರೇ ಮಹಾನ್ ಆತ್ಮರು. ಆದರೆ ಸತ್ಯತೆಯ ಜೊತೆ ಸಭ್ಯತೆಯು ಸಹ ಅವಶ್ಯವಾಗಿ ಬೇಕು. ಈ ರೀತಿಯ ಸತ್ಯತೆಯ ಸಭ್ಯತೆಯುಳ್ಳ ಮಹಾನ್ ಆತ್ಮರ ಮಾತನಾಡುವುದು, ನೋಡುವುದು, ನಡೆಯುವುದು, ತಿನ್ನುವುದು-ಕುಡಿಯುವುದು, ಎದ್ದೆಳುವುದು-ಕುಳಿತುಕೊಳ್ಳುವುದು ಪ್ರತಿ ಕರ್ಮದಲ್ಲಿ ಸಭ್ಯತೆ ಸ್ವತಃವಾಗಿ ಕಾಣಿಸುವುದು. ಒಂದುವೇಳೆ ಸಭ್ಯತೆಯಿಲ್ಲವೆಂದರೆ ಸತ್ಯತೆ ಇಲ್ಲ. ಸತ್ಯತೆ ಎಂದೂ ಸಿದ್ಧ ಮಾಡುವುದರಿಂದ ಇದ್ಧವಾಗುವುದಿಲ್ಲ. ಅದಕ್ಕಂತೂ ಸಿದ್ಧವಾಗುವ ಸಿದ್ಧಿ ಪ್ರಾಪ್ತಿಯಾಗಿದೆ. ಸತ್ಯತೆಯ ಸೂರ್ಯನನ್ನು ಯಾರು ಮುಚ್ಚಲು ಸಾಧ್ಯವಿಲ್ಲ.
ಸ್ಲೋಗನ್:-
➤ Email me Murli: Receive Daily Murli on your email. Subscribe!